ಲಿಪ್‌ಲಾಕ್ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ ದಂಪತಿ

Public TV
1 Min Read

ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ (Priyanka Chopra) ಸದ್ಯ ಹಾಲಿವುಡ್ (Hollywood) ಸಿನಿಮಾದಲ್ಲಿ ಸದ್ದು ಮಾಡುತ್ತಿದ್ದಾರೆ. ಇದರ ನಡುವೆ ಪತಿ ಜೊತೆಗಿನ ಲಿಪ್‌ಲಾಕ್ ಫೋಟೋ ಹಂಚಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಇದನ್ನೂ ಓದಿ:‘ಮಿಸ್ಟರ್ ಅಂಡ್ ಮಿಸಸ್ ರಾಜಾ ಹುಲಿ’ ಪೋಸ್ಟರ್ ರಿಲೀಸ್ ಮಾಡಿದ ವೀರೇಂದ್ರ ಹೆಗ್ಗಡೆ

ಪತ್ನಿ ಪ್ರಿಯಾಂಕಾ ಜೊತೆಗಿನ ನಿಕ್ ಲಿಪ್‌ಲಾಕ್ (Lip Lock) ಫೋಟೋ ಶೇರ್‌ ಮಾಡಿ ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ್ದಾರೆ. ‘ನನ್ನ ಶಾಶ್ವತ ಲವ್’ ಎಂದು ನಿಕ್ ಪೋಸ್ಟ್ ಮಾಡಿದ್ದಾರೆ. ಅದನ್ನೇ ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಪೋಸ್ಟ್‌ನಲ್ಲಿ ಲಿಪ್‌ಲಾಕ್ ಮಾಡಿದ್ರೆ, 2ನೇ ಪೋಸ್ಟ್‌ನಲ್ಲಿ ಹಾಟ್ ಆಗಿ ಪ್ರಿಯಾಂಕಾ ದಂಪತಿ ಪೋಸ್ ನೀಡಿದ್ದಾರೆ.

 

View this post on Instagram

 

A post shared by Nick Jonas (@nickjonas)

ಅಂದಹಾಗೆ, ಹಲವು ವರ್ಷಗಳ ಡೇಟಿಂಗ್ ನಂತರ ನಿಕ್ ಜೋನಸ್ ಜೊತೆ 2018ರಲ್ಲಿ ಪ್ರಿಯಾಂಕಾ ಮದುವೆಯಾದರು. ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವಿಗೆ ಈ ಜೋಡಿ ಪೋಷಕರಾಗಿದ್ದಾರೆ. ಕೆರಿಯರ್‌ ಜೊತೆ ಮಗಳ ಆರೈಕೆಯಲ್ಲಿ ಇಬ್ಬರೂ ಬ್ಯುಸಿಯಾಗಿದ್ದಾರೆ.

ಇನ್ನೂ ‘ಸಿಟಾಡೆಲ್’ ನಂತರ ಮತ್ತಷ್ಟು ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಲು ಪ್ರಿಯಾಂಕಾಗೆ ಅವಕಾಶ ಸಿಗುತ್ತಿದೆ. ಬಾಲಿವುಡ್ ಸಿನಿಮಾದಲ್ಲಿ ಅದ್ಯಾವಾಗ ನಟಿಸುತ್ತಾರೆ ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.

Share This Article