ನಟ ನರೇಶ್-ರಮ್ಯಾ ಡಿವೋರ್ಸ್: ನ್ಯಾಯಾಲಯ ಹೇಳಿದ್ದೇನು?

Public TV
3 Min Read

ತೆಲುಗಿನ ನಟ ನರೇಶ್ (Naresh) ಮತ್ತು ಬೆಂಗಳೂರಿನ ರಮ್ಯಾ ರಘುಪತಿ (Ramya Raghupathi) ಡಿವೋರ್ಸ್ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು (Court) ‘ಕಳೆದ ಆರು ವರ್ಷಗಳಿಂದ ರಮ್ಯಾ ಮತ್ತು ನರೇಶ್ ಪರಸ್ಪರ ಪ್ರತ್ಯೇಕವಾಗಿಯೇ ವಾಸಿಸುತ್ತಿರುವ ಕಾರಣದಿಂದಾಗಿ ಮದುವೆ ಅನೂರ್ಜಿತಗೊಳಿಸಬಹುದು ಎಂದು ಅಭಿಪ್ರಾಯ ಪಟ್ಟಿದೆ. ಹೀಗಾಗಿ ಅತೀ ಶೀಘ್ರದಲ್ಲೇ ನರೇಶ್ ಮತ್ತು ರಮ್ಯಾ ಅಧಿಕೃತವಾಗಿ ದೂರವಾಗಲಿದ್ದಾರೆ.

ಈ ಅರ್ಜಿಯ ಜೊತೆಗೆ ನರೇಶ್ ಮತ್ತು ಕುಟುಂಬದವರು ರಮ್ಯಾ ತಮ್ಮ ನಿವಾಸಕ್ಕೆ ಅಧಿಕೃತವಾಗಿ ಪ್ರವೇಶ ಮಾಡುವುದನ್ನು ನಿಷೇಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣಕ್ಕೂ ಆದೇಶ ಹೊರಡಿಸಿದ್ದು ನರೇಶ್ ಅವರ ನಿವಾಸವನ್ನು ಪ್ರವೇಶಿಸುವುದಕ್ಕೆ ರಮ್ಯಾ ಅವರಿಗೆ ಕೋರ್ಟ್ ನಿರ್ಬಂಧ ಹೇರಿದೆ.

ಸಿನಿಮಾ ವಿಷ್ಯದಲ್ಲೂ ರಮ್ಯಾಗೆ ಶಾಕ್

ತಮ್ಮ ಜೀವನದ ಕಥೆಯನ್ನೇ ಪತಿ ನರೇಶ್ ಮತ್ತು ನಟಿ ಪವಿತ್ರಾ ಲೋಕೇಶ್ (Pavitra Lokesh) ಸಿನಿಮಾ ಮಾಡಿದ್ದಾರೆ. ಅದು ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಅದನ್ನು ತಡೆಯಬೇಕು ಎಂದು ನರೇಶ್ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲು ಏರಿದ್ದರು. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಈ ಕುರಿತಂತೆ ವಿಚಾರಣೆ ನಡೆಸಿ, ಅಂತಿಮ ತೀರ್ಪು ನೀಡಿದೆ. ಅರ್ಜಿಯಲ್ಲಿ ಯಾವುದೇ ಸಕರಾರಣವಿಲ್ಲದ ಕಾರಣದಿಂದಾಗಿ ರಮ್ಯಾ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.

ಈ ಹಿಂದೆ ಸಿನಿಮಾ ರಿಲೀಸ್ ವೇಳೆಯೂ ರಮ್ಯಾ ಇದೇ ರೀತಿಯಲ್ಲಿ ತಡೆಯಾಜ್ಞೆ ತರುವ ಪ್ರಯತ್ನ ಮಾಡಿದ್ದರು. ಸಿನಿಮಾದ ಕಥೆಯು ತಮ್ಮ ಜೀವನದ ಅನೇಕ ಘಟನೆಗಳನ್ನು ಹೋಲುತ್ತದೆ. ಹಾಗಾಗಿ ಚಿತ್ರವು ರಿಲೀಸ್ ಆಗಬಾರದು ಎಂದು ಕೋರ್ಟ್ ಮೆಟ್ಟಿಲು ಏರಿದ್ದರು. ಆಗಲೂ ಕೂಡ ರಮ್ಯಾಗೆ ಹಿನ್ನೆಡೆಯಾಗಿತ್ತು. ಸಿನಿಮಾದಲ್ಲಿ ಕಾಲ್ಪನಿಕ ಕಥೆಯಂದು ಹಾಕಲಾಗಿದೆ. ಸೆನ್ಸಾರ್ ಮಂಡಳಿ ಕೂಡ ಅದಕ್ಕೆ ಒಪ್ಪಿ ಪತ್ರ ಕೊಟ್ಟಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿತ್ತು.

ಜೂನ್ 23 ರಿಂದ ಮತ್ತೆ ಮದುವೆ ಸಿನಿಮಾ ಪ್ರತಿಷ್ಠಿತ ಒಟಿಟಿ (OTT) ಅಮೇಜಾನ್ ಪ್ರೈಮ್ ನಲ್ಲಿ ಸ್ಕ್ರೀಮಿಂಗ್ ಆಗುತ್ತಿದೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ಮೂಡಿಬಂದಿದ್ದ ಮತ್ತೆ ಮದುವೆಗೆ ಥಿಯೇಟರ್ ನಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು. ತೆಲುಗಿನಲ್ಲಿ ಮಳ್ಳಿಪೆಳ್ಳಿ ಎಂಬ ಟೈಟಲ್ ನಡಿ ಮೇ 26ರಂದು ಬಿಡುಗಡೆಯಾಗಿತ್ತು.

ಟಾಲಿವುಡ್ ನಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕ ಬೆನ್ನಲ್ಲೆ ಕನ್ನಡದಲ್ಲಿ ಮತ್ತೆ ಮದುವೆ ಎಂಬ ಶೀರ್ಷಿಕೆಯಡಿ ಜೂನ್ 9ರಂದು ತೆರೆಕಂಡಿತ್ತು. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ ಅಮೇಜಾನ್ ಪ್ರೈಮ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು. ಚಿತ್ರಕ್ಕೆ ಎಂ. ಎಸ್. ರಾಜು, ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದು, ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.

 

ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು. ಬೋಲ್ಡೆಸ್ಸ್ ಜೋಡಿಯ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಹಾನಿಯನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಅಮೇಜಾನ್ ನಲ್ಲಿ ನೋಡಬಹುದು.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್