ಪ್ರೇಯಸಿ ಜೊತೆ ಜಯಂ ರವಿ ಮ್ಯಾಚಿಂಗ್ ಮ್ಯಾಚಿಂಗ್!

Public TV
1 Min Read

ಕಾಲಿವುಡ್ ನಟ ಜಯಂ ರವಿ (Jayam Ravi) ಸೀಕ್ರೆಟ್ ರಿಲೇಶನ್‌ಶಿಪ್ ಈಗಂತೂ ಸೀಕ್ರೆಟಾಗಿ ಉಳಿದಿಲ್ಲ. ಜಯಂ ರವಿ ಹಾಗೂ ಸಿಂಗರ್ ಕೆನೀಶಾ ಕಾರ್ಯಕ್ರಮವೊಂದರಲ್ಲಿ ಟ್ವಿನ್ನಿಂಗ್ ಡ್ರೆಸ್‌ಕೋಡ್ ಕಾಣಿಸಿಕೊಂಡಿದ್ದು, ಇವರಿಬ್ಬರ ಲವ್ ರಿಲೇಶನ್‌ಶಿಪ್‌ಗೆ ಬಗೆಗಿನ ಚರ್ಚೆಗೆ ಮತ್ತಷ್ಟು ಬಲಬಂದಂತಿದೆ.

ಕೆನೀಶಾ (Kenisha) ಜೊತೆ ಪ್ರೀತಿಯಲ್ಲಿ ಬಿದ್ದಿದ್ದಕ್ಕೆ ಜಯಂ ರವಿ ವಿಚ್ಛೇದನ ಘೋಷಿಸಿದ್ದಾರೆ ಅನ್ನೋದಾಗಿ ಪತ್ನಿ ಆರತಿ ಹೇಳಿಕೊಂಡಿದ್ದರು. ಇತ್ತೀಚೆಗೆ ಕೆನೀಶಾ ಜೊತೆ ಜಯಂ ರವಿ ಊರೂರು ಸುತ್ತುವುದು ಜಗಜ್ಜಾಹೀರಾದ ಮೇಲಂತೂ ಪ್ರೀತಿ ವಿಚಾರ ಬಟಾ ಬಯಲಾಗಿದೆ. ಇಷ್ಟು ಸಾಲದು ಎಂದು ಇದೀಗ ಆಫೀಷಿಯಲ್ ಆಗಿಯೇ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಹೌದು, ನಟ ಜಯಂ ರವಿ ಚಿತ್ರ ನಿರ್ಮಾಣ ಪ್ರಾರಂಭಿಸಿದ್ದು, ನಿರ್ಮಾಣ ಸಂಸ್ಥೆ ಉದ್ಘಾಟನೆ ಸಮಾರಂಭವನ್ನ ಚೆನ್ನೈನಲ್ಲಿ ಅದ್ಧೂರಿಯಾಗಿ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಹಲವು ರಂಗ ಗಣ್ಯರು ಆಗಮಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಹೈಲೈಟ್ ಆಗಿದ್ದು ಕೆನೀಶಾ. ಕಾರಣ ಜಯಂ ರವಿ ಜೊತೆ ಒಂದೇ ಕಾರ್‌ನಲ್ಲಿ ಬಂದಿಳಿದ ಕೆನೀಶಾ, ರವಿಗೆ ಜೋಡಿಯಂತೆ ಕಂಡುಬಂದರು.

ಜೊತೆಗೆ ಟ್ವಿನ್ನಿಂಗ್ ಡ್ರೆಸ್‌ನಲ್ಲಿ ಮಿಂಚಿದ್ದು ವಿಶೇಷವಾಗಿತ್ತು. ಮನೆಯ ಕಾರ್ಯವೆಂಬಂತೆ ಕೆನೀಶಾ ಕಾರ್ಯಕ್ರಮಕ್ಕೆ ಬಂದಿರುವ ಅತಿಥಿಗಳನ್ನ ವಿಚಾರಿಸಿಕೊಂಡರು. ಇಷ್ಟೆಲ್ಲಾ ಆದ್ಮೇಲೂ ಕೆನೀಶಾ ಜೊತೆ ಜಯಂ ರವಿ ಪ್ರೀತಿಯ ವಿಚಾರ ಸುಳ್ಳೆಂದು ವಾದಿಸಲು ಸಾಧ್ಯವೇ?

ಅಂದಹಾಗೆ ಸ್ಟುಡಿಯೋ ಉದ್ಘಾಟನಾ ಸಮಾರಂಭ ನಡೆಯೋದಕ್ಕೂ ಮುನ್ನ ದಿನ ಈ ಜೋಡಿ ತಿರುಪತಿಗೆ ತೆರಳಿ ತಿಮ್ಮಪ್ಪನ ಆಶೀರ್ವಾದ ಪಡೆದಿದ್ದರು. ಮೂಲಗಳ ಪ್ರಕಾರ ಕೆನೀಶಾ ಈ ನಿರ್ಮಾಣ ಸಂಸ್ಥೆಯ ಮುಖ್ಯ ಉಸ್ತುವಾರಿಯಾಗಿರುತ್ತಾರೆ ಎಂಬ ವದಂತಿ ಇದೆ.

ಆರತಿಯೊಂದಿಗೆ ವಿಚ್ಛೇದನ ಮಂಜೂರಾದ ಬಳಿಕ ಜಯಂ ರವಿ ಹಾಗೂ ಕೆನೀಶಾ ಮದುವೆಯಾಗುತ್ತಾರೆ ಎನ್ನಲಾಗ್ತಿದೆ. ಒಟ್ಟಿನಲ್ಲಿ ಇದುವರೆಗೆ ಕದ್ದು ಮುಚ್ಚಿ ನಡೆಯುತ್ತಿದ್ದ ಪ್ರೇಮಕಥೆ ಈಗ ಜಗಜ್ಜಾಹೀರಾಗಿದ್ದಂತೂ ಸತ್ಯ.

Share This Article