3ನೇ ಪತ್ನಿಯಿಂದಲೂ ದೂರಾವಾದ್ರಾ ನಟ ಪವನ್ ಕಲ್ಯಾಣ್?

Public TV
2 Min Read

ಟಾಲಿವುಡ್ (Tollywood) ನಟ ಪವನ್ ಕಲ್ಯಾಣ್ (Pawan Kalyan) ಮೂರನೇ ಮದುವೆಯೂ ಮುರಿದುಬಿತ್ತಾ? ಹೀಗೊಂದು ಅನುಮಾನ ಕಾಡುತ್ತಿದೆ. ಟಾಲಿವುಡ್ ಸ್ಟಾರ್ ಪವನ್ ಈಗಾಗಲೇ ಎರಡು ಮದುವೆಗಳನ್ನು ಮುರಿದುಕೊಂಡಿದ್ದು, ಮೂರನೇ ಮದುವೆ ಆಗಿದ್ದು ಎಲ್ಲರಿಗೂ ಗೊತ್ತಿದೆ. ಆದರೆ ಈಗ ನೋಡಿದರೆ ಮೂರನೇ ಪತ್ನಿಗೂ ಡಿವೋರ್ಸ್ ನೀಡಿದ್ದಾರಾ ಎನ್ನುವ ಗುಮಾನಿ ಎದ್ದಿದೆ. ಇದಕ್ಕೆ ಏನು ಕಾರಣ? ಏನಿದರ ಹಿಂದಿನ ರಹಸ್ಯ?

ಪವನ್ ಕಲ್ಯಾಣ್‌ಗೆ ಟಾಲಿವುಡ್‌ನಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೊಯಿಂಗ್ ಹೊಂದಿರುವ ನಟ. ಇವರ ಸಿನಿಮಾ ಸೋಲಲಿ ಗೆಲ್ಲಲಿ. ಭಕ್ತಗಣ ಸಂಖ್ಯೆ ಮಾತ್ರ ಕಮ್ಮಿಯಾಗಲ್ಲ. ನೋಡಲು ಸುರಸುಂದರ ಅಲ್ಲ, ಅದ್ಭುತ ಡಾನ್ಸ್ ಮಾಡುತ್ತಾರೆ ಎನ್ನುವಂತಿಲ್ಲ. ಇಂಥ ಅನೇಕ ಇಲ್ಲ ಇಲ್ಲಗಳ ನಡುವೆಯೂ ಟಾಲಿವುಡ್ ಪವರ್‌ಸ್ಟಾರ್ ಖದರ್ ಉಳಿದುಕೊಂಡು ಬಂದಿದ್ದಾರೆ. ಇದೇ ಪವನ್ ಅನೇಕ ವಿವಾದಕ್ಕೂ ಕಾರಣವಾಗಿದ್ದಾರೆ. ಅದು ಸಿನಿಮಾ, ರಾಜಕೀಯ ಹಾಗೂ ವೈಯಕ್ತಿಕ ಎಲ್ಲದರಲ್ಲೂ ಒಂದಿಲ್ಲೊಂದು ಕಪ್ಪು ಚುಕ್ಕೆ ಕಾಣುತ್ತದೆ. ಇದೀಗ ಮೂರನೇ ಪತ್ನಿ ಅನ್ನಾ ಲೇಜ್ನೇವಾರಿಂದಲೂ ದೂರವಾಗಿದ್ದಾರೆ ಎನ್ನುವ ಹೊಗೆ ಬೀಸುತ್ತಿದೆ. ಇದನ್ನೂ ಓದಿ:ಜುಲೈ 6ಕ್ಕೆ ರಜನಿ-ಶಿವಣ್ಣ ಕಾಂಬಿನೇಷನ್ ನ ‘ಜೈಲರ್’ ಚಿತ್ರ ಹಾಡು

ಪವನ್ ಮೊಟ್ಟಮೊದಲು ಮದುವೆಯಾಗಿದ್ದು ನಂದಿನಿ ಜೊತೆ. ಬಳಿಕ ಕೆಲವು ವರ್ಷಗಳ ನಂತರ ಡಿವೋರ್ಸ್ ನೀಡಿ, ನಂತರ ಹೀರೋಯಿನ್ ರೇಣು ದೇಸಾಯಿ ಜೊತೆ ಸಪ್ತಪದಿ ತುಳಿದರು. ಎರಡು ಮಕ್ಕಳು ಹುಟ್ಟಿದವು. ಕೆಲವು ವರ್ಷ ಅನ್ಯೋನ್ಯವಾಗಿದ್ದ ದಂಪತಿ ಏಕಾಏಕಿ ದೂರವಾದರು. ಎರಡು ವರ್ಷ ಅಷ್ಟೇ. ರಷ್ಯಾ ಮೂಲದ ಅನ್ನಾ ಲೇಜ್ನೇವಾ ಜೊತೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡರು ಪವನ್. ಇಬ್ಬರು ಮಕ್ಕಳೂ ಇದ್ದಾರೆ. ಮೊದಮೊದಲು ಜಂಟಿಯಾಗಿ ಸಮಾರಂಭಗಳಲ್ಲಿ ಕಾಣಿಸುತ್ತಿತ್ತು ಈ ಜೋಡಿ. ಆದರೆ ಇತ್ತೀಚೆಗೆ ನಡೆದ ಸಂಬಂಧಿ ಮದುವೆ ಹಾಗೂ ರಾಮ್-ಉಪಾಸನಾ ಮಗುವಿನ ನಾಮಕರಣಕ್ಕೂ ಪವನ್ ಏಕಾಂಗಿಯಾಗಿ ಹಾಜರಾದರು. ಅಲ್ಲಿಗೆ ಅನ್ನಾಗೂ ಕೈ ಎತ್ತಿದ್ದಾರೆ ಪವನ್ ಎನ್ನುತ್ತಿವೆ ಅಲ್ಲಿಯ ಮಾಧ್ಯಮ.

ಸದ್ಯಕ್ಕೆ ಅನ್ನಾ ಸಿಂಗಪೂರ್ ಅಥವಾ ದುಬೈನಲ್ಲಿ ಮಕ್ಕಳೊಂದಿಗೆ ನೆಲೆಸಿದ್ದಾರಂತೆ. ಅಥವಾ ರಷ್ಯಾಕ್ಕೇ ಹೋಗಿರಬಹುದು ಎನ್ನುತ್ತದೆ ಇನ್ನೊಂದು ಮೂಲ. ಈ ವಿಷಯಕ್ಕೆ ಯಾವುದೇ ಆಧಾರ ಇಲ್ಲ. ಯಾವಾಗ ಇದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಬಂತೋ.. ಪವನ್ ಕಲ್ಯಾಣ್ ಆಪ್ತ ಕಮ್ ನಿರ್ಮಾಪಕ ಬಂಡ್ಲಾ ಗಣೇಶ್ ಗರಂ ಆಗಿದ್ದಾರೆ. ಇದೆಲ್ಲ ನಿಜ ಎಂದು ನಿಮಗೆ ಯಾರು ಹೇಳಿದ್ದು? ಎಂದು ಪ್ರಶ್ನಿಸಿ ಗೆಳೆಯನ ಮಾನ ಉಳಿಸಲು ಒದ್ದಾಡುತ್ತಿದ್ದಾರೆ. ಇನ್ನು ಕೆಲವರು ಇಬ್ಬರು ಹೆಂಡಿರನ್ನು ಬಿಟ್ಟ ಮನಸಿಗೆ ಇನ್ನೊಂದು ಹೆಣ್ಣಿಂದ ದೂರವಾಗೋದು ಕಷ್ಟವಾ ಎಂದು ಕೇಳಿದ್ದಾರೆ. ಅಸಲಿ ಸತ್ಯವನ್ನು ಖುದ್ದು ಪವನ್ ಹೇಳಬೇಕಷ್ಟೇ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್