ಹುಟ್ಟುಹಬ್ಬದಂದೇ ಅಭಿಮಾನಿಗಳಿಗೆ ಮದ್ವೆಯ ಗುಡ್ ನ್ಯೂಸ್ ಕೊಟ್ಟ ಧ್ರುವ ಸರ್ಜಾ

Public TV
1 Min Read

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 29ನೇ ವಸಂತಕ್ಕೆ ಕಾಲಿಟ್ಟಿದ್ದು, ಸಾವಿರಾರು ಅಭಿಮಾನಿಗಳ ಜೊತೆ ಧ್ರುವ ಸರ್ಜಾ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ತಮ್ಮ ಮದುವೆಯ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಧ್ರುವ ಸರ್ಜಾ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಧ್ರುವ ಸರ್ಜಾ, ಪ್ರೀತಿ ಏನು ಆಗಿಲ್ಲ. ಆದರೆ ಇನ್ನು ಒಂದು ವರ್ಷದಲ್ಲಿ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.

ಅಣ್ಣ ಚಿರು ಮದುವೆ ಆದ ಮೇಲೆ ನಾನೂ ಮದುವೆ ಆಗುತ್ತೀನಿ ಅಂತ ಈ ಹಿಂದೆ ಹೇಳಿದ್ದರು. ಬಹುಶಃ ಈಗಾಗಲೇ ಹುಡುಗಿಯನ್ನೂ ಹುಡುಕಿಕೊಂಡಿರಬಹದು ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಯಾಕೆಂದರೆ ಮುಂದಿನ ವರ್ಷದೊಳಗೆ ಮದುವೆಯಾಗುತ್ತೀನಿ ಅಂತ ಧ್ರುವ ಹೇಳಿದ್ದಾರೆ. ಧ್ರುವ ವರಿಸುವ ಹುಡುಗಿ ಸಿನಿಮಾದವರೇನಾ ಅನ್ನೋ ಅನುಮಾನ ಸೃಷ್ಟಿಯಾಗಿದೆ. ಆದರೆ ಮದುವೆ ಬಗ್ಗೆ ಹೇಳಿರುವ ಧ್ರುವ ಹುಡುಗಿ ಯಾರು ಅನ್ನುವ ಗುಟ್ಟು ಮಾತ್ರ ಬಿಟ್ಟುಕೊಟ್ಟಿಲ್ಲ.

ಹುಟ್ಟುಹಬ್ಬದ ಖುಷಿಯಲ್ಲಿರುವ ಧ್ರುವ ಮದುವೆ ಸೀಕ್ರೆಟ್‍ನ್ನ ಬಿಚ್ಚಿದ್ದು, ಧ್ರುವ ಫ್ಯಾನ್ಸ್ ‘ಪೊಗರು’ ಸಿನಿಮಾ ನೋಡುವುದಕ್ಕೆ ಕುತೂಹಲ ಭರಿತರಾಗಿದ್ದಾರೆ. ಜೊತೆಗೆ ಧ್ರುವ ಮದುವೆಯಾಗುವ ಹುಡುಗಿ ಯಾರು ಅನ್ನೋದನ್ನ ತಿಳಿದುಕೊಳ್ಳುವ ಕಾತುರದಲ್ಲಿದ್ದಾರೆ.

ಸದ್ಯಕ್ಕೆ ಧ್ರುವ ಸರ್ಜಾ ‘ಪೊಗರು’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದಲ್ಲಿ ಎರಡು ರೀತಿಯ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧ್ರುವ ಲುಕ್ ಸೀಕ್ರೆಟ್‍ ನ್ನ ಹಾಗೇ ಉಳಿಸಿಕೊಂಡಿದ್ದ ಚಿತ್ರತಂಡ ಒಂದೆರಡು ಪೋಸ್ಟರ್ ಗಳನ್ನ ಮಾತ್ರವೇ ರಿಲೀಸ್ ಮಾಡಿತ್ತು. ಇನ್ನು ಹುಟ್ಟುಹಬ್ಬದ ವಿಶೇಷವಾಗಿ ಚಂದನ್ ಶೆಟ್ಟಿ ಹಾಡಿರುವ `ಪೊಗರು’ ಚಿತ್ರದ ಹಾಡೊಂದರ ಟೀಸರ್ ನ ರಿಲೀಸ್ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?time_continue=1&v=Jm_tlt8vOgc

Share This Article
Leave a Comment

Leave a Reply

Your email address will not be published. Required fields are marked *