ಹುಟ್ಟೋದು ಸಾಯೋದು ಎರಡೇ ಸತ್ಯ- ಸ್ಪಂದನಾ ಸಾವಿನ ಬಗ್ಗೆ ರಾಘಣ್ಣ ಪ್ರತಿಕ್ರಿಯೆ

Public TV
1 Min Read

ಸ್ಯಾಂಡಲ್ವುಡ್ ನಟ ರಾಘವೇಂದ್ರ ರಾಜ್‌ಕುಮಾರ್ ಇಂದು (ಆಗಸ್ಟ್‌ 15)ರಂದು 58ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಾಗಿದೆ. ಈ ವೇಳೆ ಸ್ಪಂದನಾ (Spandana) ಸಾವಿನ ಬಗ್ಗೆ ರಾಘಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಹುಟ್ಟೋದು ಸಾಯೋದು ಎರಡೇ ಸತ್ಯ, ಇದರ ನಡುವೆ ನಾವು ಹೇಗೆ ಜೀವಿಸಿ ತೋರಿಸುತ್ತೀವಿ ಅನ್ನೋದು ಮುಖ್ಯ ಎಂದು ಮಾಧ್ಯಮಕ್ಕೆ ನಟ ಮಾತನಾಡಿದ್ದಾರೆ.

ವಿಜಯ ರಾಘವೇಂದ್ರ (Vijay Raghavendra) ಪತ್ನಿ ಸ್ಪಂದನಾ ನಿಧನದ ಬಗ್ಗೆ ರಾಘಣ್ಣ ಮುಕ್ತವಾಗಿ ಮಾತನಾಡಿದ್ದಾರೆ. ಹುಟ್ಟೋದು ಸಾಯೋದು ಎರಡೇ ಸತ್ಯ. ಮಧ್ಯೆ ಬದುಕೋದು ಇದೆಯಲ್ಲ ಅದು ನಮ್ಮ ಕೈಯಲ್ಲಿದೆ. ನಾವು ಎಷ್ಟು ದಿನ ಬದುಕಬೇಕು ಅಂತಾ ದೇವರು ನಿರ್ಧರಿಸುತ್ತಾನೆ. ಸಾವು ಕೆಲವರಿಗೆ ಬೇಗ ಬರುತ್ತೆ. ಕೆಲವರಿಗೆ ಲೇಟ್ ಬರುತ್ತೆ. ಸ್ಪಂದನಾ ಇಲ್ಲ ಆ ನೋವಿನ ಜೊತೆನೇ ನಾವು ಬದುಕುತ್ತಾ ಹೋಗಬೇಕು. ಅವರು ಇಲ್ಲ ಅನ್ನೋ ಆ ನೋವನ್ನ ನಾವು ಮರಿಯೋಕೆ ಆಗಲ್ಲ. ಆ ನೋವಿನ ಜೊತೆಗೆ ನಾವು ಜೀವಿಸಬೇಕು ಎಂದು ರಾಘಣ್ಣ ಭಾವುಕರಾಗಿದ್ದಾರೆ. ಇದನ್ನೂ ಓದಿ:ಲಾಲ್‌ಬಾಗ್ ಸಿಬ್ಬಂದಿಯನ್ನು ಮನೆಗೆ ಆಹ್ವಾನಿಸಿ ಕ್ಷಮೆ ಕೋರಿದ ರಚಿತಾ ರಾಮ್

ಬಳಿಕ ಮಾತು ಮುಂದುವರೆಸಿ, ಪುನೀತ್ ಹೋದ ಮೇಲೆ ಬೇಜಾರ್ ಆಗಿದೆ. ನನ್ನ ತಮ್ಮ ಇದ್ದಾಗ್ಲೇ ನನ್ನ ಹುಟ್ಟುಹಬ್ಬ ಎಂದು ತೀರ್ಮಾನ ಮಾಡಿದ್ದೆ. ಬೆಳಿಗ್ಗೆ ಹೋಗಿ ಅವರ ಸಮಾಧಿ ಬಳಿ ಹೋಗಿ ನಮಸ್ಕಾರ ಮಾಡಿಕೊಂಡು ಬಂದೆ. ಅಪ್ಪು ಅಗಲಿಕೆಯ ನಂತರ ಅದಕ್ಕೆ ಸ್ವೀಟ್ ತಿನ್ನಲ್ಲ. ಹಾರಾ ಹಾಕಿಸಿಕೊಳ್ಳಲ್ಲ. ನನಗಿಂತ 10 ವರ್ಷ ಚಿಕ್ಕೋನು. ಅದಕ್ಕೆ ಬಿಳಿ ಬಟ್ಟೆ ಬಿಟ್ಟರೇ ಬೇರೆ ಹಾಕಲ್ಲ. ಅಪ್ಪು ಇದ್ದ ದಿನಕ್ಕಿಂತ ಹೋದ ಮೇಲೆ ತುಂಬಾ ಹಚ್ಕೋಂಡೆ.

ಇಂದು ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಕೂಡ ಆಗಿದೆ. ತಂದೆ ಯಾವಾಗಲೂ ಹೇಳೋರು. ಇಂಡಿಯಾ ಅನ್ನೋದನ್ನ ನಿಲ್ಲಿಸಬೇಕು. ಭಾರತ ಅಂತಾ ಹೇಳಬೇಕು ಎಂದು ಹೇಳಿ ಕೊಟ್ಟಿದ್ದರು ಎಂದು ರಾಘಣ್ಣ ಹಳೆಯ ದಿನಗಳನ್ನ ಸ್ಮರಿಸಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್