ಮತ್ತೆ ಪತಿ ಜೊತೆ ಒಂದಾಗುವ ಸೂಚನೆ ನೀಡಿದ ಆಲಿಯಾ ಸಿದ್ದಿಕಿ

Public TV
1 Min Read

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಮತ್ತು ಆಲಿಯಾ ಸಿದ್ದಿಕಿ (Aaliya Siddiqui) ಸಂಸಾರದ ರಂಪಾಟ ಕಳೆದ ವರ್ಷ ಭಾರೀ ಸುದ್ದಿಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದು ಪತಿ ಬಗ್ಗೆ ಆಲಿಯಾ ದೂರಿನ ಪಟ್ಟಿಯನ್ನೇ ಇಟ್ಟಿದ್ದರು. ಪತಿ ನವಾಜುದ್ದೀನ್ ಸಿದ್ದಿಕಿ ಜೊತೆ ಆಲಿಯಾ ಒಂದಾಗುವ ಸುಳಿವು ನೀಡಿದ್ದಾರೆ.

ಇದೀಗ ಆಲಿಯಾ ಸಿದ್ದಿಕಿ ಮದುವೆಯಾಗಿ 14 ವರ್ಷ ಪೂರೈಸಿದ್ದು, ಇದೀಗ ಪತಿಗೆ ವಿಶೇಷವಾಗಿ ಶುಭಕೋರಿದ್ದಾರೆ. 14 ವರ್ಷಗಳ ದಾಂಪತ್ಯದ ಸಂಭ್ರಮ ಎಂದು ಅಡಿಬರಹ ನೀಡಿ, ಪತಿ ಮತ್ತು ಮಕ್ಕಳ ಜೊತೆಗಿನ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ನನಗೂ ನಟಿಸೋಕೆ ಅವಕಾಶ ಕೊಡಿ: ಆಶಿಷ್ ವಿದ್ಯಾರ್ಥಿ ಅಳಲು

ಇಬ್ಬರ ದಾಂಪತ್ಯ ಸರಿಯಿಲ್ಲ (Wedding) ಎಂಬುದು ಕಳೆದ ವರ್ಷ ಬೆಳಕಿಗೆ ಬಂದಿತ್ತು. ಪತಿ ಜೊತೆಗಿನ ಮನಸ್ತಾಪದ ಬಳಿಕ ಮಕ್ಕಳ ಜೊತೆ ಆಲಿಯಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇದೀಗ ಆ್ಯನಿವರ್ಸರಿ ಕುರಿತು ಪೋಸ್ಟ್ ಶೇರ್ ಮಾಡುತ್ತಿದ್ದಂತೆ, ಇಬ್ಬರೂ ಒಂದಾಗುವ ಸೂಚನೆ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಖುಷಿಪಡುತ್ತಿದ್ದಾರೆ.

ಕಳೆದ ವರ್ಷ ಡಿವೋರ್ಸ್‌ಗಾಗಿ ಕೋರ್ಟ್ ಮೆಟ್ಟಿಲೇರಿದ್ದರು ನವಾಜುದ್ದೀನ್- ಆಲಿಯಾ ಜೋಡಿ. ಆದರೆ ಈಗ ಮಕ್ಕಳಿಗಾಗಿ ಒಂದಾಗುವ ಸುಳಿವು ನೀಡಿದ್ದಾರೆ. ಈ ಸುದ್ದಿ ನಿಜನಾ? ಇಬ್ಬರ ಕಡೆಯಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

Share This Article