ರಾಮ್ ಪೋತಿನೇನಿ ಹೊಸ ಚಿತ್ರಕ್ಕೆ ಭಾಗ್ಯಶ್ರೀ ಬೋರ್ಸೆ ನಾಯಕಿ

Public TV
1 Min Read

‘ಸ್ಕಂದ’, ಡಬಲ್‌ ಇಸ್ಮಾರ್ಟ್‌ ಬಳಿಕ ರಾಮ್ ಪೋತಿನೇನಿ (Ram Pothineni) ಇದೀಗ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ‘ಪುಷ್ಪ’, ‘ಪುಷ್ಪ 2’ ಸಿನಿಮಾಗೆ ಬಂಡವಾಳ ಹೂಡಿರುವ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಜೊತೆ ನಟ ಹೊಸ ಚಿತ್ರಕ್ಕೆ ಕೈಜೋಡಿಸಿದ್ದಾರೆ. ರಾಮ್‌ಗೆ ಭಾಗ್ಯಶ್ರೀ ಬೋರ್ಸೆ (Bhagyashree Borse) ನಾಯಕಿಯಾಗಿದ್ದಾರೆ.

ಸದಾ ಹೊಸ ಬಗೆಯ ಪಾತ್ರಗಳಲ್ಲಿ ನಟಿಸುವ ರಾಮ್‌ ಪೋತಿನೇನಿ ಈಗ ಪಿ. ಮಹೇಶ್ ಬಾಬು ನಿರ್ದೇಶನದ ಹೊಸ ಸಿನಿಮಾಗೆ ಅವರು ಓಕೆ ಎಂದಿದ್ದಾರೆ. ಹೈದರಾಬಾದ್‌ನಲ್ಲಿ ಈ ಸಿನಿಮಾದ ಮುಹೂರ್ತ ಸಮಾರಂಭ ಸರಳವಾಗಿ ಜರುಗಿದೆ. ಇದನ್ನೂ ಓದಿ:ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ

 

View this post on Instagram

 

A post shared by Mythri Movie Makers (@mythriofficial)

ಹಳ್ಳಿ ಸೊಗಡಿನ ಕಥೆಯನ್ನು ಒಳಗೊಂಡ ಸಿನಿಮಾದಲ್ಲಿ ರಾಮ್ ಪೋತಿನೇನಿ ನಟಿಸಲಿದ್ದಾರೆ. ಎಂದೂ ನಟಿಸಿರದ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಭಾಗ್ಯಶ್ರೀ ಬೋರ್ಸೆ ಅವರಿಗೂ ಒಳ್ಳೆಯ ಪಾತ್ರವಿದೆ. ನಟನೆಗೆ ಸ್ಕೋಪ್ ಇರುವಂತಹ ಪಾತ್ರವೇ ಅವರಿಗೆ ಸಿಕ್ಕಿದೆ.

ಸದ್ಯದಲ್ಲೇ ರಾಮ್ ಪೋತಿನೇನಿ ನಟನೆಯ ಹೊಸ ಸಿನಿಮಾ ಶೂಟಿಂಗ್ ಶುರುವಾಗಲಿದೆ. ಮೊದಲ ಬಾರಿಗೆ ರಾಮ್ ಮತ್ತು ಭಾಗ್ಯಶ್ರೀ ಜೊತೆಯಾಗಿ ನಟಿಸುತ್ತಿದ್ದಾರೆ. ಹಾಗಾಗಿ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

Share This Article