ಮಾನಸಿಕ ಹಿಂಸೆಯಿಂದ ನರಳುತ್ತಿದ್ದಾರಾ ‘ಸೀತಾ ರಾಮಂ’ ನಟ- ಕಣ್ಣೀರಿಟ್ಟ ದುಲ್ಕರ್ ಸಲ್ಮಾನ್

By
2 Min Read

‘ಸೀತಾ ರಾಮಂ’ (Seetha Ramam) ಸಿನಿಮಾದ ಸಕ್ಸಸ್ ನಂತರ ದುಲ್ಕರ್ ಸಲ್ಮಾನ್ ಸಿನಿಮಾ ಆಯ್ಕೆಯಲ್ಲಿ ಚ್ಯುಸಿಯಾಗಿದ್ದಾರೆ. ತಂದೆ ಮುಮ್ಮಟ್ಟಿ ಮಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿದ್ರು ಕೂಡ ದುಲ್ಕರ್ (Dulquer Salman) ಅವರು ತಮ್ಮ ನಟನೆ, ನಡೆ- ನುಡಿಯಿಂದ ಗೆದ್ದಿದ್ದಾರೆ. ಅಪಾರ ಅಭಿಮಾನಿಗಳನ್ನ ಹೊಂದಿರುವ ದುಲ್ಕರ್ ಸಲ್ಮಾನ್ ಅವರ ಈಗೀನ ನಡೆಯಿಂದ ಫ್ಯಾನ್ಸ್‌ಗೆ ಶಾಕ್ ಆಗಿದ್ದಾರೆ. ದುಲ್ಕರ್ ಸಲ್ಮಾನ್ ಅವರು ಅನಾರೋಗ್ಯ (Health Issue) ಸಮಸ್ಯೆಯಿಂದ ಬಳಲುತ್ತಿದ್ದಾರಾ.? ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

ದುಲ್ಕರ್, ಮೃಣಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಜೊತೆಗಿನ ‘ಸೀತಾ ರಾಮಂ’ ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಬಳಿಕ ಅದೇ ವರ್ಷ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ದುಲ್ಕರ್ ಸಲ್ಮಾನ್ ಗಮನ ಸೆಳೆದರು. ಈಗ ಅವರು ಅನಾರೋಗ್ಯದ ವಿಚಾರವಾಗಿ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸುಳಿವು ಕೊಟ್ಟ ‘ಬಿಗ್ ಬಾಸ್’ ಅನುಪಮಾ ಗೌಡ

ಅಭಿಲಾಷ್ ಜೋಶಿ ನಿರ್ದೇಶನದ ‘ಕಿಂಗ್ ಆಫ್ ಕೋಥಾ’ ಸಿನಿಮಾದಲ್ಲಿ ದುಲ್ಕರ್ ನಟಿಸುತ್ತಿದ್ದಾರೆ. ಇದರ ಮಧ್ಯೆಯೇ ನಟ ದುಲ್ಕರ್ ಅವರು, ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿ, ಕಣ್ಣೀರಿಟ್ಟಿದ್ದಾರೆ. ಇದನ್ನ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ವೀಡಿಯೋಗೆ ಪ್ರಶ್ನೆಗಳ ಸುರಿಮಳೆ ಬರುತ್ತಿದ್ದಂತೆ ನಟ ಈ ಪೋಸ್ಟ್‌ ಡಿಲೀಟ್ ಮಾಡಿದ್ದಾರೆ. ಅಷ್ಟಕ್ಕೂ ನಟ ದುಲ್ಕರ್ ಅವರಿಗೆ ಆಗಿದ್ದೇನು ಎನ್ನುವ ಚಿಂತೆಯಲ್ಲಿ ಅಭಿಮಾನಿಗಳು ಇದ್ದಾರೆ.

ಅವರಿಗೆ ಕೆಲವು ದಿನಗಳಿಂದ ನಿದ್ದೆ ಬರುತ್ತಿಲ್ಲವಂತೆ. ಇದಕ್ಕೆ ತಾವು ಅನುಭವಿಸುತ್ತಿರುವ ಮಾನಸಿಕ ಹಿಂಸೆಯೇ ಕಾರಣ ಎಂದು ನಟ ಹೇಳಿದ್ದಾರೆ. ಕೆಲವು ದಿನಗಳಿಂದ ನಿದ್ದೆ ಬರುತ್ತಿಲ್ಲ. ಸಂದರ್ಭಗಳು ಎಂದಿಗೂ ಒಂದೇ ರೀತಿ ಇರುವುದಿಲ್ಲ. ನಾನು ಮೊದಲ ಬಾರಿಗೆ ಈ ರೀತಿಯ ಅನುಭವವನ್ನು ಅನುಭವಿಸುತ್ತಿದ್ದೇನೆ. ಸಿಕ್ಕಾಪಟ್ಟೆ ಗೊಂದಲದಲ್ಲಿ ಇದ್ದೇನೆ.ಇದರಿಂದ ಹೊರಕ್ಕೆ ಬರಲು ಸಾಧ್ಯವಾಗುತ್ತಿಲ್ಲಎಂದು ಮನದಾಳದ ನೋವು ತೆರೆದಿಟ್ಟಿದ್ದಾರೆ. ನಾನು ಇನ್ನೂ ಏನನ್ನೋ ಹೇಳಲು ಬಯಸುತ್ತೇನೆ. ಆದರೆ ಅದನ್ನು ಹೇಳಲು ಆಗುತ್ತಿಲ್ಲ. ನನ್ನ ಮನಸ್ಸಿನಲ್ಲಿ ಇರುವ ಈ ನೋವನ್ನು ಹೇಳುವುದೋ, ಬೇಡವೋ ತಿಳಿಯುತ್ತಿಲ್ಲ. ಆದರೆ ಈ ನೋವಿನಿಂದ ಹೊರಕ್ಕೆ ಬರಲಾರದ ಹಂತವನ್ನು ನಾನು ತಲುಪಿದ್ದೇನೆ ಎನ್ನಿಸುತ್ತಿದೆ. ನಾನು ಅದನ್ನು ಹೇಳಲಾರದೇ ತೊಳಲಾಡುತ್ತಿದ್ದೇನೆ ಎಂದು ನಟ ಕಣ್ಣೀರಾಗಿದ್ದಾರೆ. ಈ ವೀಡಿಯೋ ಪೋಸ್ಟ್ ಮಾಡಿದ ಕೆಲವೇ ಹೊತ್ತಿನಲ್ಲಿ ನಟ ದುಲ್ಕರ್ ವೀಡಿಯೋ ಡಿಲೀಟ್ ಮಾಡಿರೋದು ಫ್ಯಾನ್ಸ್‌ಗೆ ಆತಂಕ ಮೂಡಿಸಿದೆ. ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡುತ್ತಾರಾ ನಟ ಕಾದುನೋಡಬೇಕಿದೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್