ಬರ್ತ್‌ಡೇ ದಿನ ಹತ್ತಿರ ಬರುತ್ತಿದ್ದಂತೆ ಫ್ಯಾನ್ಸ್‌ಗೆ ಪ್ರಜ್ವಲ್ ದೇವರಾಜ್ ವಿಶೇಷ ಮನವಿ

Public TV
1 Min Read

ಸ್ಯಾಂಡಲ್‌ವುಡ್‌ಗೆ ‘ಸಿಕ್ಸರ್’ (Sixer) ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರಜ್ವಲ್ ದೇವರಾಜ್ (Prajwal Devraj) ಅವರಿಗೆ ಅಪಾರ ಅಭಿಮಾನಿಗಳ ಬಳಗವಿದೆ. ಇದೇ ಜುಲೈ 4ರಂದು ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬವಾಗಿದ್ದು, ತಮ್ಮ ಅಭಿಮಾನಿಗಳಿಗೆ ನಟ ಪ್ರಜ್ವಲ್ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ (Birthday) ಕೆಲ ದಿನಗಳ ಬಾಕಿ ಇರುವಾಗಲೇ ಕೇಕ್- ಹಾರ ತರಬೇಡಿ ಎಂದು ಕೋರಿಕೆಯೊಂದನ್ನ ಮಾಡಿದ್ದಾರೆ.

ಸಿಕ್ಸರ್, ಜೆಂಟಲ್‌ಮ್ಯಾನ್, ಅರ್ಜುನ್ ಗೌಡ, ಅಬ್ಬರ, ಜೀವಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಪ್ರಜ್ವಲ್ ದೇವರಾಜ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ತಮ್ಮ ಫ್ಯಾನ್ಸ್ಗೆ ವಿಶೇಷ ಮನವಿಯೊಂದನ್ನ ಮಾಡಿದ್ದಾರೆ.ಇದನ್ನೂ ಓದಿ:ಬಾಲಿವುಡ್ ‘ಮೂವೀ ಮಾಫಿಯಾ’ ವಿರುದ್ಧ ಮತ್ತೆ ಗುಡುಗಿದ ಕಂಗನಾ ರಣಾವತ್

ಹಾಯ್ ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಪ್ರಜ್ವಲ್ ದೇವರಾಜ್ ಮಾತನಾಡ್ತಾ ಇದ್ದೀನಿ. ನಾನು ಈ ವಿಡಿಯೊ ಮಾಡುತ್ತಿರುವ ಕಾರಣ ಏನು ಅಂತ ಅಂದ್ರೆ, ಕಳೆದ ಐದು ವರ್ಷಗಳಿಂದ ನನ್ನ ಹುಟ್ಟುಹಬ್ಬದ ದಿನ ನಿಮ್ಮನ್ಯಾರನ್ನೂ ಸಹ ಭೇಟಿಯಾಗಲು ಆಗಿರಲಿಲ್ಲ. ಕಾರಣ ಏನು ಅಂತ ನಿಮಗೂ ಸಹ ಗೊತ್ತು. ಈ ವರ್ಷ ನಾಲ್ಕನೇ ತಾರೀಖು ನಿಮ್ಮನ್ನೆಲ್ಲರನ್ನೂ ಸಹ ಭೇಟಿಯಾಗ್ತೇನೆ. ಮನೆಯತ್ರ ಎಲ್ಲರೂ ಬನ್ನಿ. ಎಲ್ರೂ ಊಟ ಮಾಡಿಕೊಂಡು ಹೋಗಿ. ನಿಮ್ಮ ಜತೆ ಸಾಕಷ್ಟು ಸಮಯ ಕಳೆಯಬೇಕು ಅಂತ ನನಗೂ ಸಹ ಆಸೆ ಇದೆ. ಆದರೆ ಒಂದು ಮನವಿ ನನ್ನ ಕಡೆಯಿಂದ. ಹಾರ, ಕೇಕು ಇವೆಲ್ಲವೂ ತರದೇ ಶಾಲಾ ಮಕ್ಕಳಿಗಾಗಿ, ಶಾಲೆಗಳಿಗಾಗಲಿ ಅಥವಾ ಕಷ್ಟದಲ್ಲಿರುವ ಮಕ್ಕಳ ಫೀಸ್‌ಗಾಗಿಯಾದರೂ ಉಪಯೋಗಿಸಿ. ಇದೇ ನೀವು ನನಗೆ ಕೊಡುವ ಉಡುಗೊರೆ ಎಂದು ಪ್ರಜ್ವಲ್ ದೇವರಾಜ್ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಪ್ರಜ್ವಲ್ ಮನವಿ ಮಾಡಿರುವ ಪರಿಗೆ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ವರ್ಷವಾದರೂ ತಮ್ಮ ನೆಚ್ಚಿನ ನಟನನ್ನ ಭೇಟಿಯಾಗುವ ಖುಷಿಯಲ್ಲಿದ್ದಾರೆ ಪ್ರಜ್ಜು ಫ್ಯಾನ್ಸ್. ಮಾಫಿಯಾ, ಗಣ, ತತ್ಸಮ ತದ್ಭವ ಚಿತ್ರಗಳು ತೆರೆಗೆ ಅಬ್ಬರಿಸಲು ಸಿದ್ಧವಾಗಿದೆ. ಒಂದಕ್ಕಿಂತ ಒಂದರಲ್ಲಿ ಭಿನ್ನ ಪಾತ್ರಗಳ ಮೂಲಕ ಹೀರೋ ಪ್ರಜ್ವಲ್ ಮೋಡಿ ಮಾಡಲು ಬರುತ್ತಿದ್ದಾರೆ.

Share This Article