ಪ್ರಭಾಸ್ ಸಿನಿಮಾ ಹೇಗಿರಲಿದೆ? ಸೀಕ್ರೆಟ್ ರಿವೀಲ್ ಮಾಡಿದ್ರು ವಿಕ್ರಮ್ ಡೈರೆಕ್ಟರ್

Public TV
1 Min Read

ಪ್ರಭಾಸ್- ಲೋಕೇಶ್ ಕನಕರಾಜ್ (Lokesh Kanagaraj) ಸಿನಿಮಾ ಮಾಡೋದು ಖಚಿತವಾಗಿದೆ. ಆದರೆ ಇದು ಲೋಕೇಶ್ ಕಲ್ಪನೆ ಸಿನಿಮ್ಯಾಟಿಕ್ ಯುನಿವರ್ಸ್‌ಗೆ ಸೇರುತ್ತಾ ಅಥವಾ ಕೇವಲ ಪ್ರಭಾಸ್ ಸಿನಿಮಾವಾಗಿ ಕಾಣಿಸಿಕೊಳ್ಳುತ್ತಾ? ಕೊನೆಗೂ ಈ ಅನುಮಾನಕ್ಕೆ ಉತ್ತರ ಕೊಟ್ಟಿದ್ದಾರೆ ವಿಕ್ರಮ್ ಸಿನಿಮಾ ಸಾರಥಿ? ಈ ಬಗ್ಗೆ ಇಲ್ಲಿದೆ ಅಪ್‌ಡೇಟ್.

ಲೋಕೇಶ್ ಕನಕರಾಜ್ ಮಾಡಿದ್ದು ಕೆಲವೇ ಸಿನಿಮಾ. ಅಷ್ಟರಲ್ಲಿ ಇಡೀ ದೇಶದ ತುಂಬಾ ಹೆಸರು ಮಾಡಿದ್ದಾರೆ. ಇವರ ಸಿನಿಮ್ಯಾಟಿಕ್ ಯುನಿವರ್ಸ್ ಕಥಾ ಹಂದರಕ್ಕೆ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ‘ವಿಕ್ರಮ್’ (Vikram) ಸಿನಿಮಾದಲ್ಲಿ ಖೈದಿ ಪಾತ್ರ ಕಾಣಿಸಿದ್ದು ಅದಕ್ಕೆ ಸಾಕ್ಷಿ. ಇದೀಗ ಪ್ರಭಾಸ್- ಲೋಕೇಶ್ ಸಿನಿಮಾ ಮಾಡೋದು ಖಚಿತವಾಗಿದೆ. ಹಾಗಿದ್ದರೆ ಇದೂ ಸಿನಿಮ್ಯಾಟಿಕ್ ಯುನಿವರ್ಸ್ ಕಥಾ ಹಂದರ ಹೊಂದಿರುತ್ತದಾ ಅಥವಾ ಕೇವಲ ಪ್ರಭಾಸ್ ಸಿನಿಮಾ ಮಾತ್ರವೇ ಆಗಿರುತ್ತದಾ? ಅನುಮಾನಕ್ಕೆ ಉತ್ತರ ಕೊಟ್ಟಿದ್ದಾರೆ ಲೋಕೇಶ್.

ಪ್ರಭಾಸ್ (Prabhas) ಸಿನಿಮಾ ನನ್ನ ಸಿನಿಮ್ಯಾಟಿಕ್ ಯುನಿವರ್ಸ್ ಕಥಾ ಹಂದರ ಹೊಂದಿರುವುದಿಲ್ಲ. ಇದು ಕೇವಲ ಪ್ರಭಾಸ್ ಸಿನಿಮಾ ಮಾತ್ರವೇ ಆಗಿರುತ್ತದೆ. ಹೀಗಾಗಿ ಬೇರೊಂದು ಆ್ಯಕ್ಷನ್ ಡ್ರಾಮಾ ಕತೆ ನೀವು ನೋಡಲಿದ್ದೀರಿ ಎಂದಿದ್ದಾರೆ. ಇದನ್ನೂ ಓದಿ:‘ಕ್ಯಾಪ್ಚರ್’ ಚಿತ್ರದ 60 ಅಡಿ ಎತ್ತರದ ಟೈಟಲ್ ಪೋಸ್ಟರ್ ರಿಲೀಸ್

ಡೈರೆಕ್ಟರ್‌ ಮಾತನ್ನ ಕೇಳಿದ ಮೇಲೆ ಪ್ರಭಾಸ್ ಫ್ಯಾನ್ಸ್ ಖುಷಿಯಾಗಿದ್ದಾರೆ. ಹೇಗಿರಲಿದೆ ಇದು ಎಂದು ಕಾಯುತ್ತಿದ್ದಾರೆ. ಆದರೆ ಇದಕ್ಕಿನ್ನೂ ಹಲವು ವರ್ಷ ಬೇಕು. ಸಲಾರ್- ಕಲ್ಕಿ ಎರಡನೇ ಭಾಗ ಮುಗಿದ ನಂತರ ಪ್ರಭಾಸ್, ಲೋಕೇಶ್ ಅಂಗಳಕ್ಕೆ ಬರೋದು ಪಕ್ಕಾ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್