ಪವನ್‌ ಕಲ್ಯಾಣ್‌ ಜೊತೆಗಿನ ಫೋಟೋ ಶೇರ್‌ ಮಾಡಿ ಸಂಭ್ರಮಿಸಿದ ರಾಮ್‌ ಚರಣ್‌ ಪತ್ನಿ

Public TV
1 Min Read

ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಆಂಧ್ರಪ್ರದೇಶದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಪವನ್ ಕಲ್ಯಾಣ್‌ಗೆ (Pawan Kalyan) ರಾಮ್ ಚರಣ್ ಪತ್ನಿ ಉಪಾಸನಾ (Upasana) ವಿಶೇಷವಾಗಿ ಶುಭಕೋರಿದ್ದಾರೆ. ಪವನ್‌ ಕಲ್ಯಾಣ್‌ ಜೊತೆಗಿನ ಫೋಟೋ ಶೇರ್‌ ಮಾಡಿ ಉಪಾಸನಾ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾ ಘೋಷಿಸಿದ ಸನ್ನಿ ಡಿಯೋಲ್

ನಟ ಪವನ್ ಕಲ್ಯಾಣ್ ಸಚಿವರಾಗಿ ಆಗಿ ಪಟ್ಟ ಅಲಂಕರಿಸಿರೋದು ಚಿರಂಜೀವಿ (Megastar Chiranjeevi) ಇಡೀ ಕುಟುಂಬದಕ್ಕೆ ಖುಷಿ ಕೊಟ್ಟಿದೆ. ಎಲ್ಲರೂ ಸೆಲೆಬ್ರೇಶನ್ ಮೂಡ್‌ನಲ್ಲಿದ್ದಾರೆ. ಹೀಗಿರುವಾಗ ಉಪಾಸನಾ ಅವರು ಪುತ್ರಿ ಕ್ಲಿನ್ ಕಾರಾ ಜೊತೆಗಿನ ಫೋಟೋ ಮತ್ತು ಮುಂದಿನ ಫೋಟೋದಲ್ಲಿ ಪಿಎಂ ನರೇಂದ್ರ ಮೋದಿ ಜೊತೆ ಚಿರಂಜೀವಿ, ಪವನ್ ಕಲ್ಯಾಣ್ ಸಕ್ಸಸ್ ಸಂಭ್ರಮಿಸುತ್ತಿರುವ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ.

ನನ್ನ ದೇಶದ ಜನರ ಬಗ್ಗೆ ನನಗೆ ಹೆಮ್ಮೆ ಇದೆ. ತಮ್ಮ ಕುಟುಂಬಗಳಿಗೆ ಆರ್ಥಿಕ ಸ್ಥಿರತೆಯನ್ನು ಸಾಧಿಸುವುದು ಎಲ್ಲಕ್ಕಿಂತ ಮುಖ್ಯ ಎಂದು ಅವರು ತೋರಿಸಿದ್ದಾರೆ. ನಮ್ಮ ಹೊಸ ಸರ್ಕಾರವು ಭಾರತದ ಜನರಿಗೆ ನ್ಯಾಯವನ್ನು ನೀಡುತ್ತದೆ ಅಂತ ನಾನು ನಂಬುತ್ತೇನೆ. ನಮ್ಮ ದೇಶದಲ್ಲಿ ಮಹತ್ವದ ಬದಲಾವಣೆಗೆ ಕಾರಣರಾದವರಿಗೆ ಅಭಿನಂದನೆಗಳು ಎಂದು ಉಪಾಸನಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಪೋಸ್ಟ್‌ಗೆ ಅಭಿಮಾನಿಗಳಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.

ಅಂದಹಾಗೆ, ಓಜಿ, ಹರಿಹರ ವೀರ ಮಲ್ಲು, ಶ್ರೀಲೀಲಾ ಜೊತೆಗಿನ ಉಸ್ತಾದ್‌ ಭಗತ್‌ ಸಿಂಗ್‌ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಪವನ್‌ ಕಲ್ಯಾಣ್‌ ಕೈಯಲ್ಲಿವೆ. ಸಚಿವರಾಗಿರುವ ಆಗಿರುವ ಪವನ್‌ ಕಲ್ಯಾಣ್‌ ಇದೀಗ ರಾಜಕೀಯ ಕೆಲಸದ ನಡುವೆ ಸಿನಿಮಾ ಕಂಪ್ಲೀಟ್‌ ಮಾಡುತ್ತಾರಾ? ಎಂದು ಕಾಯಬೇಕಿದೆ.

Share This Article