ಸೋ ಮೂಡಿ, ಸೋ ಬ್ಯೂಟಿಫುಲ್- ರಕ್ಷಿತ್ ಶೆಟ್ಟಿ ಹೀಗಂದಿದ್ದು ಯಾರಿಗೆ?

Public TV
1 Min Read

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಟ್ರೆಂಡ್‌ನಲ್ಲಿರುವ ಸಾಲನ್ನ ಆಪ್ತರೊಬ್ಬರಿಗೆ ಹೇಳಿದ್ದಾರೆ. ಸೋ ಮೂಡಿ, ಸೋ ಬ್ಯೂಟಿಫುಲ್ ಎಂದು ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಬರೆದುಕೊಂಡಿರುವ ಪೋಸ್ಟ್ ಸಖತ್ ವೈರಲ್ ಆಗಿದೆ.

ಸೋ ಮೂಡಿ, ಸೋ ಬ್ಯೂಟಿಫುಲ್ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದು ಬೇರೇ ಯಾರಿಗೋ ಅಲ್ಲ. ಗೆಳೆಯ ರಾಜ್ ಬಿ ಶೆಟ್ಟಿಗೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ರಾಜ್, ಸಿರಿ ನಟನೆ ಬಲು ಇಷ್ಟಪಟ್ಟಿದ್ದಾರೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಟ್ರೈಲರ್ ಶೇರ್ ಮಾಡಿ ಸೋ ಮೂಡಿ, ಸೋ ಬ್ಯೂಟಿಫುಲ್ ರಾಜ್ ಬಿ ಶೆಟ್ಟಿ (Raj B Shetty) ಯೂ ಆರ್ ದಿ ಮ್ಯಾನ್ ಎಂದು ರಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮಾನವೀಯತೆ ಮರೆತ ಸಂಗೀತಾಗೆ ‘ಬಿಗ್ ಬಾಸ್’ ಕ್ಲಾಸ್

ರಮ್ಯಾ (Ramya) ನಿರ್ಮಾಣದ ಚೊಚ್ಚಲ ಸಿನಿಮಾ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಇದೇ ನವೆಂಬರ್ 24ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರದ ಹಾಡು, ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಚಿತ್ರಮಂದಿರದಲ್ಲಿ ರಾಜ್ ಬಿ ಶೆಟ್ಟಿ, ಸಿರಿ ಜೋಡಿಯ ಈ ಚಿತ್ರ ಅದೆಷ್ಟರ ಮಟ್ಟಿಗೆ ಕಮಾಲ್ ಮಾಡುತ್ತೆ ಕಾಯಬೇಕಿದೆ.

Share This Article