ಆಕ್ಸಿಡೆಂಟ್ ಬಳಿಕ ಕಿರಣ್ ರಾಜ್ ಫಸ್ಟ್ ರಿಯಾಕ್ಷನ್- ಹೆಲ್ತ್ ಅಪ್‌ಡೇಟ್ ತಿಳಿಸಿದ ನಟ

Public TV
1 Min Read

‘ಕನ್ನಡತಿ’ ಸೀರಿಯಲ್ ನಟ ಕಿರಣ್ ರಾಜ್‌ಗೆ (Kiran Raj) ಕಾರು ಅಪಘಾತವಾದ (Car Accident) ಬೆನ್ನಲ್ಲೇ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಅವಘಡದ ಬಗ್ಗೆ ನಟ ರಿಯಾಕ್ಟ್ ಮಾಡಿದ್ದಾರೆ. ನಾನು ಈಗ ಆರೋಗ್ಯವಾಗಿದ್ದೇನೆ ಚಿಂತಿಸಬೇಡಿ ಎಂದು ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಡಿಸೆಂಬರ್‌ನಲ್ಲಿ ‘ರಾವಣ’ನಾಗಿ ಘರ್ಜಿಸಲಿದ್ದಾರೆ ಯಶ್

ಏನಾಗಿದೆ ಅನ್ನೋದು ನಿಮಗೆಲ್ಲಾ ಮಾಹಿತಿ ಸಿಕ್ಕಿರುತ್ತದೆ. ಯಾರೆಲ್ಲಾ ಪ್ಯಾನಿಕ್ ಆಗಿ ಮೆಸೇಜ್ ಮಾಡುತ್ತಿರೋ ಚಿಂತಿಸಬೇಡಿ. ನಾನು ಈಗ ಆರೋಗ್ಯವಾಗಿದ್ದೇನೆ. ಸ್ವಲ್ಪ ಏಟಾಗಿತ್ತು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದಯವಿಟ್ಟು ಯಾರು ಆತಂಕಕ್ಕೆ ಒಳಗಾಗಬೇಡಿ. ಎಲ್ಲರಿಗೂ ಧನ್ಯವಾದಗಳು. ನಾನೀಗ ಆರೋಗ್ಯವಾಗಿದ್ದೇನೆ ಎಂದು ಕಿರಣ್ ರಾಜ್ ಹೆಲ್ತ್ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ.

ಅಂದಹಾಗೆ, ಮುದ್ದರಾಯನ ಪಾಳ್ಯ ವೃದ್ದಾಶ್ರಮಕ್ಕೆ ಹೋಗಿ ಬರುತ್ತಿದ್ದಾಗ ಸೆ.10ರ ರಾತ್ರಿ ಕಿರಣ್ ರಾಜ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿತ್ತು. ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕಾರು ಚಾಲನೆ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದರು. ಆಗ ಗುದ್ದಿದ ರಭಸಕ್ಕೆ ಕಿರಣ್ ರಾಜ್‌ಗೆ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Share This Article