ಜಪಾನ್‌ನತ್ತ ‌’ಸಲಾರ್‌’- ಜುಲೈ 5ರಂದು ಪ್ರಭಾಸ್‌ ಸಿನಿಮಾ ರಿಲೀಸ್

Public TV
1 Min Read

ಪ್ರಭಾಸ್ (Actor Prabhas) ನಟನೆಯ ‘ಸಲಾರ್’ (Salaar) ಸಿನಿಮಾ ಕಳೆದ ವರ್ಷ ಡಿಸೆಂಬರ್ 22ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಇದೀಗ ‘ಸಲಾರ್’ ಚಿತ್ರ ಜಪಾನ್‌ನಲ್ಲಿ ಜುಲೈ 5ರಂದು ರಿಲೀಸ್ ಆಗಲಿದೆ. ಇದನ್ನೂ ಓದಿ:ಚುನಾವಣೆಯಲ್ಲಿ ಗೆದ್ದರೆ ಬಾಲಿವುಡ್ ಗೆ ಗುಡ್ ಬೈ ಘೋಷಿಸಿದ ಕಂಗನಾ

ಪ್ರಶಾಂತ್ ನೀಲ್ ನಿರ್ದೇಶನ ಮತ್ತು ಹೊಂಬಾಳೆ ಸಂಸ್ಥೆ ನಿರ್ಮಾಣದ ‘ಸಲಾರ್ ಪಾರ್ಟ್ 1’ ಚಿತ್ರ 700 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿತ್ತು. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಜುಗಲ್‌ಬಂದಿ ನೋಡುಗರಿಗೆ ಮೋಡಿ ಮಾಡಿತ್ತು. ಜಪಾನ್‌ನತ್ತ ಸಲಾರ್‌ ಮೆರವಣಿಗೆ ಹೊರಟಿದೆ.

ಇದೇ ಜುಲೈ 5ರಂದು ಸಲಾರ್ ಜಪಾನ್‌ನಲ್ಲಿ ರಿಲೀಸ್ ಆಗುತ್ತಿರುವ ಬಗ್ಗೆ ಖುದ್ದು ಚಿತ್ರತಂಡ ಮಾಹಿತಿ ನೀಡಿದೆ. ಸದ್ಯ ಈ ವಿಚಾರ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಂದಹಾಗೆ, ಸಲಾರ್ ಪಾರ್ಟ್ 2 (Salaar 2) ಶೂಟಿಂಗ್ ಮಾಡಲು ಕೂಡ ಸಿದ್ಧತೆ ನಡೆಯುತ್ತಿದೆ.

ಇತ್ತೀಚೆಗೆ ರಕ್ಷಿತ್ ಶೆಟ್ಟಿ ನಟನೆಯ `777 ಚಾರ್ಲಿ’ ಸಿನಿಮಾ ಜೂನ್ 28ರಂದು ಜಪಾನ್‌ನಲ್ಲಿ ರಿಲೀಸ್ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.

Share This Article