ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ: ಧ್ರುವ ಸರ್ಜಾ ಹೇಳಿದ್ಯಾರಿಗೆ?

Public TV
1 Min Read

– ಭಾರತದಲ್ಲಿ ಇರುವವರು ದೇಶವನ್ನು ಪ್ರೀತಿಸಿ.. ಇಲ್ಲದಿದ್ರೆ ನಿಮ್ಮನ್ನೂ ಹೊರಹಾಕುತ್ತೇವೆಂದ ನಟ

ಭಾರತ ಸೇನೆಯ ‘ಆಪರೇಷನ್ ಸಿಂಧೂರ’ (Operation Sindoora) ಕಾರ್ಯಾಚರಣೆಯ ಬಗ್ಗೆ ಧ್ರುವ ಸರ್ಜಾ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭಾರತ ದೇಶದಲ್ಲಿರುವ ಹಿತಶತ್ರುಗಳಿಗೆ ನಟ ಎಚ್ಚರಿಕೆ ನೀಡಿದ್ದಾರೆ. ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ ಆಗುತ್ತೀರಿ. ಭಾರತಕ್ಕೆ ದ್ರೋಹಿಗಳಾಗಬೇಡಿ ಎಂದು ಧ್ರುವ ಸರ್ಜಾ (Dhruva Sarja) ಹೇಳಿದ್ದಾರೆ. ಇದನ್ನೂ ಓದಿ:ಸಿಂಧೂರ ಕೇವಲ ಸಂಪ್ರದಾಯವಲ್ಲ, ಅದು ಸಂಕೇತ- ಭಾರತೀಯ ಸೇನೆ ಕೊಂಡಾಡಿದ ಮೋಹನ್ ಲಾಲ್

ಭಾರತದಲ್ಲಿ ವಾಸಿಸುವ ಪಾಕಿಸ್ತಾನಿಗರೇ, ನೀವು ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ ಆಗುತ್ತೀರಿ. ಭಾರತಕ್ಕೆ ದ್ರೋಹಿಗಳಾಗಬೇಡಿ. ಭಾರತದಲ್ಲಿರುವವರು ಮೊದಲು ಭಾರತವನ್ನು ನಂಬಿ, ನೀವು ವಾಸಿಸುವ ದೇಶವನ್ನು ಪ್ರೀತಿಸಿ ಎಂದು ನಟ ತಿಳಿಸಿದ್ದಾರೆ. ಇಲ್ಲದಿದ್ದರೆ ಶೀಘ್ರದಲ್ಲೇ ನಾವು ನಿಮ್ಮನ್ನು ಭಾರತದಿಂದ ಹೊರಹಾಕುತ್ತೇವೆ ಎಂದು ಧ್ರುವ ಸರ್ಜಾ ಎಚ್ಚರಿಕೆ ನೀಡಿದ್ದಾರೆ. ಜೈ ಹಿಂದ್, ಜೈ ಶ್ರೀರಾಮ್, ಜೈ ಹನುಮಾನ್ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಆಪರೇಷನ್ ಸಿಂಧೂರ ಕೇವಲ ಒಂದು ಧ್ಯೇಯವಲ್ಲ ಇದು ಪವಿತ್ರ ಪ್ರತಿಜ್ಞೆ: ಸುದೀಪ್

ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ 26 ಮಂದಿ ಬಲಿಯಾಗಿದ್ದರು. ಅದಕ್ಕೆ ಪ್ರತೀಕಾರವಾಗಿ ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.

Share This Article