ಹಿಂದಿ ಹೇರಿಕೆ ಕುರಿತು ಮತ್ತೆ ಗುಡುಗಿದ ನಟ ಪ್ರಕಾಶ್ ರೈ

Public TV
1 Min Read

ಭಾಷಾ ವಿಚಾರದಲ್ಲಿ ಮತ್ತೆ ಪ್ರಶ್ನೆ ಮಾಡಿದ್ದಾರೆ ನಟ ಪ್ರಕಾಶ್ ರೈ (Prakash Rai). ಹಿಂದಿ (Hindi)ಹೇರಿಕೆಯನ್ನು ಯಾವತ್ತೂ ಸಹಿಸಲ್ಲ ಎನ್ನುವ ಅವರು ಎಲ್ಲ ಭಾಷೆಗೂ ಗೌರವ ಕೊಡುವುದಾಗಿ ಹೇಳಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ‘ನನ್ನ ಬೇರು, ನನ್ನ ಮೂಲ ಕನ್ನಡ. ನನ್ನ ತಾಯಿಯನ್ನು ಗೌರವಿಸದೆ ನಿನ್ನ ಹಿಂದಿಯನ್ನು ಹೇರಿದರೆ ನಾವು ಹೀಗೇ ಪ್ರತಿಭಟಿಸುತ್ತೇವೆ. ಹೆದರಲ್ಲ ಅಷ್ಟೇ’ ಎಂದು ಬರೆದುಕೊಂಡಿದ್ದಾರೆ.

ಕನ್ನಡದ (Kannada) ವಿಚಾರವಾಗಿ ಪ್ರಕಾಶ್ ರೈ ಮತ್ತೆ ಮಾತನಾಡಿದ್ದಕ್ಕೆ ಕಾರಣವಿದೆ. ಈ ಹಿಂದೆ ಪ್ರಕಾಶ್ ರೈ ‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’ ಎಂದು ಬರಹವಿರುವ ಟಿ ಶರ್ಟ್ ಹಾಕಿಕೊಂಡಿದ್ದರು. ಹಿಂದಿ ಹೇರಿಕೆಯನ್ನು ಬಲವಾಗಿ ವಿರೋಧಿಸಿದ್ದರು. ಇದಕ್ಕೆ ಆಕ್ಷೇಪನೆ ವ್ಯಕ್ತಪಡಿಸಿದ್ದ ಶಶಾಂಕ್ ಶೇಖರ್ ಝಾ (Shashank Shekhar Jha) ಎನ್ನುವವರು ಪ್ರಕಾಶ್ ರೈ ವಿರುದ್ಧ ಎಫ್‍.ಐ.ಆರ್ ಹಾಕಿದ್ದೀರಾ ಎಂದು ಪೊಲೀಸರಿಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಕಾಶ್ ರೈ ಸಿಡಿದೆದ್ದಿರಾ. ಇದನ್ನೂ ಓದಿ: ಬ್ಯಾಕ್‌ಲೆಸ್ ಫೋಟೋ ಶೇರ್‌, ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ `ಸಲಾರ್’ ನಟಿ

ಸರಣಿಯ ಟ್ವೀಟ್ ಮಾಡಿರುವ ಪ್ರಕಾಶ್ ರೈ, ‘ನಾನು ಏಳು ಭಾಷೆಗಳನ್ನು ಬಲ್ಲೆ. ಒಂದು ಭಾಷೆಯನ್ನು ಕಲಿತು ಮಾತನಾಡುವುದು ಎಂದರೆ ಆ ಭಾಷೆಯ ಜನರನ್ನು ಗೌರವಿಸುವುದು. ನಾನು ಹೋಗುವಲ್ಲೆಲ್ಲಾ ಆಯಾ ಭಾಷೆಯಲ್ಲಿ ಸಂವಾದಿಸುತ್ತೇನೆ. ನನ್ನ ಭಾಷೆಯನ್ನು ಹೇರುವುದಿಲ್ಲ. ಆದರೆ, ನನ್ನ ಕನ್ನಡವನ್ನು ಅವಮಾನಿಸಿ ನಿಮ್ಮ ಭಾಷೆಯನ್ನು ಹೇರಿದರೆ ನಿಂತು ಹೋರಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಕನ್ನಡ ನೆಲೆ, ನುಡಿ ಬಗ್ಗೆ ಪ್ರಕಾಶ್ ರೈ ಮತ್ತೆ ಧ್ವನಿ ಎತ್ತಿದ್ದಕ್ಕೆ ಹಲವರು ಬೆಂಬಲವಾಗಿ ನಿಂತಿದ್ದಾರೆ. ಇನ್ನೂ ಕೆಲವರು ಟೀಕೆಯನ್ನೂ ಮಾಡಿದ್ದಾರೆ. ಕನ್ನಡದ ವಿಚಾರವಾಗಿ ಏನೇ ಟೀಕೆಗಳು ಬಂದರೂ, ನಾನು ಹೆದರುವುದಿಲ್ಲ. ಹಿಂದಿ ಹೇರಿಕೆಯನ್ನೂ ಸಹಿಸುವುದಿಲ್ಲ ಎಂದು ಪ್ರಕಾಶ್ ಉತ್ತರಿಸಿದ್ದಾರೆ. ಬಹುತೇಕ ಪ್ರಶ್ನೆಗಳಿಗೆ ಉತ್ತರಿಸುವಂತಹ ಕೆಲಸವನ್ನೂ ಅವರು ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *