ಫಸ್ಟ್ ನೈಟ್ CD ಕಳೆದುಕೊಂಡ ತೃಪ್ತಿ ದಿಮ್ರಿ- ಸಖತ್ ಆಗಿದೆ ಹೊಸ ಚಿತ್ರದ ಟ್ರೈಲರ್

Public TV
1 Min Read

‘ಅನಿಮಲ್’ ಚಿತ್ರದ ನಟಿ ತೃಪ್ತಿ ದಿಮ್ರಿ (Tripti Dimri) ಮತ್ತೊಮ್ಮೆ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ. ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ (Vicky Vidya Ka Woh Wala Video) ಚಿತ್ರದಲ್ಲಿ ಫಸ್ಟ್ ನೈಟ್ CD ಕಳೆದುಕೊಂಡ ಗೃಹಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಆತ್ಮಹತ್ಯೆಗೂ ಮುನ್ನ ಮಗಳಿಗೆ ಕರೆ ಮಾಡಿ ಮಲೈಕಾ ತಂದೆ ಹೇಳಿದ್ದೇನು?

ಮೊದಲ ರಾತ್ರಿಯಲ್ಲಿ ತಮ್ಮ ಖಾಸಗಿ ವಿಡಿಯೋ ಮಾಡಿಕೊಂಡು ಪೇಚಿಗೆ ಸಿಲುಕಿದ ಗಂಡ-ಹೆಂಡತಿಯ ಕಥೆ ಈ ಸಿನಿಮಾದಲ್ಲಿದೆ. ಮನೆಗೆ ಬಂದ ಕಳ್ಳರು ಸಿಡಿ (CD) ಪ್ಲೇಯರ್ ಕದಿಯುತ್ತಾರೆ. ಅದರ ಜೊತೆ ಸಿಡಿ ಕೂಡ ಕಳ್ಳತನ ಆಗುತ್ತದೆ. ಆದರೆ ಯಾರೋ ಒಬ್ಬರು ಅವರ ಫಸ್ಟ್ ನೈಟ್ ಸಿಡಿ ಕದ್ದು 2 ಲಕ್ಷ ಕೊಡಬೇಕೆಂದು ಬ್ಲಾಕ್ ಮೇಲ್ ಮಾಡುತ್ತಾರೆ. ಏನೋ ಮಾಡಲು ಹೋಗಿ ಇನ್ನೇನೋ ಎಡವಟ್ಟಾಗುತ್ತದೆ. ಆ ಸಿಡಿ ಹುಡುಕಲು ಗಂಡ-ಹೆಂಡತಿ ಏನೆಲ್ಲ ಸರ್ಕಸ್ ಮಾಡುತ್ತಾರೆ ಎಂಬ ಕಥೆಯನ್ನು ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ.

 

View this post on Instagram

 

A post shared by RajKummar Rao (@rajkummar_rao)

ಮೊದಲ ಬಾರಿಗೆ ರಾಜ್‌ಕುಮಾರ್ ರಾವ್‌ಗೆ (Rajkumar Rao) ಜೋಡಿಯಾಗಿ ತೃಪ್ತಿ ನಟಿಸಿದ್ದಾರೆ. ಇಬ್ಬರ ಕಾಂಬಿನೇಷನ್ ಟ್ರೈಲರ್‌ನಲ್ಲಿ ಮೋಡಿ ಮಾಡಿದೆ. ಹಾಗಾಗಿ ಬಗೆಗಿನ ಕ್ಯೂರಿಯಾಸಿಟಿ ಫ್ಯಾನ್ಸ್‌ಗೆ ಹೆಚ್ಚಾಗಿದೆ. ಚಿತ್ರದ ಇನ್ನೊಂದು ವಿಶೇಷ ಅಂದ್ರೆ ಮಲ್ಲಿಕಾ ಶೆರಾವತ್ ಸ್ಪೆಷಲ್ ರೋಲ್‌ನಲ್ಲಿ ನಟಿಸಿದ್ದಾರೆ.

ಕಳೆದುಕೊಂಡ ಸಿಡಿಗಾಗಿ ಪರದಾಡುವ ಈ ಜೋಡಿಗೆ ಮಲ್ಲಿಕಾ ಪಾತ್ರ ಸಹಾಯ ಮಾಡುತ್ತಾರೆ ಇನ್ನೊಂದು ಇಂಟರೆಸ್ಟಿಂಗ್. ತೃಪ್ತಿ ಜೋಡಿ ವೈವಾಹಿಕ ಬದುಕನ್ನು ಮರಳಿ ಟ್ರ್ಯಾಕ್‌ಗೆ ತರಲು ಮಲ್ಲಿಕಾ ಪಾತ್ರ ಯಾವ ರೀತಿ ಸಹಾಯ ಮಾಡುತ್ತೆ ಎಂಬುದನ್ನು ಟ್ರೈಲರ್‌ನಲ್ಲಿ ಸಣ್ಣ ಝಲಕ್ ತೋರಿಸಿದ್ದಾರೆ. ಒಟ್ನಲ್ಲಿ ಕಾಮಿಡಿ ಕಮ್ ರೊಮ್ಯಾಂಟಿಕ್ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಅಕ್ಟೋಬರ್ 11ಕ್ಕೆ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ.

Share This Article