ತಮಿಳುನಾಡಿನ ಡೆಂಕಣಿಕೋಟೆಯಲ್ಲಿ ‘ಕಲ್ಕಿ’ ಥೀಮ್‌ನಲ್ಲಿ ಗಣೇಶ ಪ್ರತಿಷ್ಠಾಪನೆ

Public TV
1 Min Read

ಮಿಳುನಾಡಿನ ಡೆಂಕಣಿಕೋಟೆಯಲ್ಲಿ ‘ಕಲ್ಕಿ’ ಥೀಮ್‌ನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ಇದೀಗ ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದ ಲೋಕವನ್ನು ಮರುಸೃಷ್ಟಿಸಲಾಗಿದೆ. ‘ಕಲ್ಕಿ’ ಇಲ್ಲಿ ಗಣಪತಿ ಅವತಾರವೆತ್ತಿದ್ದಾರೆ.

ಬಾಹುಬಲಿ, ಕೆಜಿಎಫ್, ಕಾಂತಾರ ಬಳಿಕ ‘ಕಲ್ಕಿ’ ಸಿನಿಮಾ ಸೆಟ್ ನಿರ್ಮಾಣ ಮಾಡಲಾಗಿದೆ. 30 ಲಕ್ಷ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ಸೆಟ್ ನಿರ್ಮಿಸಿದ್ದಾರೆ. 2 ತಿಂಗಳಿಂದ ಇದಕ್ಕಾಗಿಯೇ ಸಿದ್ಧತೆ ಮಾಡಲಾಗಿದೆ. ಸೆಟ್‌ಗೆ ಎಂಟ್ರಿಯಾಗುತ್ತಿದ್ದಂತೆ ಪಿಲ್ಲರ್‌ಗಳು, ಬುಜ್ಜಿ ಕಾರು, ಕಾಂಪ್ಲೆಕ್ಸ್, ಯಾಸ್ಕೀನ್ ಪಾತ್ರ ಇಲ್ಲಿ ಹೈಲೆಟ್ಸ್ ಆಗಿವೆ. ಕಲ್ಕಿ ಅವತಾರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆಯಾಗಿ ಇಂದಿಗೆ 3 ತಿಂಗಳು – ಪ್ರಕರಣ ಭೇದಿಸಿದ ಪೊಲೀಸರಿಗೆ ಹಿರಿಯ ಅಧಿಕಾರಿಗಳ ಮೆಚ್ಚುಗೆ

ಆರ್ಟ್ ಡೈರೆಕ್ಟರ್ ಚಿತ್ತಾ ಜಿನೇಂದ್ರ ಅವರು ‘ಕಲ್ಕಿ’ ಸೆಟ್ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ. ಬೆಂಗಳೂರು, ತಮಿಳುನಾಡು, ಆಂಧ್ರಪ್ರದೇಶ ಭಾಗದಿಂದ ಭಕ್ತರು ಆಗಮಿಸುತ್ತಿದ್ದಾರೆ. ಇನ್ನೂ ‘ಕಲ್ಕಿ’ ಸೆಟ್‌ಗೆ ಪ್ರಭಾಸ್ ಸಿನಿಮಾತಂಡ ಮೆಚ್ಚುಗೆ ಸೂಚಿಸಿದೆ.

Share This Article