ಝೈನಾಬ್ ಜೊತೆ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ಅಖಿಲ್ ಅಕ್ಕಿನೇನಿ

Public TV
1 Min Read

ಟಾಲಿವುಡ್ ನಟ ನಾಗಾರ್ಜುನ ಅವರ ಪುತ್ರ ಅಖಿಲ್ ಅಕ್ಕಿನೇನಿ (Akhil Akkineni) ಅವರು ಝೈನಾಬ್ ರಾವಡ್ಜಿ (Zainab Ravdjee) ಅವರೊಂದಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಾಗಾರ್ಜುನ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಯುವ ಜೋಡಿಗೆ ಶುಭ ಹಾರೈಸುವಂತೆ ಕೇಳಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಸೆಕೆಂಡ್ ಹ್ಯಾಂಡ್ ಎಂದು ಟೀಕಿಸಿದರು: ಸಮಂತಾ

ನಾಗಚೈತನ್ಯ ಅವರ ಎರಡನೇ ಮದುವೆಗೆ ಮುನ್ನವೇ ಅಖಿಲ್ ನಿಶ್ಚಿತಾರ್ಥ ನೆರವೇರಿದೆ. ಗುಟ್ಟಾಗಿ ಅಖಿಲ್ ಎಂಗೇಜ್‌ಮೆಂಟ್ ನಡೆದಿದ್ದು, ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಮ್ಮ ಮಗನ ನಿಶ್ಚಿತಾರ್ಥವನ್ನು ಘೋಷಿಸಲು ನಮಗೆ ಸಂತೋಷವಾಗುತ್ತಿದೆ. ಅಖಿಲ್ ಅಕ್ಕಿನೇನಿ ಹಾಗೂ ನಮ್ಮ ಸೊಸೆಗೆ ಝೈನಾಬ್ ರಾವಡ್ಜಿ ಅವರ ನಿಶ್ಚಿತಾರ್ಥವನ್ನು ನೆರವೇರಿಸಿದ್ದೇವೆ. ಝೈನಾಬ್ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿರುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ಯುವ ದಂಪತಿಗಳನ್ನು ಅಭಿನಂದಿಸಲು ದಯವಿಟ್ಟು ನಮ್ಮೊಂದಿಗೆ ಸೇರಿ ಮತ್ತು ಅವರಿಗೆ ಪ್ರೀತಿ, ಸಂತೋಷ ಮತ್ತು ನಿಮ್ಮ ಆಶೀರ್ವಾದ ನೀಡಿ ಹಾರೈಸಬೇಕು ಎಂದು ಮನವಿ ಮಾಡಿದ್ದಾರೆ.

ಅಂದಹಾಗೆ, ಈ ಹಿಂದೆ ಶ್ರಿಯಾ ಭೂಪಾಲ್ ಎಂಬುವವರ ಜೊತೆ ಅಖಿಲ್ ನಿಶ್ಚಿತಾರ್ಥ ನಡೆದಿತ್ತು. ಕೆಲ ಮನಸ್ತಾಪಗಳಿಂದ ಈ ಜೋಡಿ ಬ್ರೇಕಪ್‌ ಮಾಡಿಕೊಂಡರು. ಈಗ ಝೈನಾಬ್ ಜೊತೆ ಅಖಿಲ್ ಎಂಗೇಜ್ ಆಗಿದ್ದಾರೆ.

Share This Article