‘ಬಿಲ್ಲಾ ರಂಗ ಭಾಷಾ’ ಚಿತ್ರಕ್ಕೆ ಸುದೀಪ್ ಸಖತ್ ಫಿಟ್ ಆಗಬೇಕು- ನಿರ್ದೇಶಕ ಅನೂಪ್ ಭಂಡಾರಿ

Public TV
1 Min Read

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Kiccha Sudeep) ಸದ್ಯ ‘ಮ್ಯಾಕ್ಸ್’ (Max Film) ಸಿನಿಮಾ ಮುಗಿಸಿದ್ದಾರೆ. ಈ ಬೆನ್ನಲ್ಲೇ ಅನೂಪ್ ಭಂಡಾರಿ ಜೊತೆಗಿನ ಚಿತ್ರಕ್ಕೆ ಸುದೀಪ್ ತಯಾರಿ ಮಾಡಿಕೊಳ್ತಿದ್ದಾರೆ. ಈ ಚಿತ್ರದ ಬಗ್ಗೆ ಡೈರೆಕ್ಟರ್ ಅನೂಪ್ ಮಾಹಿತಿ ನೀಡಿದ್ದಾರೆ.

ಸುದೀಪ್ ನಟಿಸಿಲಿರುವ ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಸದ್ಯ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಐದಾರು ತಿಂಗಳ ತಯಾರಿ ನಂತರ ಶೂಟಿಂಗ್ ಶುರುವಾಗಲಿದೆ. ಸುದೀಪ್ ಹೊಸ ಪಾತ್ರಕ್ಕೆ ಸ್ಟ್ರಾಂಗ್ ಫಿಸಿಕ್ ಬೇಕಾಗಿದೆ. ಶೀಘ್ರದಲ್ಲೇ ಸಿನಿಮಾ ಘೋಷಣೆ ಮಾಡುತ್ತೇವೆ. ಯಾರು ನಿರ್ಮಾಣ ಮಾಡ್ತಾರೆ. ಇನ್ನೀತರ ವಿಚಾರಗಳನ್ನು ಸದ್ಯದಲ್ಲೇ ಹೇಳುತ್ತೇವೆ ಎಂದು ನಿರ್ದೇಶಕ ಅನೂಪ್ ಭಂಡಾರಿ (Anoop Bhandari) ತಿಳಿಸಿದ್ದಾರೆ.

ಇನ್ನೂ ‘ಮ್ಯಾಕ್ಸ್’ (Max) ಚಿತ್ರ ಮುಗಿಯುತ್ತಿದ್ದಂತೆ ಸುದೀಪ್ ಅನೂಪ್ ಸಿನಿಮಾಗೆ ದೇಹ ದಂಡಿಸುತ್ತಿದ್ದಾರೆ. ವರ್ಕೌಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ‘ವಿಕ್ರಾಂತ್‌ ರೋಣ’ ಸಿನಿಮಾಗಾಗಿ ಜೊತೆಯಾಗಿ ಕೆಲಸ ಮಾಡಿದ್ರು. ಈಗ ಬಿಲ್ಲಾ ರಂಗ ಭಾಷಾ ಚಿತ್ರದ ಮೇಲೆ ಫ್ಯಾನ್ಸ್‌ಗೆ ನಿರೀಕ್ಷೆಯಿದೆ. ಇದನ್ನೂ ಓದಿ:ಬೀದಿಯಲ್ಲಿ ಕುಡಿದು ತೂರಾಡಿದ ಉರ್ಫಿ ಜಾವೇದ್

ಇದರ ಜೊತೆಗೆ ಚೇರನ್ ಸಿನಿಮಾ, ಆರ್. ಚಂದ್ರು ನಿರ್ಮಾಣದ ಚಿತ್ರ, ಸುದೀಪ್ ನಿರ್ದೇಶನದ ಸಿನಿಮಾಗಳಿವೆ.

Share This Article