ರಶ್ಮಿಕಾ ವೈಯಕ್ತಿಕ ವಿಷ್ಯವನ್ನು ಚಿತ್ರ ಪ್ರಚಾರಕ್ಕೆ ಬಳಸಿದ ನಾನಿ ಟೀಮ್‌ ವಿರುದ್ಧ ಫ್ಯಾನ್ಸ್‌ ಗರಂ

Public TV
1 Min Read

ನ್ಯಾಚುರಲ್ ಸ್ಟಾರ್ ನಾನಿ ನಟನೆಯ ‘ಹಾಯ್ ನಾನ್ನ’ (Hi Nanna) ಸಿನಿಮಾ ಇದೇ ಡಿಸೆಂಬರ್ 7ರಂದು ರಿಲೀಸ್ ಸಜ್ಜಾಗಿದೆ. ಈ ಸಂದರ್ಭದಲ್ಲಿಯೇ ನಾನಿ ಟೀಮ್ ಯಡವಟ್ಟು ಮಾಡಿಕೊಂಡಿದೆ. ರಶ್ಮಿಕಾ ವೈಯಕ್ತಿಕ ವಿಚಾರವನ್ನ ತಮ್ಮ ಚಿತ್ರ ಪ್ರಚಾರಕ್ಕಾಗಿ ಬಳಸಿಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಾನಿ- ಮೃಣಾಲ್ ನಟನೆಯ ‘ಹಾಯ್ ನಾನ್ನ’ ಚಿತ್ರ ಬಹುಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಚಿತ್ರದ ಪ್ರಮೋಷನ್‌ಗಾಗಿ ಪ್ರಿ ರಿಲೀಸ್ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ಮಾಡಿದ್ದಾರೆ. ರಶ್ಮಿಕಾ- ವಿಜಯ್ ದೇವರಕೊಂಡ ಮಾಲ್ಡೀವ್ಸ್ ಫೋಟೋವನ್ನ ತಮ್ಮ ಚಿತ್ರ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಮಾಲ್ಡೀವ್ಸ್‌ ಫೋಟೋವನ್ನು ಬೇರೇ ಬೇರೇ ಸಮಯದಲ್ಲಿ ಇಬ್ಬರೂ ಹಂಚಿಕೊಂಡಿದ್ದರು. ಆದರೆ ರಶ್ಮಿಕಾ- ವಿಜಯ್ (Vijay Devarakonda) ಇಬ್ಬರೂ ಒಟ್ಟಿಗೆ ಮಾಲ್ಡೀವ್ಸ್‌ಗೆ ಹೋಗಿದ್ದಾರೆ ಎಂದೇ ಅಭಿಮಾನಿಗಳು ಊಹಿಸಿದ್ದರು. ಇದನ್ನೂ ಓದಿ:ಶೂಟಿಂಗ್ ವೇಳೆ ಅವಘಡ: ಮಂಡ್ಯ ರಮೇಶ್ ಗೆ ತೀವ್ರ ಗಾಯ

ಈಗ ಅದೇ ಫೋಟೋವನ್ನು ಬಳಸಿಕೊಂಡು ನಾನಿ ಟೀಮ್ ಗಿಮಿಕ್ ಮಾಡಿದೆ. ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಇಬ್ಬರ ಫೋಟೋ ಅಕ್ಕ-ಪಕ್ಕ ಇಟ್ಟು ಬಿತ್ತರ ಮಾಡಲಾಗಿದೆ. ಸಿನಿಮಾಗಾಗಿ ಬೇರೇ ಅವರ ವೈಯಕ್ತಿಕ ವಿಚಾರವನ್ನ ಬಳಕೆ ಮಾಡೋದು ಅದೆಷ್ಟರ ಮಟ್ಟಿಗೆ ಸರಿ ಎಂದು ಫ್ಯಾನ್ಸ್ ಪ್ರಶ್ನೆ ಮಾಡಿದ್ದಾರೆ. ನಾನಿ (Nani) ಟೀಮ್, ರಶ್ಮಿಕಾ ಮತ್ತು ವಿಜಯ್‌ಗೆ ಕ್ಷಮೆ ಕೇಳಲೇಬೇಕು ಎಂದು ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ.

‘ಗೀತಾ ಗೋವಿಂದಂ’ ಚಿತ್ರಕ್ಕೆ ವಿಜಯ್ ದೇವರಕೊಂಡಗೆ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿ ನಟಿಸಿದ್ದರು. ಸಿನಿಮಾಗಾಗಿ ಪರಿಚಯವಾದ ಗೆಳೆತನ ಇಂದಿಗೂ ಚೆನ್ನಾಗಿದೆ. ಒಬ್ಬರ ಸಿನಿಮಾಗೆ ಮತ್ತೊಬ್ಬರು ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಲವ್ ರಿಲೇಷನ್‌ಶಿಪ್ ಬಗ್ಗೆ ಅದೆಷ್ಟೇ ಸುದ್ದಿಯಾಗಿದ್ದರೂ ಕೂಡ ರಶ್ಮಿಕಾ ಆಗಲಿ, ವಿಜಯ್ ಆಗಲಿ ಸ್ಪಷ್ಟನೆ ನೀಡಿಲ್ಲ.

Share This Article