ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ- ಧ್ರುವ ಸರ್ಜಾ

Public TV
1 Min Read

ಕಾವೇರಿ ಹೋರಾಟ (Cauvery) ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಚಿತ್ರರಂಗದ ನಟ-ನಟಿಯರು ಕಾವೇರಿ ಹೋರಾಟಕ್ಕೆ ಸಾಥ್ ನೀಡುತ್ತಿಲ್ಲ ಎನ್ನುವ ಕೂಗು ಎದ್ದಿದೆ. ಈ ಬೆನ್ನಲ್ಲೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಪ್ರತಿಕ್ರಿಯೆ ನೀಡಿದ್ದಾರೆ. ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಮಾತನಾಡಿದ್ದಾರೆ.

ಕಲಾವಿದ ಅನ್ನೋದನ್ನ ಬಿಟ್ಟು, ಕನ್ನಡಿಗನಾಗಿ ರೈತನ ಮಗನಾಗಿ ಮಾತನಾಡುತ್ತೇನೆ. ನಮ್ಮ ಕಲಾವಿದರ ಸಂಘದಿಂದ ಅನಂತ್‌ನಾಗ್ (Ananthnag), ರವಿಚಂದ್ರನ್, ಜಗ್ಗೇಶ್(Jaggesh), ಶಿವಣ್ಣ ಅವರು ಒಂದು ನಿರ್ಧಾರ ಕೈಗೊಂಡು ಕಾವೇರಿ ಹೋರಾಟಕ್ಕೆ ಕರೆ ನೀಡಿದರೆ, ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತೇವೆ. ಇದನ್ನೂ ಓದಿ:‘ಗಟ್ಟಿಮೇಳ’ ಖ್ಯಾತಿಯ ರಕ್ಷ್ ರಾಮ್ ಹೊಸ ಸಿನಿಮಾಗೆ ಇಂದು ಮುಹೂರ್ತ

ಕಾವೇರಿ ಸಮಸ್ಯೆ ಇವಾಗಿನಿಂದ ಇರೋದಲ್ಲ, ಸುಮಾರು ವರ್ಷಗಳಿಂದ ಇದೆ. ಚಿತ್ರರಂಗದ ಹಿರಿಯ ನಟರಿದ್ದಾರೆ. ಅವರು ನಿರ್ಧರಿಸಲಿ ನಾವು ಜೊತೆಗೆ ಇರುತ್ತೇವೆ ಎಂದು ಧ್ರುವ ಮಾತನಾಡಿದ್ದಾರೆ. ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಕೂಡ ಸದಾ ಇದೆ ಎಂದು ನಟ ಸಹಮತ ಸೂಚಿಸಿದ್ದಾರೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್