‘ಪುಷ್ಪ 2’ ಜಾಗಕ್ಕೆ ‘ಡಬಲ್‌ ಇಸ್ಮಾರ್ಟ್‌’ ಎಂಟ್ರಿ- ರಿಲೀಸ್ ಡೇಟ್ ಫಿಕ್ಸ್

Public TV
1 Min Read

ಟಾಲಿವುಡ್ ನಟ ರಾಮ್ ಪೋತಿನೇನಿ (Ram Pothineni) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಪುಷ್ಪ 2’ (Pushpa 2) ರಿಲೀಸ್ ಆಗಬೇಕಿದ್ದ ದಿನಾಂಕಕ್ಕೆ ‘ಡಬಲ್ ಇಸ್ಮಾರ್ಟ್’ ಸಿನಿಮಾ ಎಂಟ್ರಿ ಕೊಡುತ್ತಿದೆ. ಆಗಸ್ಟ್ 15ಕ್ಕೆ ಥಿಯೇಟರ್‌ಗೆ ಬರಲಿದೆ ರಾಮ್ ಪೋತಿನೇನಿ ನಟನೆಯ ಸಿನಿಮಾ.

ಅಲ್ಲು ಅರ್ಜುನ್‌, ರಶ್ಮಿಕಾ ನಟನೆಯ ‘ಪುಷ್ಪ 2’ ಚಿತ್ರ ಆ.15ರಂದು ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತಗಳಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಆ ದಿನ ರಾಮ್ ಪೋತಿನೇನಿ ನಟನೆಯ ‘ಡಬಲ್ ಇಸ್ಮಾರ್ಟ್’ (Double Ismart) ಸಿನಿಮಾ ಈಗ ಆಗಸ್ಟ್ 15ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ಹೀರೋ ರಾಮ್‌ಗೆ ಸಂಜಯ್ ದತ್ ವಿಲನ್ ಆಗಿ ಅಬ್ಬರಿಸಿದ್ದಾರೆ. ಈ ಚಿತ್ರವನ್ನು ಪುರಿ ಜಗನ್ನಾಥ್, ಚಾರ್ಮಿ ಕೌರ್ ನಿರ್ಮಾಣ ಮಾಡಿದ್ದಾರೆ.

 

View this post on Instagram

 

A post shared by RAm POthineni (@ram_pothineni)

‘ಡಬಲ್ ಇಸ್ಮಾರ್ಟ್’ ಸಿನಿಮಾದಲ್ಲಿ ರಾಮ್ ಪೋತಿನೇನಿಗೆ ಕಾವ್ಯಾ ಥಾಪರ್ ನಾಯಕಿಯಾಗಿ ನಟಿಸಿದ್ದಾರೆ. ಹೊಸ ಜೋಡಿ ಈ ಬಾರಿ ಕ್ಲಿಕ್ ಆಗುತ್ತಾ? ಕಾಯಬೇಕಿದೆ.


2019ರಲ್ಲಿ ‘ಇಸ್ಮಾರ್ಟ್ ಶಂಕರ್’ ಸಿನಿಮಾ ರಿಲೀಸ್ ಆಗಿತ್ತು. ರಾಮ್‌ಗೆ ನಭಾ ನಟೇಶ್ ಜೋಡಿಯಾಗಿ ನಟಿಸಿದ್ದರು. ಈಗ ಇದರ 2ನೇ ಸೀಕ್ವೆಲ್ ಬರುತ್ತಿದೆ. ಹೊಸ ಕಥೆಯನ್ನೇ ಹೇಳಲು ಹೊರಟಿದ್ದಾರೆ.

Share This Article