ಪ್ರಭಾಸ್‌ ಜೀವನದ ಸ್ಪೆಷಲ್‌ ವ್ಯಕ್ತಿ ಕೀರ್ತಿ ಸುರೇಶ್?‌

Public TV
1 Min Read

ಟಾಲಿವುಡ್ ನಟ ಪ್ರಭಾಸ್ (Prabhas) ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ವಿಶೇಷ ವ್ಯಕ್ತಿಯ ಆಗಮನವಾಗುತ್ತಿದೆ ಎಂದು ಇನ್ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದರು. ಎಲ್ಲರೂ ನಟನ ಮದುವೆ ಮ್ಯಾಟರ್ ಎಂದೇ ಭಾವಿಸಿದ್ದರು. ಈಗ ಅಸಲಿ ವಿಚಾರ ಏನು ಎಂಬುದನ್ನು ಪ್ರಭಾಸ್ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಆತ್ಮಹತ್ಯೆಗೆ ಶರಣಾದ ನಟ ಚಂದ್ರು ಮೇಲೆ ಪತ್ನಿಯ ಆರೋಪಗಳೇನು?

ಡಾರ್ಲಿಂಗ್ಸ್.. ಕೊನೆಗೂ ನಮ್ಮ ಜೀವನಕ್ಕೆ ವಿಶೇಷವಾದ ವ್ಯಕ್ತಿಯೊಬ್ಬರು ಪ್ರವೇಶಿಸಲಿದ್ದಾರೆ. ಕಾಯುತ್ತಾ ಇರಿ ಎಂದು ಪ್ರಭಾಸ್ ಇನ್ಸ್ಟಾಗ್ರಾಂನಲ್ಲಿ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಎಲ್ಲರೂ ಮದುವೆ ಬಗ್ಗೆ ಸಿಹಿಸುದ್ದಿ ಕೊಡಲು ಪ್ರಭಾಸ್ ರೆಡಿಯಾಗಿದ್ದಾರೆ ಎಂದು ಭಾವಿಸಿದ್ದರು. ಆದರೆ ಈಗ ನಟ ನೀಡಿರುವ ಮಾಹಿತಿನೇ ಬೇರೆ.. ‘ಕಲ್ಕಿ 2898’ ಎಡಿ (Kalki 2898 AD) ಸಿನಿಮಾ ಪ್ರಚಾರಕ್ಕಾಗಿ ಈ ರೀತಿ ಟ್ರಿಕ್ ಯೂಸ್ ಮಾಡಿದ್ದಾರೆ. ಬುಜ್ಜಿ ಕಾರನ್ನು ಪರಿಚಯಿಸಿದ್ದಾರೆ. ಶೇರ್ ಮಾಡಿರುವ ವಿಡಿಯೋದಲ್ಲಿ ‘ಮಹಾನಟಿ’ ಕೀರ್ತಿ ಸುರೇಶ್ ಧ್ವನಿ ಕೂಡ ಕೇಳಿ ಬಂದಿದೆ.

ಅಂದಹಾಗೆ, ಇದು ಪ್ರಭಾಸ್ ಅವರ ವೈಯಕ್ತಿಕ ಜೀವನದ ವಿಷಯ ಅಲ್ಲ. ಪಕ್ಕಾ ಸಿನಿಮಾದ ವಿಚಾರ. ‘ಕಲ್ಕಿ 2898 ಎಡಿ’ ಸಿನಿಮಾದ ಪ್ರಚಾರಕ್ಕಾಗಿಯೇ ಪ್ರಭಾಸ್ ಅವರು ಆ ರೀತಿ ಪೋಸ್ಟ್ ಮಾಡಿದ್ದರು. ಈ ಸಿನಿಮಾದಲ್ಲಿ ಒಂದು ವಿಶೇಷ ಕಾರು ಇರಲಿದೆ. ಅದನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಅದಕ್ಕೆ, ‘ಬುಜ್ಜಿ’ (Bujji) ಎಂದು ಹೆಸರು ಇಡಲಾಗಿದೆ. ಆ ಕಾರು ಸಿರಿ, ಅಲೆಕ್ಸಾ ರೀತಿ ಮಾತನಾಡಲಿದೆ. ಅದಕ್ಕೆ ನಟಿ ಕೀರ್ತಿ ಸುರೇಶ್ (Keerthy Suresh) ಧ್ವನಿ ನೀಡಿದ್ದಾರೆ.

ಪ್ರಭಾಸ್ (Prabhas), ದೀಪಿಕಾ ಪಡುಕೋಣೆ (Deepika Padukone) ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಜೂನ್ 27ರಂದು ಬಿಡುಗಡೆ ಆಗಲಿದೆ. ಮೇ 22ರಂದು ‘ಬುಜ್ಜಿ’ ಕಾರಿನ ಸಂಪೂರ್ಣ ಪರಿಚಯ ಮಾಡಿಕೊಡಲಾಗುವುದು ಎಂದು ಚಿತ್ರತಂಡ ತಿಳಿಸಿದೆ.

Share This Article