ಹಿಮಾಲಯದಿಂದ ಬಂದು ರಾಜಕೀಯ ಮುಖಂಡರಿಗೆ ವಿಶ್ ಮಾಡಿದ ನಟ ರಜನಿ

Public TV
1 Min Read

ಹೆಸರಾಂತ ನಟ ರಜನಿಕಾಂತ್ (Rajinikanth) ಹಿಮಾಲಯಕ್ಕೆ ಹೋಗುವ ಮುನ್ನ ‘ನಾನು ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸಲ್ಲ’ ಎಂದು ಹೇಳಿಕೆ ನೀಡಿದ್ದರು. ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿ ಆಗಬಹುದಾ ಎನ್ನುವ ಪ್ರಶ್ನೆಗೆ ಅವರು ಮಾತನಾಡಲು ನಿರಾಕರಿಸಿದ್ದರು. ಈಗ ಹಿಮಾಲಯದಿಂದ ಬಂದಿರೋ ರಜನಿ, ಮೂವರು ಪ್ರಮುಖ ಮುಖಂಡರಿಗೆ ಶುಭಾಶಯ ಕೋರಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (Narendra Modi), ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K. Stalin) ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರಿಗೆ ರಜನಿಕಾಂತ್ ಶುಭಾಶಯಗಳನ್ನು ತಿಳಿಸಿದ್ದಾರೆ. ಜೊತೆಗೆ ಎನ್.ಡಿ.ಎ ಮಿತ್ರಕೂಟಕ್ಕೂ ಅವರು ಗೆಲುವಿನ ಶುಭಾಶಯಗಳನ್ನು ತಿಳಿಸಿದ್ದಾರೆ.

 

ಒಂದು ವಾರಗಳ ಕಾಲ ಹಿಮಾಲಯದ ಪ್ರವಾಸದಲ್ಲಿದ್ದ ರಜನಿಕಾಂತ್, ಅಲ್ಲಿನ ನಾನಾ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದಿದ್ದರು. ತಮ್ಮ ಇಷ್ಟದ ಗುಹೆಯಲ್ಲಿ ಧ್ಯಾನದಲ್ಲಿ ಮಗ್ನರಾಗಿದ್ದರು. ಈಗ ಅಲ್ಲಿಂದ ರಜನಿ ವಾಪಸ್ಸಾಗಿದ್ದಾರೆ.

Share This Article