14 ವರ್ಷಗಳ ನಂತರ ಒಂದಾದ ಮಮ್ಮುಟ್ಟಿ, ಪೃಥ್ವಿರಾಜ್ ಸುಕುಮಾರನ್

Public TV
1 Min Read

ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟ್ಟಿ (Mammootty) ಮತ್ತು ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಇದೀಗ 14 ವರ್ಷಗಳ ನಂತರ ಒಂದಾಗಿದ್ದಾರೆ. ಹೊಸ ಸಿನಿಮಾಗಾಗಿ ಇಬ್ಬರೂ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಧನುಷ್-ಐಶ್ವರ್ಯ ರಜನಿಕಾಂತ್ ಡಿವೋರ್ಸ್: ಕೋರ್ಟ್ ನೋಟಿಸ್

2010ರಲ್ಲಿ ‘ಪೋಕರಿ ರಾಜ’ (Pokkiri Raja) ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಸಹೋದರರಾಗಿ ಕಾಣಿಸಿಕೊಂಡಿದ್ದರು. ಈಗ ಹಲವು ವರ್ಷಗಳ ಬಳಿಕ ಥ್ರಿಲರ್ ಸಿನಿಮಾಗಾಗಿ ಮಮ್ಮುಟ್ಟಿ ಮತ್ತು ಪೃಥ್ವಿರಾಜ್ ಜೊತೆಯಾಗಿದ್ದಾರೆ.

ಈ ಸಿನಿಮಾಗೆ ಹೊಸ ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದು, ಆಂಟೊ ಜೋಸೆಫ್ ನಿರ್ಮಾಣ ಮಾಡಲಿದ್ದಾರೆ. ಆದರೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಮಾಲಿವುಡ್‌ ಮಂದಿ ಮೊದಲೇ ಕಥೆ ಹೇಳೋದರಲ್ಲಿ ಮುಂದು. ಹೊಡಿ ಬಡಿ ಕಡಿ ಅನ್ನೋದಕ್ಕಿಂತ ಕಂಟೆಂಟ್‌ ಇರುವ ಕಥೆ ಕೊಡ್ತಾರೆ. ಕಥೆ ತಕ್ಕಂತೆ ಫೈಟ್‌ ಸೀನ್‌ಗಳಿರುತ್ತದೆ. ಹಾಗಾಗಿ ಮಮ್ಮುಟ್ಟಿ ಮತ್ತು ಪೃಥ್ವಿರಾಜ್ ಕಾಂಬಿನೇಷನ್‌ನಲ್ಲಿ ಹೊಸ ಬಗೆಯ ಕಥೆಯನ್ನು ತೋರಿಸೋದಕ್ಕೆ ಚಿತ್ರತಂಡ ಸಜ್ಜಾಗಿದೆ. ಇಬ್ಬರು ಸ್ಟಾರ್‌ಗಳ ಒಂದೇ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಕೇಳಿಯೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Share This Article