NC 24: ಪೌರಾಣಿಕ ಕಥೆ ಹೇಳಲು ಸಜ್ಜಾದ ನಾಗಚೈತನ್ಯ- ಪೋಸ್ಟರ್ ಔಟ್

Public TV
1 Min Read

ಟಾಲಿವುಡ್ ನಟ ನಾಗಚೈತನ್ಯ (Naga Chaitanya) ಇಂದು (ನ.23) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಬರ್ತ್‌ಡೇಯಂದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಪೌರಾಣಿಕ ಸಿನಿಮಾ ಮಾಡಲು ನಟ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:Pushpa 2: ಅಲ್ಲು ಅರ್ಜುನ್, ಶ್ರೀಲೀಲಾ ಐಟಂ ಹಾಡಿನ ಪ್ರೋಮೋ ರಿಲೀಸ್

ನಾಗಚೈತನ್ಯ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ತಾಂಡೇಲ್’ ರಿಲೀಸ್‌ಗೆ ರೆಡಿಯಿದೆ. ಈ ಬೆನ್ನಲ್ಲೇ ಹೊಸ ಚಿತ್ರವನ್ನು ನಟ ಒಪ್ಪಿಕೊಂಡಿದ್ದಾರೆ. ನಿಗೂಢವಾಗಿರುವ ಕಣ್ಣಿನ ಚಿತ್ರವಿರುವ ಪೋಸ್ಟರ್‌ನಲ್ಲಿ ನಾಗಚೈತನ್ಯ ಲುಕ್ ನೋಡುಗರಲ್ಲಿ ಕುತೂಹಲ ಕೆರಳಿಸಿದೆ. ಈ ಚಿತ್ರವನ್ನು ‘ವಿರೂಪಾಕ್ಷ’ ಡೈರೆಕ್ಟರ್ ಕಾರ್ತಿಕ್ ದಂಡು ನಿರ್ದೇಶನ ಮಾಡಿದ್ದಾರೆ.

 

View this post on Instagram

 

A post shared by Chay Akkineni (@chayakkineni)

ಅಂದಹಾಗೆ, ನಾಗಚೈತನ್ಯ ಅವರು ಶೋಭಿತಾ (Sobhita) ಜೊತೆ ಇದೇ ಡಿ.4ರಂದು ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ತೆರೆಮರೆಯಲ್ಲಿ ಮದುವೆ ತಯಾರಿ ಕೂಡ ಜೋರಾಗಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಮದುವೆ ಹೈದರಾಬಾದ್‌ನಲ್ಲಿ ಸರಳವಾಗಿ ಜರುಗಲಿದೆ.

Share This Article