ಸದ್ದಿಲ್ಲದೇ ʻಟೋಬಿʼ ಚಿತ್ರದ ಶೂಟಿಂಗ್‌ ಮುಗಿಸಿದ ರಾಜ್‌ ಬಿ ಶೆಟ್ಟಿ

Public TV
1 Min Read

ಸ್ಯಾಂಡಲ್‌ವುಡ್‌ನ (Sandalwood) ಸಹಜ ನಟ ರಾಜ್ ಬಿ ಶೆಟ್ಟಿ (Raj B Shetty) ಅವರು `ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಚಿತ್ರದ ನಂತರ ಸದ್ದಿಲ್ಲದೇ ಹೊಸ ಸಿನಿಮಾವನ್ನ ನಟ ರಾಜ್ ಅವರು ಮಾಡಿ ಮುಗಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ವಿಜಯ್‌ ದೇವರಕೊಂಡ ರೊಮ್ಯಾನ್ಸ್

ನಟ ರಾಜ್ ಬಿ ಶೆಟ್ಟಿ (Raj B Shetty) ಅವರು ಕಡಿಮೆ ಬಜೆಟ್‌ನಲ್ಲಿ ಹೊಸ ಬಗೆಯ ಕಥೆಯನ್ನ ತೆರೆಯ ಮೇಲೆ ತೋರಿಸುವುದರಲ್ಲಿ ಯಾವಾಗಲೂ ಮುಂದು. ರಮ್ಯಾ (Ramya) ನಿರ್ಮಾಣದ ಚಿತ್ರವನ್ನ 20-30 ದಿನಗಳಲ್ಲಿ ಮುಗಿಸಿಕೊಟ್ಟಿರುವ ರಾಜ್, ಇದೀಗ ಹೊಸ ಚಿತ್ರದ ಮೂಲಕ ಸೌಂಡ್ ಮಾಡ್ತಿದ್ದಾರೆ. `ಟೋಬಿ’ ಎನ್ನುವ ಭಿನ್ನ ಟೈಟಲ್‌ನ ಚಿತ್ರವನ್ನ ಸೈಲೆಂಟ್ ಆಗಿ ಶೂಟಿಂಗ್ ಮಾಡಿ ಮುಗಿಸಿದ್ದಾರೆ.

 

View this post on Instagram

 

A post shared by Raj B Shetty (@rajbshetty)

`ಗರುಡ ಗಮನ ವೃಷಭ ವಾಹನ’ ತಂಡವನ್ನಿಟ್ಟುಕೊಂಡೇ ʻಟೋಬಿʼ ಚಿತ್ರ ಪೂರ್ತಿಗೊಳಿಸಿದ್ದಾರೆ. ನಿರ್ದೇಶನವನ್ನು ರಾಜ್ ಬಿ ಶೆಟ್ಟಿ ತಂಡದ ಸಹ ನಿರ್ದೇಶಕರೊಬ್ಬರು ಮಾಡಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆಯನ್ನು ರಾಜ್ ಬಿ ಶೆಟ್ಟಿ ಬರೆದಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿನ ನಾಯಕ ಪಾತ್ರಧಾರಿ ಟೋಬಿ. ಮುಗ್ಧ ಮತ್ತು ಎಡವಟ್ಟು ಮನುಷ್ಯ ಎನ್ನಿಸಿಕೊಂಡ ಪಾತ್ರದ ನಿರ್ವಹಣೆಯನ್ನು ರಾಜ್ ನಿರ್ವಹಿಸಿದ್ದಾರೆ. ಇದೊಂದು ಕಮರ್ಶಿಯಲ್ ಸಿನಿಮಾ ಆಗಿದ್ದು, ಸರಿಯಾದ ಸಮಯಕ್ಕೆ ಥಿಯೇಟರ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ರಾಜ್ ಬಿ ಶೆಟ್ಟಿಯವರ ಲೈಟರ್ ಬುದ್ಧ ಸಂಸ್ಥೆ ಮತ್ತು ರವಿ ರೈ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ನಟ ರಾಜ್ ಸದ್ಯ ಮಲಯಾಳಂ ಚಿತ್ರ ‘ರುಧಿರಂ’ ಶೂಟಿಂಗ್ ಪಾಲ್ಗೊಂಡಿದ್ದಾರೆ. ಅದಲ್ಲದೇ ಇನ್ನೂ ಎರಡು ವರ್ಷ ರಾಜ್ ಬಿ ಶೆಟ್ಟಿ ಬ್ಯುಸಿಯಾಗಿದ್ದಾರೆ. ಅವರು ಮಾಡಿಟ್ಟುಕೊಂಡಿರುವ ಕಥೆಗಳನ್ನ ಒಂದೊಂದಾಗಿಯೇ ಮುಗಿಸುತ್ತಾ ಬರುತ್ತಿದ್ದಾರೆ. ಹೊಸ ಬಗೆಯ ಕಥೆಯನ್ನ ತೆರೆಯ ಮೇಲೆ ಹೇಳಲು ರಾಜ್ ಬಿ ಶೆಟ್ಟಿ ರೆಡಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *