ಅನುಷ್ಕಾ ಜೊತೆ ಪ್ರಭಾಸ್‌ ಮದುವೆಗೆ ಒತ್ತಡ?

Public TV
1 Min Read

ಮೋಸ್ಟ್ ಎಲಿಜಿಬಲ್ ಬ್ಯಾಚುರಲ್ ಪ್ರಭಾಸ್‌ (Prabhas) ಮದುವೆಗೆ ಒತ್ತಡ ಎದುರಾಗಿದೆ. ಅನುಷ್ಕಾ ಶೆಟ್ಟಿ ಜೊತೆ ಮದುವೆಯಾಗುವಂತೆ (Wedding) ನಟನಿಗೆ ಕುಟುಂಬಸ್ಥರು ಬೇಡಿಕೆಯಿಟ್ಟಿದ್ದಾರೆ.

ಪ್ರಭಾಸ್ ಜೊತೆ ಅನೇಕ ನಟಿಯರ ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲಿ ಅನುಷ್ಕಾ ಶೆಟ್ಟಿ ಹೆಸರಂತೂ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಈಗ ಪ್ರಭಾಸ್‌ಗೆ ಅನುಷ್ಕಾ ಅವರನ್ನ ಮದುವೆಯಾಗುವಂತೆ ಕುಟುಂಬ ಒತ್ತಡ ನೀಡಿದೆಯಂತೆ. ಪ್ರಭಾಸ್- ಅನುಷ್ಕಾ ನಡುವೆ ಒಳ್ಳೆಯ ಒಡನಾಟವಿದೆ. ಇಬ್ಬರು ಜೋಡಿಯಾದರೆ ಚೆನ್ನಾಗಿರುತ್ತೆ ಅನ್ನೋದು ಪ್ರಭಾಸ್ ಕುಟುಂಬದ ಆಸೆ. ಆದರೆ ಪ್ರಭಾಸ್ ಮದುವೆಗೆ ಮನಸ್ಸು ಮಾಡುತ್ತಿಲ್ಲ ಎಂಬುದು ಇನ್‌ಸೈಡ್ ಸ್ಟೋರಿ.

ಸಾಲು ಸಾಲು ಸಿನಿಮಾ ಸೋಲುಗಳನ್ನ ಎದುರಿಸುತ್ತಿರೋ ಪ್ರಭಾಸ್ ಈಗ ಸಿನಿಮಾ ಕೆಲಸಗಳಿಗೆ ಗಮನ ನೀಡುತ್ತಿದ್ದಾರೆ. ಗೆಲುವಿಗಾಗಿ ಪ್ರಭಾಸ್ (Prabhas) ಎದುರು ನೋಡ್ತಿದ್ದಾರೆ. ಹಾಗಾಗಿ ಸದ್ಯಕ್ಕೆ ಮದುವೆಗೆ ಪ್ರಭಾಸ್ ನೋ ಎಂದಿದ್ದಾರೆ. ಇದನ್ನೂ ಓದಿ:KD: ಲಾಂಗ್‌ ಹಿಡಿದು ಮಾಸ್‌ ಆಗಿ ಎಂಟ್ರಿ ಕೊಟ್ಟ ರಮೇಶ್‌ ಅರವಿಂದ್

ಅನೇಕ ಸಿನಿಮಾಗಳಲ್ಲಿ ಅನುಷ್ಕಾ-ಪ್ರಭಾಸ್ ಜೋಡಿಯಾಗಿ ನಟಿಸಿದ್ದಾರೆ. ಇಬ್ಬರೂ ಮದುವೆಯಾದರೆ ಚೆನ್ನಾಗಿರುತ್ತೆ ಅನ್ನೋದು ಕುಟುಂಬದ ಆಸೆ ಮಾತ್ರವಲ್ಲ, ಅಭಿಮಾನಿಗಳ ಆಶಯ ಕೂಡ. ಹಾಗಾದ್ರೆ ಸದ್ಯದಲ್ಲೇ ಈ ಜೋಡಿ ಗುಡ್ ನ್ಯೂಸ್ ಕೊಡುತ್ತಾರಾ ಕಾದುನೋಡಬೇಕಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್