ಗರ್ಭಿಣಿ ದೀಪಿಕಾ ಸ್ಟೇಜ್‌ನಿಂದ ಕೆಳಗಿಳಿಯಲು ಸಹಾಯ ಮಾಡಿದ ಪ್ರಭಾಸ್‌ಗೆ ಕಾಲೆಳೆದ ಬಿಗ್ ಬಿ

Public TV
1 Min Read

ಹುನಿರೀಕ್ಷಿತ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ರಿಲೀಸ್‌ಗೆ ರೆಡಿ ಈ ಸಿನಿಮಾ ಪ್ರಚಾರ ಕಾರ್ಯದಲ್ಲಿ ದೀಪಿಕಾ ಪಡುಕೋಣೆ (Deepika Padukone) ಭಾಗಿಯಾಗಿ ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಗರ್ಭಿಣಿ ದೀಪಿಕಾ ವೇದಿಕೆಯಿಂದ ಇಳಿಯಲು ಪ್ರಭಾಸ್ ಸಹಾಯ ಮಾಡಿದ್ದಾರೆ. ಅದಕ್ಕೆ, ಅಮಿತಾಭ್ ಬಚ್ಚನ್ ಕಾಲೆಳೆದಿದ್ದಾರೆ.

 

View this post on Instagram

 

A post shared by Viral Bhayani (@viralbhayani)

ತುಂಬು ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ಮುಂಬೈನಲ್ಲಿ ನಡೆದ ‘ಕಲ್ಕಿ’ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಸಿನಿಮಾ ಕುರಿತು ಈವೆಂಟ್‌ನಲ್ಲಿ ಮಾತಾಡಿ, ಬರುತ್ತಿದ್ದಂತೆ ದೀಪಿಕಾ ವೇದಿಕೆಯಿಂದ ಇಳಿಯಲು ಮುಂದಾದಾಗ, ಪ್ರಭಾಸ್ ಮತ್ತು ಅಮಿತಾಭ್ ಇಬ್ಬರೂ ನಟಿಯ ಸಹಾಯಕ್ಕೆ ಧಾವಿಸಿದರು. ಪ್ರಭಾಸ್ (Prabhas) ಅವರು ದೀಪಿಕಾ ಅವರ ಕೈ ಹಿಡಿದು ಆರಾಮವಾಗಿ ವೇದಿಕೆಯಿಂದ ಕೆಳಗೆ ಇಳಿಯಲು ಸಹಾಯ ಮಾಡಿದರು. ಬಿಗ್ ಬಿ ಅವರು ಪ್ರಭಾಸ್ ಹಿಂದೆ ನಿಂತು ತಮಾಷೆ ಕೂಡ ಮಾಡಿದ್ದಾರೆ. ಇದನ್ನೂ ಓದಿ:ತೆಲುಗು ನಟ ಚಿರಂಜೀವಿ ಮಾಜಿ ಅಳಿಯ ಶಿರೀಶ್ ನಿಧನ

ಈ ಕಾರ್ಯಕ್ರಮದಲ್ಲಿ ಡಾರ್ಲಿಂಗ್ ಪ್ರಭಾಸ್, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ, ರಾಣಾ ದಗ್ಗುಬಾಟಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ‘ಕಲ್ಕಿ’ ಪ್ರೀ ರಿಲೀಸ್ ಈವೆಂಟ್‌ಗಾಗಿ 10 ಕೋಟಿ ರೂ. ಖರ್ಚಾಗಿದೆ ಎನ್ನಲಾಗಿದೆ. ದೀಪಿಕಾ ಅವರು ವೇದಿಕೆಯಲ್ಲಿ ಸಿನಿಮಾ ಕುರಿತಾಗಿ ಕೂಡ ಮಾತನಾಡಿದ್ದಾರೆ.

ಅಂದಹಾಗೆ, ‘ಕಲ್ಕಿ 2898 ಎಡಿ’ ಸಿನಿಮಾ ಇದೇ ಜೂನ್ 27ಕ್ಕೆ ರಿಲೀಸ್ ಆಗಲಿದೆ. ಬಹುಭಾಷೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಮೊದಲ ಬಾರಿಗೆ ದೀಪಿಕಾ, ಈ ಚಿತ್ರಕ್ಕಾಗಿ ತಮ್ಮ ಮಾತೃಭಾಷೆ ಕನ್ನಡದಲ್ಲಿ ಡಬ್ ಮಾಡಿರೋದು ವಿಶೇಷ.

Share This Article