11 ವರ್ಷಗಳ ನಂತರ ಮತ್ತೆ ಖಾಕಿ ತೊಟ್ಟ ನೆನಪಿರಲಿ ಪ್ರೇಮ್- ಪೋಸ್ಟರ್ ಔಟ್

Public TV
1 Min Read

ವ್ಲಿ ಸ್ಟಾರ್ ಪ್ರೇಮ್ ಹುಟ್ಟುಹಬ್ಬದ (ಏ.18) ಸಂಭ್ರಮದಲ್ಲಿದ್ದಾರೆ. ಬರ್ತ್‌ಡೇಯಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. 11 ವರ್ಷಗಳ ನಂತರ ಮತ್ತೆ ಖಾಕಿ ತೊಟ್ಟು ಖದರ್ ತೋರಿಸೋಕೆ ನಟ ಪ್ರೇಮ್ ಸಜ್ಜಾಗಿದ್ದಾರೆ. ಸದಾ ಲವರ್‌ ಬಾಯ್‌ ಆಗಿ ಕಾಣಿಸಿಕೊಳ್ಳುತ್ತಿದ್ದ ನಟ ಈಗ ಖಾಕಿ ತೊಟ್ಟು ಪುಂಡರಿಗೆ ಪಾಠ ಮಾಡೋಕೆ ರೆಡಿಯಾಗಿದ್ದಾರೆ.

ಇಂದು (ಏ.18) ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ನೆನಪಿರಲಿ ಪ್ರೇಮ್ ನಟಿಸಲಿರುವ ಹೊಸ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ಚಿತ್ರದ ಪೋಸ್ಟರ್ ಲುಕ್ ಕೂಡ ರಿವೀಲ್ ಆಗಿದೆ. ಇದನ್ನೂ ಓದಿ:‘ಉತ್ತರಕಾಂಡ’ ಚಿತ್ರದಲ್ಲಿ ಲಚ್ಚಿ ಪಾತ್ರ ಬಣ್ಣಿಸಿದ ಚೈತ್ರಾ ಆಚಾರ್

ಪ್ರೇಮ್ ಈ ಸಲ ಬೇರೆ ರೀತಿಯ ಪೊಲೀಸ್ ಪಾತ್ರ ಮಾಡಿದ್ದಾರೆ. ರಫ್ ಆ್ಯಂಡ್ ಟಫ್ ಅಲ್ಲದೇ, ರಗಡ್ ಲುಕ್ ಇರೋ ಪೊಲೀಸ್ ರೀತಿನೂ ಕಾಣಿಸುತ್ತಿದ್ದಾರೆ. ಕೈಯಲ್ಲಿ ಸಿಂಗಲ್ ಬ್ಯಾರಲ್ ಗನ್ ಕೂಡ ಇದೆ. ಅದನ್ನ ಸ್ಟೈಲ್ ಆಗಿ ಪ್ರೇಮ್ ಹಿಡಿದು ಕೊಂಡು, ಗಲಾಟೆ ಮಾಡೋರ ಕಡೆಗೆ ಮುಖ ಮಾಡಿ ನಿಂತಿದ್ದಾರೆ. ಚಿತ್ರದ ಬಗ್ಗೆ ಇಷ್ಟೆಲ್ಲ ವಿಚಾರವನ್ನ ಮೊದಲ ಪೋಸ್ಟರ್ ತೋರಿಸಲಾಗಿದೆ. ಇದನ್ನೂ ಓದಿ:ಶ್ರೀಲೀಲಾ ಕೈಬಿಟ್ಟ ಚಿತ್ರಕ್ಕೆ ರಾಶಿ ಖನ್ನಾ ಎಂಟ್ರಿ

 

View this post on Instagram

 

A post shared by Prem Nenapirali (@premnenapirali)

ಪ್ರೇಮ್ ಹೊಸ ಸಿನಿಮಾಗೆ ತೇಜಸ್ ಬಿ.ಕೆ ಇದ್ದಾರೆ. ಇವರೇ ಚಿತ್ರದ ಕಥೆ ಬರೆದಿದ್ದಾರೆ. ಸಿನಿಮಾಗೆ ಡೈರೆಕ್ಷನ್ ಸಹ ಇವರೇ ಮಾಡುತ್ತಿದ್ದಾರೆ. ಹೆಸರಿಡದ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಕೊಟ್ಟಿದ್ದಾರೆ. ಗೀತಾಂಜಲಿ ಬಿ.ಎಸ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರುವಾಗಲಿದೆ.

2013ರಲ್ಲಿ ‘ಶತ್ರು’ (Shatru Film) ಎಂಬ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ 11 ವರ್ಷಗಳ ಬಳಿಕ ಮತ್ತೆ ಪೊಲೀಸ್ ಪಾತ್ರಕ್ಕೆ ಪ್ರೇಮ್ ಬಣ್ಣ ಹಚ್ಚುತ್ತಿದ್ದಾರೆ.

Share This Article