ರಮ್ಯಾ ಸಿನಿಮಾಗಿಂತ ಮುಂಚೆ ‘ಟೋಬಿ’ ರಿಲೀಸ್: ರಾಜ್ ಬಿ ಶೆಟ್ಟಿ ಸ್ಪಷ್ಟನೆ

Public TV
2 Min Read

ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಟೋಬಿ’ (Toby) ಸಿನಿಮಾ ತೆರೆಗೆ ಬರೋದ್ದಕ್ಕೆ ಸಜ್ಜಾಗಿದೆ. ಚಿತ್ರದ ಫಸ್ಟ್ ಲುಕ್‌ನಿಂದ ‘ಟೋಬಿ’ ಹೈಪ್ ಕ್ರಿಯೇಟ್ ಮಾಡಿದೆ. ಟೋಬಿ ಚಿತ್ರಕ್ಕೆ ಚಾಲನೆ ಸಿಗುವ ಮುಂಚೆಯೇ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಶೂಟಿಂಗ್ ಮುಗಿದಿದೆ. ಆದ್ರೂ ‘ಟೋಬಿ’ ಸಿನಿಮಾ ಯಾಕೆ ತೆರೆಗೆ ಬರುತ್ತಿದೆ ಎಂಬ ಪ್ರಶ್ನೆಗೆ ನಿರ್ದೇಶಕ ರಾಜ್ ಬಿ ಶೆಟ್ಟಿ ಉತ್ತರಿಸಿದ್ದಾರೆ.

ರಾಜ್ ಬಿ ಶೆಟ್ಟಿ (Raj B Shetty) ಅವರು ‘ಟೋಬಿ’ ಸಿನಿಮಾ ಲುಕ್‌ನಿಂದ ಈಗಾಗಲೇ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ರಕ್ತ-ಸಿಕ್ತ ಅವತಾರದಿಂದ ಶೆಟ್ರು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಎಂದೂ ನಟಿಸಿರದ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಜೀವ ತುಂಬಿದ್ದಾರೆ. ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯನ್ನ ರಾಜ್ ಬಿ ಶೆಟ್ಟಿ ತೆರೆಯ ಮೇಲೆ ತೋರಿಸಲು ಹೊರಟಿದ್ದಾರೆ. ಇದರ ಜೊತೆ ರಮ್ಯಾ ನಿರ್ಮಾಣದ ಸಿನಿಮಾ ಯಾಕೆ ತಡ ಆಗುತ್ತಿದೆ ಎಂದು ಶೆಟ್ರು ಪ್ರತಿಕ್ರಿಯೆ ನೀಡಿದ್ದಾರೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಮಾಡಬೇಕಾದರೇನೆ ಒಂದು ಖಾಸಗಿ ಅನುಭವ ನೀಡುವ ಆಪ್ತವಾದ ಫೀಲ್ ನೀಡುವ ಸಿನಿಮಾ ಮಾಡಬೇಕೆಂಬ ಉದ್ದೇಶದಿಂದಲೇ ಆ ಸಿನಿಮಾ ಶುರು ಮಾಡಿದೆವು. ಆ ಸಿನಿಮಾ ಮಾಡುವಾಗ ಇದು ಒಳ್ಳೆಯ ಸಿನಿಮಾ ಆಗಿರಬೇಕು, ಒಟಿಟಿಯಲ್ಲಿ ನೋಡುವಂಥಹಾ ಒಂದು ಪರ್ಸನಲ್ ಆದ ಸಿನಿಮಾ ಮಾದರಿಯಲ್ಲಿರಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಸದ್ಯಕ್ಕೆ ಸಿನಿಮಾ ಪೂರ್ಣ ಮುಗಿದು ಅದರ ಮಿಕ್ಸಿಂಗ್‌ನ ಸಣ್ಣ-ಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಅದೂ ಸಹ ಒಂದು ವಾರ ಅಥವಾ ಹತ್ತು ದಿನದಲ್ಲಿ ಮುಗಿಯಬಹುದು ಎಂದಿದ್ದಾರೆ. ಇದನ್ನೂ ಓದಿ:ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು

‘ಟೋಬಿʼ ಬರುವ ಮುಂಚೆಯೇ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ನಿರ್ಮಾಣ ಸಂಸ್ಥೆಯವರೇನಾದರೂ ಯಾವುದಾದರೂ ಒಟಿಟಿಯಲ್ಲಿ ಒಳ್ಳೆಯ ಡೀಲ್ ಮಾಡಿಕೊಂಡರೆ ನಮ್ಮ  ಸಿನಿಮಾಕ್ಕಿಂತಲೂ ಮೊದಲೇ ಆ ಸಿನಿಮಾ ಬಿಡುಗಡೆ ಆಗಬಹುದು. ಆದರೆ ಆ ವಿಷಯ ನನಗೆ ಗೊತ್ತಿಲ್ಲ. ಇನ್ನು ಟೋಬಿ ಸಿನಿಮಾದ ಎಲ್ಲ ಕೆಲಸ ಮುಗಿದಿದ್ದು, ಕೊನೆಯ ಹಂತದ ಕೆಲಸ ಚಾಲ್ತಿಯಲ್ಲಿದೆ ಎಂದಿದ್ದಾರೆ. ರಮ್ಯಾ (Ramya) ನಿರ್ಮಾಣದ ಈ ಚಿತ್ರ, ರಾಜ್- ಸಿರಿ ನಟನೆಯ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದ ರಿಲೀಸ್ ಅಪ್‌ಡೇಟ್ ಸದ್ಯದಲ್ಲೇ ಸಿಗಲಿದೆ ಎಂದು ನಟ ತಿಳಿಸಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್