ಕತ್ರಿನಾ ಕೈಫ್‌ ಅಷ್ಟು ಸುಂದರವಾಗಿ ಕಾಣೋದೇಕೆ? – ಬ್ಯೂಟಿ ಸೀಕ್ರೆಟ್‌ ಕೇಳಿದ್ರೆ ನೀವೂ ಅದನ್ನೇ ಮಾಡ್ತೀರಾ..

Public TV
2 Min Read

ಸಿನಿ ತಾರೆಯರು (Film Actress) ಅಂದ್ರೆ ಸಾಕು, ಎಂತವರಿಗೂ ಒಮ್ಮೆ ಕಣ್ಣರಳಿಸಿ ನೋಡಬೇಕೆನಿಸುತ್ತೆ. ಹೊಳಪಿನ ಚರ್ಮ, ಮೋಹಕ ನಗು, ಬಳ್ಳಿಯಂತೆ ಬಳುಕುವ ದೇಹ, ರೇಷ್ಮೆಯಂತಹ ಕೂದಲು ಎಂತವರಿಗೂ ಕಣ್ಣುಕುಕ್ಕುವಂತೆ ಮಾಡುತ್ತೆ. ಹಾಗೆ ನೋಡಿದಾಗ ಸಿನಿ ತಾರೆಯರು ನಿಜಕ್ಕೂ ಏಕೆ ಅಷ್ಟೊಂದು ಸುಂದರವಾಗಿ ಕಾಣ್ತಾರೆ? ಅವರ ಬ್ಯೂಟಿ ಸೀಕ್ರೆಟ್‌ ಏನಿರಬಹುದು ಅನ್ನೋದರ ಬಗ್ಗೆ ತಿಳಿದುಕೊಳ್ಳಲೇಬೇಕು ಅನ್ನಿಸುತ್ತೆ.

ಹೌದು. ನಟ, ನಟಿಯರು ಹುಟ್ಟಿನಿಂದಲೇ ಸೌಂದರ್ಯ ಹೊಂದಿರುವುದಿಲ್ಲ. ಅವರಲ್ಲಿರುವ ಗುರಿ ಮತ್ತು ಉದ್ದೇಶಗಳು ಸೌಂದರ್ಯ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿಸುತ್ತವೆ. ಹಾಗಾಗಿಯೇ ಸಿನಿ ತಾರೆಯರು ಉತ್ತಮ ಆಹಾರ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಕಾಳಜಿ ವಹಿಸುತ್ತಾರೆ. ಉದಾಹರಣೆಗೆ ಬೆಳಗ್ಗೆ ಗ್ರೀನ್ ಟೀ ಸೇವನೆ, ನಂತರ ವ್ಯಾಯಾಮ ಅಂತೆಲ್ಲಾ ಸಮಯ ಮೀಸಲಿಡುತ್ತಾರೆ. ಹಾಗೆಯೆ ಬಾಲಿವುಡ್‌ ಬ್ಯೂಟಿ ಕತ್ರಿನಾ ಕೈಫ್‌ (Katrina Kaif) ತಮ್ಮ ಬ್ಯೂಟಿ ಸೀಕ್ರೆಟ್‌ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ವೀಡಿಯೋ ತುಣುಕು ಹಂಚಿಕೊಂಡಿದ್ದು, ಬ್ಯೂಟಿ ಸೀಕ್ರೆಟ್‌ ಬಗ್ಗೆ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಖ್ಯಾತ ಫ್ಯಾಷನ್ ಡಿಸೈನರ್ ಅನಿತಾ ಕಂಡಂತೆ ಉರ್ಫಿ ಜಾವೇದ್

 

View this post on Instagram

 

A post shared by Katrina Kaif (@katrinakaif)

ನನಗೆ ಉತ್ತಮ ತ್ವಚೆ (Skincare) ಕಾಪಾಡಿಕೊಳ್ಳುವುದು ತುಂಬಾ ಇಷ್ಟ. ಅದಕ್ಕಾಗಿ ಪ್ರತ್ಯೇಕ ಸಮಯ ಮೀಸಲಿಡುತ್ತೇನೆ. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಎರಡು ಲೋಟ ಬೆಚ್ಚಗಿನ ನೀರು ಕುಡಿಯುವುದರಿಂದ ಬ್ಯೂಟಿ ಕಾಳಜಿಯ ದಿನಚರಿ ಆರಂಭಿಸುತ್ತೇನೆ. ನಂತರ ಸೆಲರಿ ಜ್ಯೂಸ್‌ ಕುಡಿಯುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: `ನಾಟು ನಾಟು’ ಹಾಡಿಗೆ ಹೆಜ್ಜೆ ಹಾಕಿದ ಆಲಿಯಾ ಭಟ್- ರಶ್ಮಿಕಾ ಮಂದಣ್ಣ

 

View this post on Instagram

 

A post shared by Katrina Kaif (@katrinakaif)

ಬಳಿಕ ಮುಖಕ್ಕೆ ಸ್ವಲ್ಪ ಎಣ್ಣೆ ಹಚ್ಚಿ ಫೇಸ್‌ ಮಸಾಜ್‌ ಮಾಡಿಕೊಳ್ಳುತ್ತೇನೆ, ಜೊತೆಗೆ ಮುಖವನ್ನ ಐಸಿಂಗ್‌ ಮಾಡಿಕೊಳ್ಳುತ್ತೇನೆ, ಈ ವಿಧಾನವನ್ನು ಹೆಚ್ಚು ಇಷ್ಟಪಡುತ್ತೇನೆ. ನಂತರ ಸಾಧ್ಯವಾದಷ್ಟು ಮಟ್ಟಿಗೆ ಮೇಕಪ್‌ ಅನ್ನು ನೈಸರ್ಗಿಕವಾಗಿಯೇ‌ ಕಾಣುವಂತೆ ಮಾಡಿಕೊಳ್ಳಲು ಬಯಸುತ್ತೇನೆ. ಇದರಿಂದ ಚರ್ಮದ ಕಾಂತಿ ಹೆಚ್ಚಾಗಿ ಮತ್ತಷ್ಟು ಫ್ರೆಶ್‌ ಲುಕ್‌ ನೀಡುತ್ತದೆ ಅಂತಾ ಬರೆದುಕೊಂಡಿದ್ದಾರೆ.

ಉಪಾಹಾರ ವಿಧಾನ ಹೇಗೆ?
ʻಆರೋಗ್ಯಕರ ಆಹಾರವೂ ಜೀವನಶೈಲಿಯ ಭಾಗವಾಗಿರಬೇಕುʼ ಎಂದು ನನ್ನ ತಾಯಿ ನನಗೆ ಹೇಳುತ್ತಿದ್ದರು. ಅದಕ್ಕಾಗಿ ನಾನು ಬೆಳಗ್ಗಿನ ತಿಂಡಿಯನ್ನು ಸರಳವಾಗಿ ತಿನ್ನಲು ಬಯಸುತ್ತೇನೆ. ಉಪಾಹಾರ ಎಂದಿಗೂ ಮಿಸ್‌ ಮಾಡಿಕೊಳ್ಳುವುದಿಲ್ಲ. ಜೊತೆಗೆ ಮಧ್ಯಾಹ್ನ ಊಟಕ್ಕೆ ಬದಲಾಗಿ, ಇಡ್ಲಿ ಅನ್ನು ಮಧ್ಯಾಹ್ನದ ತಿಂಡಿಯಾಗಿ ತಿನ್ನುತ್ತೇನೆ. ಅಕ್ಕಿ ಮತ್ತು ಉರಾದ್‌ ದಾಲ್ ಹಿಟ್ಟಿನಿಂದ ತಯಾರಿಸಿದ ಇಡ್ಲಿಗೆ ಮೊಸರನ್ನೂ ಸೇರಿಸುತ್ತೇನೆ. ಇದರಿಂದ ಇಡ್ಲಿ ಮತ್ತಷ್ಟು ಸಾಫ್ಟ್‌ ಆಗುತ್ತದೆ. ಇಡ್ಲಿ ಜೊತೆಗೆ ಮೊರಿಂಗಾ ಪಾಲಕ್ ಚಟ್ನಿ, ಟೊಮೆಟೊ ಮತ್ತು ಬೀಟ್ರೂಟ್ ಚಟ್ನಿ ಹಾಗೂ ಸಾದಾ ತೆಂಗಿನಕಾಯಿ ಚಟ್ನಿ ಬಳಸುತ್ತೇನೆ ಎಂದು ಅವರು ಹೇಳಿಕೊಂಡಿದ್ದಾರೆ.

Share This Article