– ಈವರೆಗೂ ದೂರು ಕೊಡದ ನಟ
ಬೆಂಗಳೂರು: ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ. ಸಿನಿ ಚಿತ್ರೀಕರಣವೊಂದಕ್ಕೆ ತೆರಳೋದಕ್ಕೂ ಮುನ್ನ ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ (Olle Hudga Pratham) ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿದೆ.
ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ (Doddaballapura Temple) ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಘಟನೆ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ (Begaluru Rural) ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾದ ನಟ ಪ್ರಥಮ್ ಘಟನೆ ವಿವರಿಸಿದ್ದಾರೆ. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದಾರೆ.
ಈವರೆಗೂ ದೂರು ಕೊಡದ ನಟ
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದಾರೆ.