‘ಆಪರೇಷನ್ ಸಿಂಧೂರ’ಗೆ ಜೈ ಹಿಂದ್ ಎಂದ ಮೆಗಾಸ್ಟಾರ್ ಚಿರಂಜೀವಿ

Public TV
1 Min Read

ಡರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ 9 ಅಡುಗುತಾಣಗಳ ಮೇಲೆ ಏರ್‌ಸ್ಟೈಕ್ ಮಾಡಿದ ಭಾರತೀಯ ಸೇನೆ ಕಾರ್ಯವನ್ನು ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕೊಂಡಾಡಿದ್ದಾರೆ.

‘ಆಪರೇಷನ್ ಸಿಂಧೂರ’ಗೆ (Operation Sindoor) ಜೈ ಹಿಂದ್ ಎಂದು ಮೆಗಾಸ್ಟಾರ್ ಚಿರಂಜೀವಿ ಬರೆದುಕೊಂಡಿದ್ದಾರೆ. ಈ ಮೂಲಕ ಉಗ್ರರಿಗೆ ತಕ್ಕ ಪಾಠ ಕಲಿಸಿದ ಭಾರತೀಯ ಸೇನೆಗೆ ಜೈ ಎಂದಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ: ಪಾಕ್‌ಗೆ ತಕ್ಕ ಪಾಠ ಕಲಿಸಿದ ಭಾರತಕ್ಕೆ ಜೈ ಎಂದ ಬಾಲಿವುಡ್

ಭಾರತ್ ಮಾತಾ ಕಿ ಜೈ ಆಪರೇಷನ್ ಸಿಂಧೂರ ಎಂದು ಅನುಪಮ್ ಖೇರ್ (Anupam Kher) ಸೋಷಿಯ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಜೈ ಹಿಂದ್ ಸೇನಾ, ಭಾರತ್ ಮಾತಾ ಕಿ ಜೈ ಎಂದು ನಟ ರಿತೇಶ್ ದೇಶ್‌ಮುಖ್ ಬರೆದಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರದ ಮೂಲಕ ನರಮೇಧಕ್ಕೆ ಉತ್ತರ: ಅಮಿತ್ ಶಾ ಶ್ಲಾಘನೆ

ನಿಮ್ರತ್ ಕೌರ್ ಎಕ್ಸ್‌ನಲ್ಲಿ, ನಮ್ಮ ಪಡೆಗಳೊಂದಿಗೆ ಒಗ್ಗೂಡಿ. ಒಂದು ದೇಶ. ಒಂದು ಮಿಷನ್. ಜೈಹಿಂದ್, ಆಪರೇಷನ್ ಸಿಂಧೂರ್. ಜೈ ಹಿಂದ್ ಕಿ ಸೇನಾ ಎಂದು ಬರೆದುಕೊಂಡಿದ್ದಾರೆ.

ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಇದೀಗ ಆಪರೇಷನ್ ಸಿಂಧೂರ ಕಾರ್ಯಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

Share This Article