ಹುಟ್ಟುಹಬ್ಬದಂದು ಗುಡ್ ನ್ಯೂಸ್ ಕೊಟ್ಟ ರಕ್ಷಿತ್ ಶೆಟ್ಟಿ

By
1 Min Read

ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ (Rakshit Shetty) ಜೂನ್ 6ರಂದು ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಈ ದಿನ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 41ನೇ ವರ್ಷಕ್ಕೆ ಕಾಲಿಟ್ಟಿರುವ ‘ಸಿಂಪಲ್ ಸ್ಟಾರ್’ ಇದೀಗ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಬಿಗ್ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಡಾಲಿ ಧನಂಜಯ ನಟನೆಯ ‌’ಕೋಟಿ’ ಟ್ರೈಲರ್‌ ಔಟ್

‘ಏಕಂ’ ಎಂಬ ವೆಬ್ ಸಿರೀಸ್ ಬಗ್ಗೆ ನಟ ಮಾಹಿತಿ ನೀಡಿದ್ದಾರೆ. ರಕ್ಷಿತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ವಿಡಿಯೋ ಕ್ಲಿಪ್‌ನಲ್ಲಿ, ಕೆಸರು ನೀರು ತುಂಬಿಕೊಂಡಿರುವ ದಾರಿ ಮಧ್ಯೆ ಸಣ್ಣ ಒಂದು ಭಾಗದಲ್ಲಿ ಜನರು ಮೆಟ್ಟಿಕೊಂಡೇ ಓಡಾಡುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ಏಕಂ ಬಗ್ಗೆ ಅಪ್‌ಡೇಟ್ ತರುತ್ತಿದ್ದೇವೆ. ಈ ಸ್ಥಳವನ್ನು ತುಂಬಾ ಹತ್ತಿರದಿಂದ ನೋಡಿ. ಮಚ್ ಲವ್ ಎಂದು ನಟ ಬರೆದುಕೊಂಡಿದ್ದಾರೆ. ಜೂನ್ 17ರಂದು ಅಧಿಕೃತ ಮಾಹಿತಿ ನೀಡುತ್ತೇವೆ ಎಂದಿದ್ದಾರೆ.

 

View this post on Instagram

 

A post shared by Rakshit Shetty (@rakshitshetty)

ರಕ್ಷಿತ್ ಶೆಟ್ಟಿ ತಮ್ಮ ನಿರ್ಮಾಣ ಸಂಸ್ಥೆಯಿಂದ ಒಟಿಟಿ ಫ್ಲಾರ್ಟ್ ಫಾರಂಗೆ 8 ಎಪಿಸೋಡ್‌ಗಳ ‘ಏಕಂ’ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದಾರೆ. ಅವರೇ ನಿರ್ದೇಶನ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

‘ರಿಚರ್ಡ್ ಆ್ಯಂಟನಿ’ ಸಿನಿಮಾ ಸೇರಿದಂತೆ ರಕ್ಷಿತ್ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟನೆ, ನಿರ್ದೇಶನ ಮತ್ತು ನಿರ್ಮಾಣ ಅಂತ ನಟ ತೊಡಗಿಸಿಕೊಂಡಿದ್ದಾರೆ.

Share This Article