ಕರಾವಳಿಯವರು ಯಾರನ್ನೂ ಅಷ್ಟು ಬೇಗ ಇಷ್ಟಪಡಲ್ಲ: ಕಿಚ್ಚ ಸುದೀಪ್

Public TV
1 Min Read

– ನನ್ನ ಅಪ್ಪಂಗೆ ಕರಾವಳಿ ಹುಡುಗಿನೇ ಇಷ್ಟ ಆಗಿದ್ದು
– ತುಳು ಚಿತ್ರರಂಗ ಬೆಂಗ್ಳೂರಿಗೆ ಬಂದಿದ್ದು ಖುಷಿ

ಮಂಗಳೂರು: ಕರಾವಳಿ ಜನ ತುಂಬಾ ಸ್ವಾಭಿಮಾನಿಗಳು. ಇಲ್ಲಿಯ ಜನ ಅಷ್ಟು ಬೇಗ ಯಾರನ್ನೂ ಇಷ್ಟಪಡಲ್ಲ. ಆದರೂ ನಿಮ್ಮ ಮನಸಿನಲ್ಲಿ ನನಗೆ ಜಾಗ ಕೊಟ್ಟಿದ್ದೀರಿ ಎಂದು ನಟ ಕಿಚ್ಚ ಸುದೀಪ್ (Kichcha Sudeep) ಹೇಳಿದ್ದಾರೆ.

ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಿರೂಪಕರು ಆಗಿನಿಂದ ನಮ್ಮ ತುಳುನಾಡಿಗೆ, ನಮ್ಮ ತುಳುನಾಡಿಗೆ ಸ್ವಾಗತ ಅಂತ ನಮ್ಮನ್ನು ಹೊರಗಿನವರು ಅಂತ ಮಾಡ್ತಿದ್ದಾರೆ. ತುಳುನಾಡು ನಮ್ಮ ಕರ್ನಾಟಕದಲ್ಲಿದೆ, ಕರ್ನಾಟಕ ನಮ್ಮ ಹೃದಯದಲ್ಲಿದೆ ತಾನೇ. ಮತ್ತೆ ಮಾತ್ ಮಧ್ಯೆ ಹೆಳ್ತಾರೆ ನಾವು ಅರ್ಧ ಈ ಕಡೆಯವರು ಅಂತ ಎಂದು ಕಿಚಾಯಿಸಿದರು. ಇದನ್ನೂ ಓದಿ: ಟ್ರೋಲಿಗರ ವಿರುದ್ಧ ಸಿಡಿದೆದ್ದ ‘ಬಿಗ್‌ ಬಾಸ್‌’ ಮಾಜಿ ಸ್ಪರ್ಧಿ- ಸೈಬರ್ ಠಾಣೆಗೆ ಸುಷ್ಮಾ ವೀರ್ ದೂರು

ನನ್ನ ಅಪ್ಪಂಗೆ ಕರ್ನಾಟಕದ ಕರಾವಳಿ ಹುಡುಗಿನೇ ಇಷ್ಟ ಆಗಿದ್ದು. ಕರಾವಳಿ ಜನ ತುಂಬ ಸ್ವಾಭಿಮಾನಿಗಳು. ಇಲ್ಲಿಯ ಜನ ಅಷ್ಟು ಬೇಗ ಯಾರನ್ನು ಇಷ್ಟಪಡಲ್ಲ, ಅದ್ರು ನಿಮ್ಮ ಮನಸ್ಸಿನಲ್ಲಿ ನಂಗೆ ಜಾಗ ಕೊಟ್ಟಿದ್ದೀರಿ. ನಾನು ಗೌರವ ಪಡೆಯಲು ಬಂದಿಲ್ಲ. ನಿಮ್ಮ ಪ್ರೀತಿಗೆ ಬಂದಿದ್ದೇನೆ. ನನ್ನ ತಾಯಿ ಕರಾವಳಿಯವರು. ಅವರು ಚೆನ್ನಾಗಿ ತುಳು ಮಾತಾಡ್ತಾರೆ. ನನಗೆ ತುಳು ಅಷ್ಟೊಂದು ಬರಲ್ಲ ಎಂದರು.

ಕನ್ನಡ ಚಿತ್ರರಂಗಕ್ಕೆ ಕರಾವಳಿಗರು ಬಂದು ಕನ್ನಡ ಯಾವುದು ತುಳು ಯಾವುದು ಗೊತ್ತಾಗ್ತಾ ಇಲ್ಲ. ತುಳು ಚಿತ್ರರಂಗ ಬೆಂಗಳೂರಿಗೆ ಬಂದದ್ದು ತುಂಬಾ ಖುಷಿಯಾಗಿದೆ. ಯಕ್ಷಗಾನ ಕಲೆ ಎದುರು ನಾವು ಇನ್ನೂ ಚಿಕ್ಕವರು. ಪಟ್ಲ ಫೌಂಡೇಷನ್ ದೊಡ್ಡ ಸಾಧನೆ ಮಾಡಿದೆ. 8 ವರ್ಷದಲ್ಲಿ 11 ಕೋಟಿ ಮೊತ್ತ ಬಡವರಿಗೆ ಸಹಾಯ ಮಾಡಿದ್ದಾರೆ. ಯಕ್ಷಗಾನ ಕಲಾವಿದ ಪಟ್ಲ ಸತೀಶ್ ಶೆಟ್ಟಿ ಸಾಧನೆ ಅಪಾರವಾದ್ದು ಎಂದು ಕಿಚ್ಚ ಸುದೀಪ್ ತಿಳಿಸಿದರು.

Share This Article