ದರ್ಶನ್‌ ಪ್ರಕರಣದ ಬಗ್ಗೆ ನಾನು ಮಾತನಾಡಲ್ಲ: ನಟ ಜಗ್ಗೇಶ್‌

Public TV
1 Min Read

ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣವಾಗಿ ಅರೆಸ್ಟ್‌ ಆಗಿದ್ದಾರೆ. ಈ ಬೆನ್ನಲ್ಲೇ ಚಿತ್ರರಂಗದ ಪ್ರಸ್ತುತ ಬೆಳವಣಿಗೆಯ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ. ಇನ್ನೂ ದರ್ಶನ್ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ನೋ ರಿಯಾಕ್ಷನ್ ಎಂದು ನಟ ಜಗ್ಗೇಶ್ (Jaggesh) ಮಾತನಾಡಿದ್ದಾರೆ.

JAGGESH

ಶಿವಾನಂದ ಸರ್ಕಲ್‌ನಲ್ಲಿ ಇಂದು (ಜೂನ್ 30) ನಿರ್ಮಾಪಕರ ಸಂಘದ ನೂತನ ಕಟ್ಟಡಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಜಗ್ಗೇಶ್ ಕೂಡ ಭಾಗಿದ್ದರು. ಈ ವೇಳೆ, ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರಯತ್ನಗಳು ವ್ಯರ್ಥವಾಗುತ್ತಿದೆ. ಚಿತ್ರರಂಗದವರಲ್ಲಿ ಶಿಸ್ತು ಕಮ್ಮಿಯಾಗಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ತಪ್ಪು ಮಾಡಿದ್ದಾಗಿ ಒಪ್ಪಿಕೊಂಡ ನಟಿ ಸಮಂತಾ

ಮುಂಚೆ ಎಲ್ಲಾ ಸಿನಿಮಾ ಮಾಡಬೇಕಾದರೆ, ಎಲ್ಲದಕ್ಕೂ ಸಮಯ ತೆಗೆದುಕೊಳ್ಳೋರು. ಬಜೆಟ್ ಲಿಸ್ಟ್ ರೆಡಿ ಮಾಡೋರು. ಈಗ ಹೀಗೆಲ್ಲಾ ಇಲ್ಲ. ಸಿನಿಮಾಗೆ ಭಾಷೆ ಇಲ್ಲದಂಗೆ ಆಗಿದೆ. ಶಿಸ್ತು ಎಲ್ಲಿ ಇರಲ್ವೋ ಅಲ್ಲಿ ಸಕ್ಸಸ್ ಇರಲ್ಲ. ಈಗಲೂ ಸರಿ ಮಾಡಿದ್ರೆ ಸರಿ ಆಗಲಿದೆ ಎಂದು ಜಗ್ಗೇಶ್ ಮಾತನಾಡಿದರು. ದರ್ಶನ್ ಪ್ರಕರಣದ ಬಗ್ಗೆ ಪ್ರಶ್ನೆ ಕೇಳಿದಾಗ ಯಾರ ಬಗ್ಗೆಯೂ ನಾನು ಮಾತನಾಡಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ.

Share This Article