ಸ್ನೇಹದಲ್ಲಿ ಬದುಕೋದು ನನಗಿಷ್ಟ, ಇದು ಸಲಗದ ಬರ್ತ್ ಡೇ: ದುನಿಯಾ ವಿಜಿ

Public TV
1 Min Read

ಬೆಂಗಳೂರು: ಸ್ನೇಹದಲ್ಲಿ ಬದುಕೋದು ನನಗೆ ಇಷ್ಟ, ಇದು ಸಲಗದ ಹುಟ್ಟುಹಬ್ಬ ಎಂದು ನಟ ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬದ ಸಂಭ್ರಮದ ವೇಳೆ ಹೇಳಿದರು.

ಇಂದು ದುನಿಯಾ ವಿಜಯ್ ತಮ್ಮ 46ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಕತ್ತಿಯಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿಕೊಂಡರು. ಈ ವೇಳೆ ತಮ್ಮ ‘ಸಲಗ’ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ತಮ್ಮ ನೆಚ್ಚಿನ ನಟನಿಗೆ ವಿಶ್ ಮಾಡಲು ರಾಜ್ಯದ ಹಲವಡೆಯಿಂದ ಅಭಿಮಾನಿಗಳು ಬಂದಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಯ್, ತುಂಬಾ ಖುಷಿಯಾಗುತ್ತಿದೆ. ಇದು ನನ್ನ ಬರ್ತ್ ಡೇ ಅನ್ನೋದಕ್ಕಿಂತ ಸಲಗ ಚಿತ್ರ ತಂಡದ ಹುಟ್ಟುಹಬ್ಬ. ಸ್ನೇಹದಲ್ಲಿ ಬದುಕುವುದು ನನಗೆ ಇಷ್ಟ. ಇದು ಸಲಗದ ಹುಟ್ಟುಹಬ್ಬ. ಚಿತ್ರದ ನಿರ್ದೇಶಕನಾದ ಮೇಲೆ ಮೊದಲ ಹುಟ್ಟುಹಬ್ಬ ಇದು. ಹೀಗಾಗಿ ಸಲಗದ ಹುಟ್ಟುಹಬ್ಬವಿದು ಎಂದರು.

ಫೆಬ್ರವರಿ 14ಕ್ಕೆ ಮತ್ತೊಂದು ಸಾಂಗ್ ಟ್ರೈಲರ್ ಬಿಡುತ್ತೇವೆ. ನಮ್ಮ ಚಿತ್ರ ತಂಡವೇ ನನಗೆ ಬಲ ತಂದು ಕೊಟ್ಟಿದೆ. ಆ್ಯಕ್ಟಿಂಗ್, ಡೈರಕ್ಷನ್ ನಲ್ಲಿ ಎಂಜಾಯ್ ಮಾಡುತ್ತೇನೆ. ಹೀಗಾಗಿ ಈ ಬರ್ತ್ ಡೇ ತುಂಬಾ ಖುಷಿಯಾಗುತ್ತಿದೆ ಎಂದು ಸಂತಸದಿಂದ ಹೇಳಿದರು.

ಈ ಬಾರಿ ತಲ್ವಾರ್ ನಲ್ಲಿ ಕೇಕ್ ಕತ್ತರಿಸೋ ಮೂಲಕ ದುನಿಯಾ ವಿಜಿ ಬರ್ತ್ ಡೇಯನ್ನ ವಿಶೇಷವಾಗಿ ಆಚರಿಸಿಕೊಂಡಿದ್ದು, ಈ ಮೂಲಕ ತಮ್ಮ ಬರ್ತ್ ಡೇ ಸೆಲಬ್ರೇಷನ್ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಯಾವುದೇ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ, ಪ್ರದರ್ಶಿಸುವಂತಿಲ್ಲ. ಇದು ಆರ್ಮ್ಸ್ ಆ್ಯಕ್ಟ್ ಅಡಿ ಅಪರಾಧವಾಗುತ್ತದೆ. ಆದರೆ ಹುಟ್ಟುಹಬ್ಬದ ಸಂಭ್ರಮದ ವೇಳೆ ಈ ಎಡವಟ್ಟು ನಡೆದಿದ್ದು, ಹೊಸ ವಿವಾದವನ್ನು ತನ್ನ ಮೈಮೇಲೆ ಎಳೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *