ವಂಚನೆಗಾಗಿ ನಟ ಗಣೇಶ್ ಗೆ ಜೈಲು ಶಿಕ್ಷೆ

Public TV
1 Min Read

ತೆಲುಗು ಸಿನಿಮಾ ರಂಗದ ಜನಪ್ರಿಯ ನಟ, ರಾಜಕಾರಣಿ ಮತ್ತು ನಿರ್ಮಾಪಕರೂ ಆಗಿರುವ ಬಂಡ್ಲ ಗಣೇಶ್ (Ganesh) ಗೆ ಒಂದು ವರ್ಷ ಜೈಲು ಹಾಗೂ 95 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಗೂಲ್ ನ್ಯಾಯಾಲಯವು ಶಿಕ್ಷೆಯ (Punishment) ಜೊತೆಗೆ 95 ಲಕ್ಷ ರೂಪಾಯಿ ಪಾವಂತಿಸುವಂತೆ ಸೂಚಿಸಿದೆ.

ಒಂಗೂಲಿನ ಜೆಟ್ಟಿ ವೆಂಕಟೇಶ್ವರ (Venkateswara) ಎನ್ನುವವರ ಹತ್ತಿರ ಬಂಡ್ಲ ಗಣೇಶ್ ಹಣಕಾಸು ವ್ಯವಹಾರ ಮಾಡಿದ್ದರು. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ 95 ಲಕ್ಷ ರೂಪಾಯಿ ಮೊತ್ತದ ಚೆಕ್ ಕೂಡ ನೀಡಿದ್ದರು. ಕೊಟ್ಟಿರೋ ಚೆಕ್ ಬೌನ್ಸ್ ಆಗಿತ್ತು. ಹಾಗಾಗಿ ವೆಂಕಟೇಶ್ವರ ಕೋರ್ಟ್ ಮೆಟ್ಟಿಲು ಏರಿದ್ದರು.

 

ಹಾಸ್ಯ ನಟರಾಗಿ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಗಣೇಶ್, ಕೇವಲ ಕಲಾವಿದರಾಗಿ ಉಳಿದುಕೊಂಡಿಲ್ಲ. ನಿರ್ಮಾಪಕರಾಗಿ, ರಿಯಲ್ ಎಸ್ಟೇಟ್ ಉದ್ಯಮಿಯಾಗಿ, ರಾಜಕಾರಣಿಯಾಗಿಯೂ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕರಾಗಿ ಭಾರೀ ಬಜೆಟ್ ಸಿನಿಮಾಗಳನ್ನೂ ಮಾಡಿದ್ದಾರೆ.

Share This Article