ಬೆಳ್ಳಿಪರದೆಯಲ್ಲಿ ಸಮಂತಾ ಎಂಟ್ರಿ ನೋಡ್ತಿದ್ದಂತೆ ನಾಚಿ ನೀರಾದ ನಾಗಚೈತನ್ಯ

Public TV
1 Min Read

ಟಾಲಿವುಡ್ ನಟ ನಾಗಚೈತನ್ಯ (Nagachaitanya)  ಮತ್ತು ಸಮಂತಾ (Samantha) ನಟನೆಯ ‘ಮನಂ’ (Manam) ಸಿನಿಮಾ ಮತ್ತೆ ಮರು ಬಿಡುಗಡೆಯಾಗಿದೆ. ಈ ಸಿನಿಮಾದ ವಿಶೇಷ ಪ್ರದರ್ಶನಕ್ಕೆ ಚಿತ್ರದ ನಿರ್ದೇಶಕ ವಿಕ್ರಮ್ ಕುಮಾರ್ ಜೊತೆ ನಾಗಚೈತನ್ಯ ಹಾಜರಿ ಹಾಕಿದ್ದಾರೆ. ಈ ವೇಳೆ, ಬೆಳ್ಳಿಪರದೆಯಲ್ಲಿ ಮಾಜಿ ಸಮಂತಾರನ್ನು ನೋಡುತ್ತಿದ್ದಂತೆ ನಾಗಚೈತನ್ಯ ಸ್ಮೈಲ್ ಮಾಡಿದ್ದಾರೆ.

2014ರಲ್ಲಿ ತೆರೆಕಂಡ ‘ಮನಂ’ ಇದೀಗ ಮತ್ತೆ ರೀ ರಿಲೀಸ್ ಆಗಿದೆ. ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂನ ಹಲವು ಚಿತ್ರಮಂದಿರಗಳಲ್ಲಿ ಮನಂ ಸಿನಿಮಾ ವಿಶೇಷ ಪ್ರದರ್ಶನ ಕಾಣುತ್ತಿದೆ. ಇದೇ ಮೇ 23ರ ರಾತ್ರಿ ಹೈದರಾಬಾದ್‌ನಲ್ಲಿ `ಮನಂ’ ಸಿನಿಮಾದ ವಿಶೇಷ ಪ್ರದರ್ಶನದ ವೇಳೆ, ಚಿತ್ರದ ನಿರ್ದೇಶಕನ ಜೊತೆಗೆ ನಾಗ ಚೈತನ್ಯ ಆಗಮಿಸಿದ್ದಾರೆ. ಅಭಿಮಾನಿಗಳ ಮಧ್ಯೆ ಕುಳಿತು ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ:ಸಿನಿಮಾ ಇಂಡಸ್ಟ್ರಿ ಜೊತೆಗೆ ಚಿತ್ರಮಂದಿರ ಬಂದ್ ಮಾಡುವುದಿಲ್ಲ: ಫಿಲ್ಮ್‌ ಚೇಂಬರ್ ಅಧ್ಯಕ್ಷ ಸ್ಪಷ್ಟನೆ

ಈ ಸಿನಿಮಾದಲ್ಲಿ ಸಮಂತಾ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ತೆರೆಯ ಮೇಲೆ ಸಮಂತಾ ಅವರನ್ನು ಮತ್ತೊಮ್ಮೆ ನೋಡಿ ಕಣ್ತುಂಬಿಕೊಂಡಿದ್ದಾರೆ. ಆಗ ಅವರ ಖುಷಿಗೆ ಪಾರವೇ ಇರಲಿಲ್ಲ. ಸಮಂತಾ ದೃಶ್ಯ ಸ್ಕ್ರೀನ್ ಮೇಲೆ ಬರುತ್ತಿದ್ದಂತೆ ನಾಗ ಚೈತನ್ಯ ನಕ್ಕಿದ್ದಾರೆ. ಮಾಜಿ ಪತ್ನಿಯ ಎಂಟ್ರಿಗೆ ನಾಚಿ ನೀರಾಗಿದ್ದಾರೆ. ಈ ವಿಡಿಯೋಗಳು ವೈರಲ್ ಆಗುತ್ತಿವೆ.

ಸಿನಿಮಾದಲ್ಲಿ ಸಮಂತಾ ಜೊತೆಗಿನ ನಾಗಚೈತನ್ಯ ರೊಮ್ಯಾಂಟಿಕ್ ಸೀನ್ ಬರುತ್ತಿದ್ದಂತೆ ಅಭಿಮಾನಿಗಳು ಕೂಗಲು ಶುರು ಮಾಡಿದ್ದಾರೆ. ಈ ವಿಡಿಯೋ ಸದ್ದು ಮಾಡುತ್ತಿದ್ದಂತೆ ಮತ್ತೆ ಈ ಜೋಡಿ ಒಂದಾಗಬಾರದಾ ಎಂದು ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿದೆ.

‘ಮನಂ’ ಸಿನಿಮಾದಲ್ಲಿ ನಾಗಾರ್ಜುನ, ಅಕ್ಕಿನೇನಿ ನಾಗೇಶ್ವರ ರಾವ್, ನಾಗಚೈತನ್ಯ, ಸಮಂತಾ, ಅಖಿಲ್ ಅಕ್ಕಿನೇನಿ, ಶ್ರೀಯಾ ಶರಣ್ ಸೇರಿದಂತೆ ಅನೇಕರು ನಟಿಸಿದ್ದಾರೆ.

Share This Article