ಬಲವಂತವಾಗಿ ನಟ ನವದೀಪ್ ಅವರನ್ನು ಬಂಧಿಸುವಂತಿಲ್ಲ : ಹೈಕೋರ್ಟ್

By
1 Min Read

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗಿನ ಖ್ಯಾತ ನಟ ನವದೀಪ್ ಅವರನ್ನು ಬಂಧಿಸಲು ತೆಲಂಗಾಣ ಪೊಲೀಸರು ಸಿದ್ಧತೆ ನಡೆಸಿದ್ದರು. ಮಾದಾಪುರ (Madapur) ಡ್ರಗ್ಸ್ ಕೇಸ್ ನ 37ನೇ ಆರೋಪಿ ಆಗಿದ್ದ ಇವರ ಬಂಧನಕ್ಕೆ (Arrest) ಅಧಿಕಾರಿಗಳು ಬಲೆ ಬೀಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಈಗಾಗಲೇ ವಿಚಾರಣೆಗೂ ಒಳಗಾಗಿರುವ ನವದೀಪ್‍ ತಲೆಮರೆಸಿಕೊಂಡಿದ್ದರು. ಜೊತೆಗೆ ತೆಲಂಗಾಣ ಹೈಕೋರ್ಟಿಗೆ (High Court) ನಿರೀಕ್ಷಣಾ ಜಾಮೀನಿಗೆ ಅರ್ಜಿ ಕೂಡ ಸಲ್ಲಿದ್ದರು.

ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡಿದ್ದ ಮಾನ್ಯ ತೆಲಂಗಾಣ ಉಚ್ಛ ನ್ಯಾಯಾಲಯವು ಬಲವಂತವಾಗಿ ನವದೀಪ್ ಅವರನ್ನು ಬಂಧಿಸುವಂತಿಲ್ಲ ಎಂದು ಆದೇಶ ನೀಡಿದೆ. ಜೊತೆಗೆ ಅವರನ್ನು ವಿಚಾರಣೆಗೆ ಕರೆಯಬಹುದು ಮತ್ತು ಪರೀಕ್ಷೆಗೂ ಒಳಪಡಿಸಬಹುದು. ಆದರೆ, ಈ ನೆಪದಲ್ಲಿ ಅವರನ್ನು ಬಂಧಿಸುವಂತಿಲ್ಲ ಎಂದು ಹೇಳಿದೆ. ಇದನ್ನೂ ಓದಿ:ಆ ನೋವು ಎಂದಿಗೂ ಕಮ್ಮಿಯಾಗಲ್ಲ- ವೈಯಕ್ತಿಕ ವಿಚಾರದ ಬಗ್ಗೆ ಭಾವನಾ ಭಾವುಕ

ಮೊನ್ನೆಯಷ್ಟೇ ನವದೀಪ್ (Navdeep) ಮನೆಯ ಮೇಲೆ ಡ್ರಗ್ಸ್ (Drugs) ನಿಗ್ರಹ ದಳದ ಅಧಿಕಾರಿಗಳು ದಾಳಿ ಮಾಡಿದ್ದರು. ಈ ಹಿಂದೆ ಹೋಟೆಲ್ ವೊಂದರ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ನಿರ್ಮಾಪಕನೂ ಸೇರಿದಂತೆ ಹಲವರನ್ನು ಬಂಧಿಸಿದ್ದರು. ಈ ವೇಳೆ ನವದೀಪ್ ಕೂಡ ಇದ್ದಾರೆ ಎಂದು ಹೇಳಲಾಗಿತ್ತು.

 

ಕೇವಲ ತೆಲುಗು ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಮಲಯಾಳಂ ಚಿತ್ರರಂಗದಲ್ಲೂ ಈ ವಿಷಗಾಳಿ ಬೀಸಿದೆ. ಸ್ವತಃ ಕೇರಳದ ಕಮಿಷ್ನರ್ ಪತ್ರಿಕಾಗೋಷ್ಠಿ ನಡೆಸಿ, ಶೂಟಿಂಗ್ ನಡೆಯುವ ಸ್ಥಳದಲ್ಲೇ ಪರಿಶೀಲನೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು. ಕೆಲ ನಟರು ಶೂಟಿಂಗ್ ಸ್ಥಳದಲ್ಲೇ ಡ್ರಗ್ಸ್ ಸೇವಿಸಿದ್ದರ ಬಗ್ಗೆ ದೊಡ್ಡ ಮಟ್ಟದಲ್ಲೂ ಚರ್ಚೆ ನಡೆದಿತ್ತು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್