ಮಳೆ ಆರ್ಭಟಕ್ಕೆ ಮನೆಗೆ ನೀರು ನುಗ್ಗಿ ಜಗ್ಗೇಶ್ ಕಾರು ಮುಳುಗಡೆ

Public TV
1 Min Read

ಭಾನುವಾರ (ಮೇ22)ರಂದು ಸಂಜೆ ಸುರಿದ ಭಾರೀ ಮಳೆಯಿಂದ ಬೆಂಗಳೂರಿನಲ್ಲಿ (Bengaluru) ಸಾಕಷ್ಟು ಅವಾಂತರ ಆಗಿದೆ. ಈ ನಿಮಿತ್ತ ಜನರು ಪರದಾಟ ನಡೆಸಿದ್ದಾರೆ. ಇದೀಗ ಬಿಜೆಪಿ ರಾಜ್ಯಸಭಾ ಸದಸ್ಯ- ನಟ ಜಗ್ಗೇಶ್ (Jaggesh) ಅವರಿಗೂ ಮಳೆಯ ಅವಾಂತರದ ಬಿಸಿ ತಟ್ಟಿದೆ.

ನಿನ್ನೆ ಸುರಿದ ಮಳೆಯಿಂದ ಜಗ್ಗೇಶ್ ಅವರ ಕಾರು ಮುಳುಗಡೆ ಆಗಿದೆ. ಜಗ್ಗೇಶ್ ಅವರ ಮನೆಯ ರಿಪೇರಿ ಕೆಲಸ ಕಾರ್ಯಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಜಗ್ಗೇಶ್ ಅವರು ತಮ್ಮ BMW ಕಾರನ್ನು ಸ್ನೇಹಿತ ಮುರುಳಿ ಮನೆ ಬಳಿ ನಿಲ್ಲಿಸಿದ್ದರು.  ಇದನ್ನೂ ಓದಿ:‘ಪುಷ್ಪʼ ಪಾರ್ಟ್‌ 2ನಲ್ಲಿ ಶ್ರೀವಲ್ಲಿ ಸಾವು- ರಶ್ಮಿಕಾ ಫೋಟೋ ವೈರಲ್

ಮಳೆ ತಂದ ಸಂಕಷ್ಟದಿಂದ ಮುರಳಿ ಅವರ ಮನೆ- ಪಾರ್ಕಿಂಗ್‌ಗೆ ನೀರು ನುಗ್ಗಿದೆ. ಈ ಪರಿಣಾಮ ಜಗ್ಗೇಶ್ ಅವರ BMW ಕಾರು ಮುಳುಗಡೆಯಾಗಿದೆ. ಕೊನೆಗೂ ಹೇಗೋ ಸ್ನೇಹಿತ ಮುರಳಿ ಅವರು ಪಂಪ್ ಬಳಸಿ ನೀರು ಹೊರ ಹಾಕುವ ಕೆಲಸ ಮಾಡಿದ್ದಾರೆ. ಬೆಂಗಳೂರು ನಿನ್ನೆ ಸುರಿದ ಭಾರೀ ಮಳೆಯಿಂದ ಹತ್ತು ಅಲವು ಅನಾಹುತ ಸೃಷ್ಟಿಸಿದೆ.

ಜಗ್ಗೇಶ್ ಅವರು ಸಿನಿಮಾ- ರಾಜಕೀಯ ಎರಡರಲ್ಲೂ ಆಕ್ಟೀವ್ ಆಗಿದ್ದಾರೆ. ‘ರಾಘವೇಂದ್ರ ಸ್ಟೋರ್ಸ್‌ʼ ಸಿನಿಮಾದ ಬಳಿಕ ಭಿನ್ನ ಕಥೆಗಳ ಮೂಲಕ ಬರಲಿದ್ದಾರೆ.

Share This Article