EXCLUSIVE: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು: ಕಿಚ್ಚ

Public TV
2 Min Read

– ನಿರ್ಮಾಪಕ ಸೂರಪ್ಪ ಬಾಬು ತಪ್ಪಿಲ್ಲ
– ಇದೊಂದು ಪಾಠ ಅಷ್ಟೆ

ಬೆಂಗಳೂರು: ಸಿನಿಮಾಗೂ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ಕಿತ್ತು ಎಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆಗಿನ ಎಕ್ಸ್ ಕ್ಲೂಸೀವ್ ಸಂದರ್ಶನದಲ್ಲಿ ಮಾತನಾಡುತ್ತಾ, ಸಿನಿಮಾ ರಿಲೀಸ್ ಒಂದು ದಿನ ತಡವಾಗಿದ್ದರ ಕುರಿತು ಬೇಸರ ವ್ಯಕ್ತಪಡಿಸಿದರು. ಸಿನಿಮಾ ರಿಲೀಸ್ ತಡವಾಗಿದೆ. ಇದರಲ್ಲಿ ನಿರ್ಮಾಪಕ ಸೂರಪ್ಪ ಬಾಬು ತಪ್ಪಿಲ್ಲ. ಇದಕ್ಕೆ ಅವರು ಏನೂ ಮಾಡೋಕೆ ಆಗುವುದು ಇಲ್ಲ. ಹೀಗಾಗಿ ಅವರ ಪರ ನಾವಿದ್ದೀವಿ ಎಂದು ತಿಳಿಸಿದ್ದಾರೆ.

soorappa babu

ನಾವು ಯಾವಾಗಲೂ ಕಿತ್ತಾಡುತ್ತಾ, ಜಗಳಾಡುತ್ತಾ ಇರುತ್ತೇವೆ. ಹಾಗಂತ ಇಲ್ಲಿ ಅವರದ್ದು ತಪ್ಪು ಅಂತ ಹೇಳಲು ಸಾಧ್ಯವಿಲ್ಲ. ಕೊರೊನಾದಿಂದ ಲಾಕ್ ಡೌನ್ ಸಮಯ ನಮಗೆಲ್ಲ ದೊಡ್ಡ ಸವಾಲು ನೀಡಿತ್ತು. ಅಂತೆಯೇ ಇದನ್ನೂ ನಾವು ಹೊಸ ಸವಾಲೆಂದು ಸ್ವೀಕರಿಸುತ್ತೇವೆ. ಒಳ್ಳೆಯ ಪಾಠ ಕಲಿಸಿದೆ ಎಂದು ಸುದೀಪ್ ವಿಚಾರವನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಮಾತನಾಡಿದ್ದಾರೆ. ಇದನ್ನೂ ಓದಿ: ಕೋಟಿಗೊಬ್ಬ-3 ಸಿನಿಮಾ ವಿತರಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸೂರಪ್ಪ ಬಾಬು

ಇದೊಂದು ಒಳ್ಳೆಯ ಬೆಳವಣಿಗೆ. ಚಿತ್ರ ರಿಲೀಸ್ ಆಗಲು ರೆಡಿಯಾಗಿತ್ತು. ಆದರೆ ನಾವೇ ಬೇಡ ಅಂತ ಬಿಟ್ಟು ಬಿಟ್ವಿ. ಕೋಪ- ತಾಪಗಳನ್ನು ಸ್ವಲ್ಪ ಪೋಸ್ಟ್ ಪೋನ್ ಮಾಡೋಣ ಅಂತ ಡಿಸೈಡ್ ಮಾಡಿದ್ವಿ. ಜನರಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಅಂತ ನಾಳೆ ಬರುತ್ತಾ ಇದ್ವಿ ಅಂತ ಪಕ್ಕಾ ಮಾಹಿತಿ ನೀಡಿದೆವು. ಇದರಿಂದ ಜನ ಗೊಂದಕ್ಕೀಡಾಗುವುದು ತಪ್ಪಿತ್ತು ಎಂದರು. ಇದನ್ನೂ ಓದಿ: ಸ್ಯಾಂಡಲ್‍ವುಡ್‍ನವರಿಂದಲೇ ಕೋಟಿಗೊಬ್ಬನ ಓಟಕ್ಕೆ ತಡೆ – ಜಾಕ್ ಮಂಜು ಆರೋಪ

ಸಿನಿಮಾ ಆಗಿಲ್ಲ ಅಂದರೂ ನನ್ನ ಸ್ನೇಹಿತರು ಅಂದು ಸಂಜೆಯವರೆಗೂ ಥಿಯೇಟರ್ ಮುಂದೆ ಸಂಭ್ರಮ ವ್ಯಕ್ತಪಡಿಸಿದರು. ಕೆಲವೆಡೆಗಳಲ್ಲಿ ಊಟೋಪಚಾರಗಳನ್ನು ಕೂಡ ಮಾಡಿದ್ದರು. ಒಟ್ಟಿನಲ್ಲಿ ಇಡೀ ದಿನ ಸಂಭ್ರಮಿಸಿರುವುದು ನನಗೆ ಇನ್ನಷ್ಟು ಖುಷಿ ನೀಡಿದೆ. ಸಿನಿಮಾಗೆ ಸಿಗದೇ ಇರುವ ಪಬ್ಲಿಸಿಟಿ ರಿಲೀಸ್ ಆಗದ ದಿನ ಸಿಕ್ತು. ಇದು ನನಗೆ ತುಂಬಾ ಖುಷಿ ನೀಡಿದೆ ಎಂದು ಕಿಚ್ಚ ತಿಳಿಸಿದರು.  ಇದನ್ನೂ ಓದಿ: ಇಂದಿನಿಂದ ಕೋಟಿಗೊಬ್ಬ 3 ಅಬ್ಬರ – 300ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್

ಸಮಯ ಹಾಗೂ ದೇವರ ಸಪೋರ್ಟ್ ಸಿಕ್ಕಾಗ ಮಾತ್ರ ಇಂತಹ ಮ್ಯಾಜಿಕ್ ಆಗಲು ಸಾಧ್ಯ. ಇನ್ನೊಂದು ಖುಷಿ ಏನಂದ್ರೆ ರಾತ್ರಿ ಮಳೆ ಸುರಿದಿದ್ದು, ಒದ್ದೆಯಾದ್ರೂ ಜನ ಚಿತ್ರಮಂದಿಗಳ ಮುಂದೆ ನೆರೆದಿದ್ದರು. ರಾತ್ರಿಯೂ ಚಿತ್ರಮಂದಿರಗಳು ಹೌಸ್ ಫುಲ್ ಆಗಿದ್ದವು. ಮಹಿಳೆಯರೂ ಕೂಡ ಥಿಯೇಟರ್ ಗಳಿಗೆ ಹೋಗಿ ಸಿನಿಮಾ ವೀಕ್ಷಿಸಿದ್ದು ನೋಡಿ ಸಂತಸವಾಯಿತು ಎಂದರು.

ನಾನು ಸಂಪಾದಿಸಿದ ಸ್ನೇಹಿತರೇ ನನ್ನ ಗೆಲುವು. ಪ್ರೀತಿ ಮುಂದೆ ನಮ್ಮ ಪವರ್ ಏನೂ ಇಲ್ಲ. ನಾವು ಸೈಲೆಂಟ್ ಆಗಿದ್ದರೂ ಆದ್ರೂ ನಮ್ಮ ಮೇಲಿನ ಪ್ರೀತಿಗೋಸ್ಕರ ಸ್ನೇಹಿತರು ಕೈ ಜೋಡಿಸಿದ್ದಾರೆ. ಇದಕ್ಕೆ ಕಾರಣ ನಾವಲ್ಲ, ನಮ್ಮ ಕೆಲಸ. ನಾವು ಕೆಲಸ ಮಾಡಬೇಕೇ ಹೊರತು ಮಾತನಾಡುವುದಲ್ಲ. ಒಟ್ಟಿನಲ್ಲಿ ನಮ್ಮ ಕೆಲಸದ ಮೂಲಕ ಜನ ಮಾತಾಡಬೇಕೋ ಹೊರತು ನಾವಲ್ಲ ಎಂದು ಹೇಳಿದರು.

ನನ್ನ ಮೌನ ಯಾವತ್ತೂ ನನಗೆ ಡ್ಯಾಮೇಜ್ ಮಾಡಿಲ್ಲ. ನಂಬಿಕೆ ಸ್ಟ್ರಾಂಗ್ ವರ್ಡ್. ಈ ನಂಬಿಕೆ ಮೂಲಕ ನಾವು ನಮ್ಮ ಪಾಡಿಗೆ ಕೆಲಸ ಮಾಡುತ್ತಾ ಹೋಗೋಣ. ಇದರಿಂದ ಪಾಠ ಕಲಿತಿದ್ದೇವೆ. ಮುಂದಿನ ಸಿನಿಮಾಗಳಲ್ಲಿ ಇಂತಹ ತಪ್ಪು ಮರುಕಳಿಸಲ್ಲ ಎಂದು ಕಿಚ್ಚ ಭರವಸೆ ನಿಡಿದರು.

Share This Article
Leave a Comment

Leave a Reply

Your email address will not be published. Required fields are marked *