ದರ್ಶನ್ (Darshan) ಸೋದರಳಿಯ ಮನೋಜ್ (Manoj) ‘ಟಕ್ಕರ್’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಟಕ್ಕರ್ ಬಳಿಕ ಧರಣಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಮನೋಜ್ ಅಭಿನಯದ ಗಾರ್ಡನ್ ಸಿನಿಮಾದ ಮುಹೂರ್ತ ನೆರವೇರಿದೆ.
ಸಿನಿಮಾದ ಮೊದಲ ದೃಶ್ಯಕ್ಕೆ ನಟ ದರ್ಶನ್ ಸಹೋದರ ದಿನಕರ್ ತೂಗುದೀಪ ಕ್ಲ್ಯಾಪ್ ಮಾಡಿದ್ದಾರೆ. ಆರ್ಯ ಮಹೇಶ್ ನಿರ್ದೇಶನದ ಸಿನಿಮಾದಲ್ಲಿ ಮನೋಜ್ ನಾಯಕರಾಗಿ ನಟಿಸುತ್ತಿದ್ದಾರೆ. ಈ ವೇಳೆ ನಟ ದರ್ಶನ್ ಪ್ರಕರಣದ ಬಗ್ಗೆ ಮನೋಜ್ ಮಾತಾಡಿದ್ದಾರೆ. ವಿಷಕೊಡಿ ಅಂತಾ ದರ್ಶನ್, ನ್ಯಾಯಾಧೀಶರ ಮುಂದೆ ಕೇಳಿರೋ ವಿಚಾರದ ಬಗ್ಗೆ ಮನೋಜ್ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಟ ದರ್ಶನ್ & ಗ್ಯಾಂಗ್ ಇಂದು ಕೋರ್ಟ್‌ಗೆ – ದೋಷಾರೋಪ ಹೊರಿಸಲಿರುವ ಕೋರ್ಟ್
ವಿಷಕೊಡಿ ಎನ್ನುವ ವಿಚಾರ ತುಂಬಾ ಬೇಜಾರಾಯ್ತು. ಸಿಚುವೇಷನ್ ಏನಾಗ್ತಿದೆ ಅಂತಾ ಗೊತ್ತಾಗ್ತಿಲ್ಲ. ಅಲ್ಲಿ ಏನು ನಡೀತಿದೆ ಅಂತಾ ಗೊತ್ತಿಲ್ಲ. ಆ ಸಿಚುವೇಷನ್ ಎಸುರಿಸ್ತಿರೋದು ದರ್ಶನ್ ಸರ್. ಎಲ್ಲಾ ಒಳ್ಳೆದಾಗಲಿ ಅಂತಾ ಕೇಳಿಕೊಳ್ತೀನಿ. ಅದೆಲ್ಲ ನೆನೆಸಿಕೊಂಡ್ರೆ ಎಮೋಷನಲ್ ಆಗ್ತೀನಿ. ಅವರ ಹೆಸರು ನೆನಸಿಕೊಂಡು ಮಾತಾಡೋಕೆ ಆಗೊಲ್ಲ, ಭಾವುಕರಾಗಿ ಬಿಡ್ತೀವಿ. ಪ್ರತಿ ಸಲ ಮನೆಗೆ ಹೋದಾಗ ಬರೀ ಸಿನಿಮಾಗಳ ಬಗ್ಗೆ ಮಾತಾಡ್ತಿದ್ವಿ. ನಮಗೆಲ್ಲ ಇಂಡಸ್ಟ್ರಿಗೆ ಬರೋವಾಗ ತುಂಬಾ ಮಾರ್ಗದರ್ಶನ ನೀಡಿದ್ದಾರೆ ದರ್ಶನ್ ಸರ್. ಈಗ ಈಥರ ನೋಡೋಕೆ ಕಷ್ಟ ಆಗ್ತಿದೆ ಎಂದಿದ್ದಾರೆ.
ನಾಯಕ ನಟರಾಗಿ ಗುರ್ತಿಸಿಕೊಳ್ಳುವ ಮುಂಚೆ ನಟ ದರ್ಶನ್ ಅವರ ಜೊತೆಗೆ ಸಿನಿಮಾ ಮಾಡಿರುವ ಮನೋಜ್ ತಮ್ಮ ಮೂರನೇ ಸಿನಿಮಾ ಗಾರ್ಡನ್ ಮುಹೂರ್ತ ಕಂಡಿದೆ. ಈ ವೇಳೆ ದರ್ಶನ್ ಜೊತೆಗಿನ ಒಡನಾಟ ನೆನೆದಿದ್ದಾರೆ. ಇಂಡಸ್ಟ್ರಿಗೆ ಬರುವ ಮುಂಚೆ ನಟ ದರ್ಶನ್ ಕೊಟ್ಟ ಮಾರ್ಗದರ್ಶನದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಈ ಪ್ರಕರಣ ಆದ್ಮೇಲೆ ಭೇಟಿ ಆಗೋಕೆ ಟೈಂ ಸಿಕ್ಕಿಲ್ಲ ಎಂದು ಹೇಳಿದ್ದಾರೆ.