ರೊಮ್ಯಾಂಟಿಕ್ ಸಿನಿಮಾಗಳಿಗೆ ಗುಡ್ ಬೈ ಹೇಳಿದ ಧನುಷ್

Public TV
2 Min Read

ಕಾಲಿವುಡ್ (Kollywood) ಹೀರೋ ಧನುಷ್ (Dhanush) ಅವರು ಈಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡ್ತಿದ್ದಾರೆ. ಸಿನಿಮಾ-ವೈಯಕ್ತಿಕ ಎರಡು ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ. ಇದರ ನಡುವೆ ಮುಂದಿನ ಸಿನಿಮಾ ಬಗ್ಗೆ ಲುಕ್ ರಿವೀಲ್ ಮಾಡಲಾಗಿದೆ. ʼD 50′ ಸಿನಿಮಾ ಲುಕ್ ರಿವೀಲ್ ಆಗಿದೆ. ಜೊತೆಗೆ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಧನುಷ್ ಪ್ರತಿಕ್ರಿಯೆ ನೀಡಿದ್ದಾರೆ.

ಧನುಷ್ ಅವರು ಹಿಂದಿ, ತಮಿಳು, ಹಾಲಿವುಡ್ ಸಿನಿಮಾರಂಗದಲ್ಲಿ ಮಿಂಚ್ತಿದ್ದಾರೆ. ಪಾತ್ರ ಯಾವುದೇ ಇರಲಿ, ಆ ಪಾತ್ರವೇ ತಾವಾಗಿ ನಟಿಸುತ್ತಾರೆ. ಅವರ ಸಹಜ ಅಭಿನಯಕ್ಕೆ ಸೋಲದೇ ಇರೋರು ಯಾರು ಇಲ್ಲ. ವೃತ್ತಿರಂಗದಲ್ಲಿ ಮಿಂಚಿದ್ರು. ವೈಯಕ್ತಿಕ ಬದುಕಿನಲ್ಲಿ ಅವರು ಮುಗ್ಗರಿಸಿದ್ದರು. ರಜನಿಕಾಂತ್ (Rajanikanth) ಮಗಳು ಐಶ್ವರ್ಯ (Aishwarya) ಜೊತೆ ಡಿವೋರ್ಸ್ ಪಡೆದುಕೊಂಡು ಒಂಟಿಯಾಗಿ ಧನುಷ್ ಜೀವನ ಸಾಗಿಸುತ್ತಿದ್ದಾರೆ. ಸಿನಿಮಾಗಾಗಿಯೇ ತಮ್ಮ ಸಮಯವನ್ನ ಮೀಸಲಿಡುತ್ತಿದ್ದಾರೆ. ಇದನ್ನೂ ಓದಿ:5 ವರ್ಷಗಳ ನಂತರ ಭಾರತಕ್ಕೆ ಕಾಲಿಟ್ಟ ‘ದಿ ವಿಲನ್‌’ ಚಿತ್ರದ ನಾಯಕಿ

ಧನುಷ್- ಎ.ಆರ್ ರೆಹಮಾನ್ ಅವರು ಇತ್ತೀಚಿಗೆ ಇನ್ಸ್ಟಾಗ್ರಾಂ ಲೈವ್ ಬಂದಿದ್ದರು. 2013ರಲ್ಲಿ ರಿಲೀಸ್ ಆದ ‘ಮರಿಯಾನ್’ (Maryan) ಚಿತ್ರಕ್ಕೆ 10 ವರ್ಷಗಳ ಸಂಭ್ರಮವಾಗಿದ್ದು, ಈ ಖುಷಿಯನ್ನು ಲೈವ್ ಮೂಲಕ ಧನುಷ್- ರೆಹಮಾನ್ ಆಚರಿಸಿಕೊಂಡಿದ್ದರು. ಧನುಷ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದ ಈ ಚಿತ್ರಕ್ಕೆ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಇಬ್ಬರೂ ಲೈವ್ ಬಂದು ಮರಿಯಾನ್ ಸಿನಿಮಾದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಧನುಷ್ ಅವರ ಲುಕ್ ಎಲ್ಲರ ಗಮನ ಸೆಳೆದಿದೆ.

ಇಷ್ಟೇ ಅಲ್ಲ, ‘ಮರಿಯಾನ್’ ಸೇರಿದಂತೆ ಸಾಕಷ್ಟು ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸಿರೋ ಧನುಷ್‌ಗೆ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುವಂತೆ ಕೇಳಲಾಗಿದೆ. ಅದಕ್ಕೆ ಅವರು ನಗುತ್ತಲೇ ಉತ್ತರಿಸಿದ್ದಾರೆ. ನನಗೆ ಈಗ 40 ವರ್ಷವಾಗಿದೆ. ಮುಂದೆ ರೊಮ್ಯಾಂಟಿಕ್ ಕಥೆಗಳಲ್ಲಿ ನಟಿಸುವುದಿಲ್ಲ. ಮುಂದಿನ ಪೀಳಿಗೆಯ ನಟರು ಇಂತಹ ಸಿನಿಮಾಗಳನ್ನ ಮಾಡಲಿ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ. ಈ ಮೂಲಕ ರೊಮ್ಯಾಂಟಿಕ್ ಚಿತ್ರಗಳಿಗೆ ನಟ ಗುಡ್ ಬೈ ಹೇಳಿದ್ದಾರೆ.

ಧನುಷ್ ಅವರು ಇತ್ತೀಚೆಗೆ ತಿರುಪತಿಗೆ ತೆರಳಿದ್ದರು. ಈ ವೇಳೆ ಬಾಲ್ಡ್ ಲುಕ್‌ನಲ್ಲಿ ಅವರು ಗಮನ ಸೆಳೆದಿದ್ದರು. ಇದು ಅವರ ಮುಂದಿನ ಸಿನಿಮಾ ಲುಕ್ ಎಂದೇ ಎಲ್ಲರೂ ಭಾವಿಸಿದ್ದಾರೆ. ಆದರೆ, ಈ ಬಗ್ಗೆ ಅವರ ಕಡೆಯಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಈಗ ಅವರು ಲೈವ್ ಬಂದ ಸಂದರ್ಭದಲ್ಲಿ ತಲೆಗೆ ಟೋಪಿ ಹಾಕಿದ್ದರು. ಸದ್ಯ ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡಿದೆ. ಇತ್ತೀಚಿಗೆ ಅವರು ʼD 50′ ಸಿನಿಮಾದ ಲುಕ್ ರಿವೀಲ್ ಆಗಿತ್ತು. ಅದರಲ್ಲಿ ಬಾಲ್ಡ್ ಲುಕ್‌ನಲ್ಲಿ ನಟ ಇಂಪ್ರೆಸ್ ಮಾಡಿದ್ದರು. ಒಟ್ನಲ್ಲಿ ಸಿನಿಮಾ ಬಗ್ಗೆ ಯಾವುದೇ ಸುಳಿವು ನೀಡದೇ, ಸಿನಿಮಾ ಅನೌನ್ಸ್‌ಮೆಂಟ್ ಮೂಲಕ ಗುಡ್ ನ್ಯೂಸ್ ಕೊಡ್ತಾರಾ ಕಾಯಬೇಕಿದೆ.

ʼD 50′ ಸಿನಿಮಾ ಜೊತೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಧನುಷ್ ಕೈಯಲ್ಲಿದೆ. ಈ ಚಿತ್ರದಲ್ಲಿ ಧನುಷ್ ಜೊತೆ ಕನ್ನಡದ ಹೀರೋ ಶಿವರಾಜ್‌ಕುಮಾರ್ ನಟಿಸಿದ್ದಾರೆ. ಈ ಎರಡು ಸಿನಿಮಾಗಳ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್