ಯಾರೂ ಜೈಲಿನ ಬಳಿ ಬರಬೇಡಿ: ಅಭಿಮಾನಿಗಳಿಗೆ ನಟ ದರ್ಶನ್‌ ಮನವಿ

Public TV
1 Min Read

ಬೆಂಗಳೂರು: ಯಾರು ಕೂಡ ಜೈಲಿನ ಬಳಿ ಬರಬೇಡಿ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ (Darshan), ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಜೈಲಿನಿಂದಲೇ ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ‘ಅಭಿಮಾನಿಗಳು ಯಾರೂ ಜೈಲಿಗೆ ಬರಬೇಡಿ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಹೀಗಾಗಿ ಯಾರು ಕೂಡ ಜೈಲಿನ ಬಳಿ ಬರಬೇಡಿ’ ಎಂದು ದರ್ಶನ್‌ ಕೇಳಿಕೊಂಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ – ದರ್ಶನ್‌ಗೆ ಜಾಮೀನು ಸಿಗೋದು ಅನುಮಾನ

ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು, ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು ಬೇಡ. ಅದರಲ್ಲೂ ನಿನ್ನೆ ವಿಶೇಷಚೇತನ ಯುವತಿ ಸೌಮ್ಯಾ ಭೇಟಿಗೆ ಆಗಮಿಸಿದ್ದ ಬಗ್ಗೆ ಬೇಸರವಿದೆ ಎಂದು ತಿಳಿಸಿದ್ದಾರೆ.

ಜೈಲಿನ ಬಳಿ ಬಂದು ದರ್ಶನ್ ಭೇಟಿಗೆ ಸೌಮ್ಯಾ ಹಠ ಮಾಡಿದ್ದರು. ಅನ್ನ, ಆಹಾರ ಸೇವಿಸದೇ ಹಠ ಹಿಡಿದಿದ್ದರು. ನಟ ದರ್ಶನ್ ‌ಕೊಡಿಸಿದ್ದ ಆಟೋದಲ್ಲಿ ಪೋಷಕರ ಜೊತೆ ಆಗಮಿಸಿದ್ದರು. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್‌ – ವಿಕಿಪೀಡಿಯದಲ್ಲಿ ಪೇಜ್‌ ಓಪನ್‌

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯ ಪರಪ್ಪನ ಅಗ್ರಹಾರದಲ್ಲಿ ಅವರನ್ನು ಇರಿಸಲಾಗಿದೆ. ನಟ ದರ್ಶನ್‌ ಸೆರೆವಾಸ 7ನೇ ದಿನಕ್ಕೆ ಕಾಲಿಟ್ಟಿದೆ.

ರಾತ್ರಿ ಮುದ್ದೆ, ಅನ್ನ, ಸಾಂಬಾರ್, ಚಪಾತಿ ಮತ್ತು ಮಜ್ಜಿಗೆ ಸೇವಿಸಿ ತಡವಾಗಿ ದರ್ಶನ್‌ ನಿದ್ರೆಗೆ ಜಾರಿದ್ದರು. ಮುಂಜಾನೆ 6 ಗಂಟೆ ಸುಮಾರಿಗೆ ಎಚ್ಚರವಾಯಿತು. ಎಂದಿನಂತೆ ಬಿಸಿನೀರು ಸೇವಿಸಿದರು. ನಂತರ ಕೆಲಹೊತ್ತು ಕೊಠಡಿಯಲ್ಲಿ ವಾಕಿಂಗ್‌ ಮಾಡಿದರು. ಇದನ್ನೂ ಓದಿ: ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಕೇಸ್ – ಆರೋಪಿ ಅರುಣ್ ಚೌಗಲೆ ಜಾಮೀನು ಅರ್ಜಿ ವಜಾ

Share This Article