ದರ್ಶನ್ ಜೈಲಲ್ಲಿರೋದಕ್ಕೆ ಬರ್ತ್‌ಡೇ ಸೆಲೆಬ್ರೇಷನ್ ಬೇಡವೆಂದ ಧನ್ವೀರ್

By
1 Min Read

ರ್ಶನ್ (Darshan) ಜೊತೆ ಸದಾ ನಿಂತವರು (Actor Dhanveer) ನಟ ಧನ್ವೀರ್. ಯಾವುದೇ ಸಂಬಂಧ ಇಲ್ಲದಿದ್ದರೂ ಸಹೋದರನಂತೆ ಕಷ್ಟ ಸುಖದಲ್ಲಿ ಜೊತೆಯಾಗಿದ್ದವರು ಅವರು. ಹೀಗಾಗಿ ದರ್ಶನ್ ಕೂಡ ಹೈಕೋರ್ಟ್‍ನಿಂದ ಬೇಲ್ ಪಡೆದು ಬಂದ ಬಳಿಕ ಧನ್ವೀರ್‌ಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದರು. ಈಗ ಪುನಃ ದರ್ಶನ್ ಜೈಲಿಗೆ ಹೋಗಿದ್ದಾರೆ. ಹೀಗಾಗಿ ಆಪ್ತ ಜೈಲಲ್ಲಿರುವ ಕಾರಣಕ್ಕೆ ಧನ್ವೀರ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ.

ಈ ಬಾರಿ ಸೆ.8ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿಲ್ಲ ಮನೆ ಹತ್ತಿರ ಯಾರೂ ಬರಬೇಡಿ ಎಂದು ಧನ್ವೀರ್ ಅಭಿಮಾನಿಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ಧನ್ವೀರ್ ಕಾರಣಾಂತರಗಳಿಂದ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ತಾವು ಇದ್ದಲ್ಲೇ ಹರಸಿ ಹಾರೈಸಿ, ಮುಂದಿನ ವರ್ಷ ಸಿಗುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.

ಪ್ರತಿ ಬಾರಿ ದರ್ಶನ್ ಕೋರ್ಟ್ ಕಛೇರಿ ಸುತ್ತುವಾಗೆಲ್ಲ, ದೇವಸ್ಥಾನಕ್ಕೆ ಹೋಗುವಾಗೆಲ್ಲ ಜೊತೆ ನಿಂತವರು ಧನ್ವೀರ್. ದರ್ಶನ್ ಕಷ್ಟಕ್ಕೆ ಜೊತೆಯಾಗಿ ಹೆಜ್ಜೆ ಹಾಕ್ತಿರುವ ಧನ್ವೀರ್, ದರ್ಶನ್ ಜೈಲಲ್ಲಿರೋ ಕಾರಣಕ್ಕೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ತಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ಅಶ್ಲೀಲ ಕಾಮೆಂಟ್ ಕೇಸ್‌ – ಪೊಲೀಸರ ತನಿಖೆಗೆ ವಿಜಯಲಕ್ಷ್ಮಿ ನಿರಾಸಕ್ತಿ

Share This Article