ಮದುವೆಯಾಗಿ 8 ವರ್ಷ, ಮಗು ಬಗ್ಗೆ ಗುಡ್ ನ್ಯೂಸ್ ಕೊಡೋದ್ಯಾವಾಗ? ಪ್ರಜ್ವಲ್ ದೇವರಾಜ್ ಪ್ರತಿಕ್ರಿಯೆ

Public TV
2 Min Read

ಸ್ಯಾಂಡಲ್‌ವುಡ್ ನಟ ಪ್ರಜ್ವಲ್ ದೇವರಾಜ್ (Prajwal Devraj) ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಸಿನಿಮಾ ಮತ್ತು ವೈಯಕ್ತಿಕ ಜೀವನ ಎರಡನ್ನು ಬ್ಯಾಲೆನ್ಸ್ ಮಾಡ್ತಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಪ್ರಜ್ವಲ್ ದೇವರಾಜ್, ಮಗುವಿನ ಪ್ಲ್ಯಾನಿಂಗ್ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರಜ್ವಲ್‌ಗೆ ಯಾವಾಗ ಗುಡ್ ನ್ಯೂಸ್ ಕೊಡುತ್ತಾರೆ? ಎಂದು ಪ್ರಶ್ನೆ ಎದುರಾಗಿದೆ. ಅದಕ್ಕೆ ನಟ ತಮಾಷೆಯಾಗಿಯೇ ನಾನು ಮತ್ತು ರಾಗಿಣಿ (Ragini) ಯಾವಾಗ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಅಂತ ಕೇಳುತ್ತಿದ್ದೀರಾ? ಎಂದು ಮರು ಪ್ರಶ್ನೆ ಮಾಡಿ ಹಾಸ್ಯ ಚಟಾಕಿ ಹಾರಿಸಿದ್ದರು. ಆ ಬಳಿಕ ಅಸಲಿ ಮ್ಯಾಟರ್‌ಗೆ ಬಂದರು. ಪ್ರಜ್ವಲ್- ರಾಗಿಣಿ ಮದುವೆಯಾಗಿ 8 ವರ್ಷಗಳಾಗಿದೆ. ಆದರೆ, ಮಗು, ಫ್ಯಾಮಿಲಿ ಪ್ಲ್ಯಾನಿಂಗ್ ಅಂತ ಬ್ಯುಸಿಯಾಗಿಲ್ಲ ಎಂದು ಉತ್ತರಿಸಿದ್ದಾರೆ.

ಈ ವೇಳೆ, ನಾವು ಮದುವೆ ಆಗಿ 8 ವರ್ಷಗಳಾಗಿದ್ದರೂ, ಮಕ್ಕಳ ಬಗ್ಗೆ ಯಾಕೆ ಯೋಚನೆ ಮಾಡಿಲ್ಲ ಅನ್ನೋ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ರಾಗಿಣಿನೂ ಶಾನುಭೋಗರ ಮಗಳು ಅನ್ನೋ ಸಿನಿಮಾ ಮಾಡುತ್ತಿದ್ದಾರೆ. ಅವರಿಗೂ ಒಳ್ಳೊಳ್ಳೆ ಸಿನಿಮಾಗಳು ಬರುತ್ತಿವೆ. ನಿಮಗೆ ಇಷ್ಟ ಇರಲಿ. ಇಲ್ಲದೆ ಇರಲಿ ಮಗು ಆದಾಗ ಅದಕ್ಕೆ ಸಮಯ ಕೊಡಬೇಕಾಗುತ್ತೆ. ಸಮಯ ಕೊಡುವುದಕ್ಕೆ ಆದರೇನೆ ಮಕ್ಕಳನ್ನು ಮಾಡಿಕೊಳ್ಳಬೇಕು. ಒಂದ್ಕಡೆ ನಾನು ಕೆಲಸ ಮಾಡುತ್ತಲೇ ಇರುತ್ತೇನೆ. ಅದಕ್ಕೆ ಮಕ್ಕಳ ಬಗ್ಗೆ ಯೋಚನೆ ಮಾಡಿಲ್ಲ ಅನ್ನೋದನ್ನು ಹೇಳಿದ್ದಾರೆ. ಇದನ್ನೂ ಓದಿ:ಮತ್ತೊಂದು ಬಿಗ್ ಪ್ರಾಜೆಕ್ಟ್ ಒಪ್ಪಿಕೊಂಡ ಅನುಷ್ಕಾ ಶೆಟ್ಟಿ

ನಮ್ಮಿಬ್ಬರಿಗೂ ಯಾವಾಗ ಸಮಯ ಕೊಡುವುದಕ್ಕೆ ಆಗುತ್ತೋ ಅದೇ ಸರಿಯಾದ ಸಮಯ ಅಂತ ಅನಿಸುತ್ತೆ. ನಾನು ಗಂಡಸು ಅಂತ ನೀನು ಕೆಲಸ ಬಿಡು. ಮಗು ನೋಡಿಕೋ ನಾನು ಆಚೆ ಹೋಗಿ ಸಂಪಾದನೆ ಮಾಡುತ್ತೇನೆ ಅನ್ನೋದು ಹೋಗಬೇಕು. ಅವರ ಕೆಲಸ, ಸಿನಿಮಾಗಳು ಮುಗಿದಾಗ ನಾವು ಪ್ಲ್ಯಾನ್ ಮಾಡುತ್ತೇವೆ ಎಂದು ಪ್ರಜ್ವಲ್ ವೈಯಕ್ತಿಕ ವಿಚಾರದ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.

ಇಬ್ಬರು ಜೊತೆಯಾಗಿ ಸಿನಿಮಾ ಮಾಡುವ ಬಗ್ಗೆ ಪ್ರಶ್ನೆ ಎದುರಾದಾಗ, ಒಳ್ಳೆಯ ಕಥೆ ಸಿಕ್ಕರೆ ನಾನು ಮತ್ತು ರಾಗಿಣಿ (Ragini) ಜೋಡಿಯಾಗಿ ನಟಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಜ್ವಲ್‌-ರಾಗಿಣಿ ಅವರದ್ದು ಲವ್‌ ಕಮ್‌ ಅರೆಂಜ್‌ ಮ್ಯಾರೇಜ್‌ ಆಗಿದ್ದು, 2014ರಲ್ಲಿ ಈ ಜೋಡಿ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟರು.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್